Kalpavriksha KamadhenuValuable information on Hindu Festivals, Slokas, Prayers, Dasara Songs, Vegetarian cooking, and many other relevant topics can be found here.
ಶ್ರೀಪಾದರಾಜರ ಜನ್ಮಸ್ಥಳ ಚನ್ನಪಟ್ಟಣ ತಾಲೂಕಿನ ಅಬ್ಬೂರು. ಅದು ಬ್ರಹ್ಮಣ್ಯತೀರ್ಥರೆಂಬ ಯತಿಗಳ ಸ್ಥಳವೂ ಹೌದು. ಶ್ರೀಪಾದರಾಜರ ಪೂರ್ವಾಶ್ರಮದ ಹೆಸರು ಲಕ್ಷ್ಮೀನಾರಾಯಣ ಎಂಬುದು.
ಶೇಷಗಿರಿಯಪ್ಪ ಮತ್ತು ಗಿರಿಯಮ್ಮ ತಂದೆತಾಯಿಗಳು, ಲಕ್ಷ್ಮೀನಾರಾಯಣ ಚಿಕ್ಕವನಿದ್ದಾಗ ಹಸುಗಳನ್ನು ಮೇಯಿಸುತ್ತ ಊರ ಹೊರಗೆ ಓಡಾಡುತ್ತಿದ್ದ.
ಆ ವೇಳೆಗೆ ಅಲ್ಲಿ ಸ್ವರ್ಣವರ್ಣತೀರ್ಥರೆಂಬ ಯತಿಗಳ ಕಣ್ಣಿಗೆ ಬಿದ್ದ. ಶ್ರೀರಂಗಮ್‌ದಿಂದ ಬಂದಿದ್ದ ಅವರು ಅಬ್ಬೂರುನಲ್ಲಿದ್ದ ಶ್ರೀ ಪುರುಷೋತ್ತಮ ತೀರ್ಥರನ್ನು ಕಾಣಬಯಸಿದ್ದರು. ತಮ್ಮ ಕಣ್ಣಿಗೆ ಬಿದ್ದ ಲಕ್ಷ್ಮೀನಾರಾಯಣನ ಮುಖದ ತೇಜಸ್ಸು, ವಾಕ್‌ಚತುರತೆಗಳನ್ನು ಮನಗಂಡು, ಶ್ರೀ ಪುರುಷೋತ್ತಮತೀರ್ಥರ ಮಧ್ಯಸ್ಥಿಕೆಯಿಂದ ತಂದೆತಾಯಿಗಳನ್ನೊಪ್ಪಿಸಿ ಅವನನ್ನು ಶ್ರೀರಂಗಮ್‌ಗೆ ಕರೆದೊಯ್ದರು.
ಉಪನಯನ ಮಾಡಿಸಿ ಸನ್ಯಾಸ ದೀಕ್ಷೆಯನ್ನಿತ್ತರು. ತಮ್ಮಲ್ಲಿಯೇ ಕೆಲಕಾಲ ವಿದ್ಯಾಭ್ಯಾಸ ಮಾಡಿಸಿ, ಹೆಚ್ಚಿನ ಅಧ್ಯಯನಕ್ಕಾಗಿ ಶ್ರೀ ವಿಭುದೇಂದ್ರ- ತೀರ್ಥರಲ್ಲಿಗೆ (ಈಗಿನ ಶ್ರೀ ರಾಘವೇಂದ್ರ ಮಠದ ಆರಂಭಪೂರ್ವದ ಶ್ರೀಗಳವರು) ಕಳುಹಿದರು. ಪರಿಣಾಮವಾಗಿ ಲಕ್ಷ್ಮೀನಾರಾಯಣ ತೀರ್ಥರು ಬಲು ಬೇಗ ಸಕಲ ಶಾಸ್ತ್ರಪಾರಂಗತರಾದರು.
ಒಮ್ಮೆ ಕೊಪ ಎಂಬಲ್ಲಿ ಶ್ರೀ ವಿಭುದೇಂದ್ರರು ಉತ್ತರಾದಿಮಠದ ಶ್ರೀ ರಘುನಾಥತೀರ್ಥರನ್ನು ಸಂಧಿಸಿದಾಗ, ಅವರೆದುರು ತಮ್ಮ ಈ ನೆಚ್ಚಿನ ಶಿಷ್ಯನ ಪಾಂಡಿತ್ಯವನ್ನು ತೋರ್ಪಡಿಸುವಂತೆ ವ್ಯವಸ್ಥೆ ಮಾಡಿದರು.
ಅದರಿಂದ ಸುಪ್ರೀತರಾದ ಶ್ರೀ ರಘುನಾಥತೀರ್ಥರು ಮನವಾರೆ ಹೊಗಳಿದಾಗ ಲಕ್ಷ್ಮೀ-ನಾರಾಯಣತೀರ್ಥರು “ತಮ್ಮಂಥ ಶ್ರೀಪಾದರ ಹೊಗಳಿಕೆಗೆ ಪಾತ್ರನಾದ ನಾನು ನಿಜವಾಗಿ ಧನ್ಯನು” ಎಂದರಂತೆ, ಆಗ ಶ್ರೀಗಳವರು “ನಾವು ಶ್ರೀಪಾದರಾದರೆ ನೀವೋ ಶ್ರೀಪಾದ ರಾಜರು” ಎಂದು ಉದ್ಗಾರವೆತ್ತಿದರು. ಅಂದಿನಿಂದ ‘ಶ್ರೀಪಾದರಾಜರು’ ಎಂಬ ನಾಮಧೇಯವೇ ರೂಢಿಯಲ್ಲಿ ಬಂದಿತು.
Sripadaraja’s birth place is Abbur in Channapatnam taluk. It is also the place of Yatigalu called Brahmanyatirtharu.
The name of Sripadaraja’s Purvashram is Lakshminarayana. Seshagiriappa and Giriamma were his parents, Lakshminarayan used to roam outside the town tending cows when he was young.
At that time Svarnavarnatirtha yatigalu saw him. Coming from Srirangam, he wanted to visit Sri Purushottama Theertha at Abbur. Seeing the brilliance of Lakshminarayana’s face and eloquence, they took him to Srirangam through the intervention of Sri Purushottamathirtha. After doing Upanayana, he was given sainthood. After studying on his own for some time, he left for further study from Sri Vibhudendra-Theertha (the pre-srigalalu of the present Sri Raghavendra Math). As a result, Lakshminarayan Theertha became well versed in all the scriptures very quickly.
Once at Koppa, Sri Vibhudendra met Sri Raghunathtirtha of Uttaradimatha, who arranged for his favorite disciple to demonstrate his mastery. When Sri Raghunathatirtha, who was pleased with that, praised Manavare, Lakshmi-Narayanatirtha said, “I am truly blessed to have been praised by such a Sripada“, then the Raghunathatirtha Swamigalu exclaimed, “If I am Sripada, then you are the kings of Sripada – Sripada Rajaru“. Since then, the name ‘Sripadarajaru‘ became the name of Lakshminarayana .
Yet another amazing composition by Sri Sreepada Rajaru. I truly can’t even comprehend how they were able to write so many amazing compositions which completely mesmerizes you.
Composer : Sri Sreepada Rajaru
Ankita : Ranga Vittala
ಕುರುಡು ನಾಯಿ ಸಂತೆಗೆ ಬಂತಂತೆ || PA || ಅದು ಯಾತಕೆ (ಯಾಕೆ) ಬಂತೋ || A PA ||
ಖಂಡ ಸಕ್ಕರೆ ಹಿತವಿಲ್ಲವಂತೆ ಖಂಡ ಎಲುಬು ಕಡಿದಿತಂತೆ ಹೆಂಡಿರ ಮಕ್ಕಳ ನೆಚ್ಚಿತಂತೆ ಕೊಂಡು ಹೋಗುವಾಗ ಯಾರಿಲ್ಲವಂತೆ || 1 ||
My father and I both together tried a tune for this song.He was in no mood to record at that time, so I recorded late at night. The meaning of this is just truly apt fo what we see in our day to day life. Sri Sreepada Rajaru asks what’s the benefit of having a full moon in a forest.
Composer : Sri Sreepada Rajaru
Ankita : Ranga Vittala
ಕಾಡ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು || PA ||
ಸತ್ಯಕ್ಕೆ ಧರ್ಮನು ಲೆತ್ತವನಾಡಲು ಅರ್ಥ ಭಾಂಡರವೆಲ್ಲವ ಸೋತು ಮತ್ತೆ ವಿರಾಟರಾಯನ ಮನೆಯಲ್ಲಿ ತೊತ್ತಾದಳು ದ್ರೌಪದಿ ಒಂದು ವರುಷ || 1 ||
Recent Comments