This song composed by Sri Purandara Dasaru is like traveling all over India and visiting all holy places. It is called Taraka Mantra in my book. Very easy to recite. Its like traveling all directions in India, North, South, East and West.
ನಾರಾಯಣ ನರಸಿಂಹ ವೇದವ್ಯಾಸ ಪಾಂಡುರಂಗ ಸೀತಾರಾಮ ಕೃಷ್ಣ ಶ್ರೀನಿವಾಸ || ಏಳು ದಿವಸದಲ್ಲಿ ಏಳು ರೂಪದಿಂದ | ಏಳು ಬೆಟ್ಟದೊಡೆಯನ ಮನಮುಟ್ಟಿ ಭಜಿಸಿರೋ || pa ll
ಶ್ರೀ ರಂಗ ಕ್ಷೇತ್ರವೇ ಶ್ವೇತದ್ವೀಪ I ಶ್ರೀ ಬದರಿಕ್ಷೇತ್ರವೇ ಅನಂತಾಸನಾ I ತಿರುಮಲ ಕ್ಷೇತ್ರವಿದು ಭೂ ವೈಕುಂಠ ಹರಿದಾಸರ ಮಂದಿರವೆ ಪಂಡರಪುರ ll 1 ll
ಪೂರ್ವ ದಿಕ್ಕಿನಲ್ಲಿ ಪೂರಿ ಜಗನ್ನಾಥ I ಪಶ್ಚಿಮ ದಿಕ್ಕಿನಲ್ಲಿ ದ್ವಾರಕಾನಾಥ | ದಕ್ಷಿಣ ದಿಕ್ಕಿನಲ್ಲಿ ಶ್ರೀರಾಮನಾಥ | ಉತ್ತರ ದಿಕ್ಕಿನಲ್ಲಿ ಬದರಿ ಕ್ಷೇತ್ರ ll 2 ll
ಹನುಮ ಭೀಮ ಮಾಧ್ವರೆಂಬ ನಾಮ ಸಾಧನ | ಸಾಧನ ಮಾಡಿಕೊಳ್ಳಿರೋ ನಿಮ್ಮ ಜೀವನ | ನಿರಂತರ ಭಜಿಸಿರೋ ಹರೇ ಶ್ರೀನಿವಾಸ | ತಾರಕ ಮಂತ್ರವಿದು ಪುರಂದರ ವಿಠ್ಠಲ ll 3 ll
Last but not the least, Laali song on Lord Rama. Once again from my book, composed by Shree Purandara Dasaru. Hope you all have a great Rama Navami. Lord Rama bless us ALL.
On my twitter feed, I saw Shri Rama Dwadasha Nama Stotra posted by @bhargavasarma. They have posted the lyrics in Kannada and Sanskrit. Also, they mention “Phala-sruthi of this beautiful and sacred stothra (Brahmanda Purana) says that “ArdhaRaathre jape nithyam sarva-dukkha vinaasavaan” even if it is recited daily at midnight one will get relieved from agony and sorrow;”
Thanks so much Sir for the amazing lyrics. All credit to you.
On the occasion of Rama Navami, let us all recite this Stotra. Not just today, but everyday so Lord Rama removes all our agony and sorrow.
As I was recording the song, I could imagine Mother Kausalya carrying Child Rama and showing him the moon. Amazing song by one of our great Kanaka Dasaru. The songs written by our great Dasaru’s take us to the imagination of how things might have happened. I could in my mind see the whole song play-out in front of me. Amazing song. My mind was filled with joy.
Mr. Lakshman used to tirelessly provide lyrics to anyone who asked. This is one such where he had provided the lyrics in both Kannada and English. This was in 2011. How time flies. And how long this blog has been around, surprises me.
Anyway, I was going through all the lyrics I had posted on Lord Rama and trying to learn the tunes. My small seva to Lord Rama.
The lyrics for this amazing song was posted in April 2013. Provided by Ms. Bhavana Damle my friend. However, the video from youtube was unavailable.
My goal now to learn as many songs as possible before major festivals and post the same. So, I tried many tunes myself and came up with the tune which I myself liked very much.
Rama Navami falls on the ninth day(Navami) of the Hindu calendar year during the Chaitra Masa Suklapaksha Navami. It is a celebration of the birthday of the Lord Rama. Rama Navami usually occurs in the months of March and April. This year it is on April 10th 2022 in USA and India.
As always, here are some very popular slokas to say on that day.
May Shri Lord Rama bless you all.
1. Rama Stotra in the Vishnu Sahasranama, say this sloka 3 times as mentioned in the sahasranama.
Sri Rama Rama Rameti Rame Raame Manorame
Sahasra Nama Tat Tulyam Rama Nama Varanane
Sri Rama Nama Varanane Iti
2. Next one is what we learnt when we were all young.
Shree Vijaya Dasaru has composed almost 25000 + devranamas, and suldais. He is also known as Suldai Dasaru. Since Rama Navami is approaching thought of posting this Rama Nama composed by Dasaru.
In the original lyrics there is just Rama Rama twice, but the video I heard had its 4 times.
ಕಾಶಿಯ ಹಾದಿಯಲ್ಲಿ ಕೇಶವನಿದ್ದಾನೆ – ರಾಮ ರಾಮ ರಾಮ ರಾಮ ಕೇಶವನ ದಯದಿಂದ ಕಾಶಿಯಾತ್ರೆಯ ಕಂಡೆ – ರಾಮ ರಾಮ ರಾಮ ರಾಮ
ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ – ರಾಮ ರಾಮ ರಾಮ ರಾಮ ಬದರಿಕಾಶ್ರಮ ಕಂಡೆ ನಾರಾಯಣ ದಯದಿಂದ – ರಾಮ ರಾಮ ರಾಮ ರಾಮ
ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ – ರಾಮ ರಾಮ ರಾಮ ರಾಮ ಪ್ರಯಾಗ ನದಿ ಮಿಂದೆ ಮಾಧವನ ದಯದಿ – ರಾಮ ರಾಮ ರಾಮ ರಾಮ
ಗೋಕುಲದಲ್ಲಿ ಶ್ರೀಗೋವಿಂದನಿದ್ದಾನೆ – ರಾಮ ರಾಮ ರಾಮ ರಾಮ ಗೋಕುಲವನು ಕಂಡೆ ಗೋವಿಂದನ ದಯದಿ – ರಾಮ ರಾಮ ರಾಮ ರಾಮ
ವಿಷ್ಣು ತೀರ್ಥದಲ್ಲಿ ಶ್ರೀವಿಷ್ಣುವಿದ್ದಾನೆ – ರಾಮ ರಾಮ ರಾಮ ರಾಮ ವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ – ರಾಮ ರಾಮ ರಾಮ ರಾಮ
ಮತ್ಸ್ಯ ತೀರ್ಥದಲ್ಲಿ ಮಧುಸೂಧನನಿದ್ದಾನೆ – ರಾಮ ರಾಮ ರಾಮ ರಾಮ ಮತ್ಸ್ಯ ತೀರ್ಥದಿ ಮಿಂದೆ ಮಧುಸೂದನನ ದಯದಿ – ರಾಮ ರಾಮ ರಾಮ ರಾಮ
ತ್ರೀವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ – ರಾಮ ರಾಮ ರಾಮ ರಾಮ ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೇ – ರಾಮ ರಾಮ ರಾಮ ರಾಮ
ವಾಮನ ನಮ್ಮನು ಒಲಿದು ಕಾಯುವನಂತೆ – ರಾಮ ರಾಮ ರಾಮ ರಾಮ ವಾಮನನ ದಯದಿ ಭೂವೈಕುಂಠವ ಕಂಡೆ – ರಾಮ ರಾಮ ರಾಮ ರಾಮ
ಶ್ರೀಧರ ನಮ್ಮ ಹೃದಯದಲ್ಲಿದ್ದಾನೆ – ರಾಮ ರಾಮ ರಾಮ ರಾಮ ಶ್ರೀಧರನ ದಯದಿಂದ ಹೃದಯವಾಸನ ಕಂಡೆ – ರಾಮ ರಾಮ ರಾಮ ರಾಮ
ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ – ರಾಮ ರಾಮ ರಾಮ ರಾಮ ಹೃಷಿಕೇಶನ ದಯದಿ ಋಷಿಗಳಾಶ್ರಮಕಂಡೆ – ರಾಮ ರಾಮ ರಾಮ ರಾಮ
ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ – ರಾಮ ರಾಮ ರಾಮ ರಾಮ ಪದ್ಮನಾಭನ ದಯದಿ ಪದ್ಮನಾಭವ ಕಂಡೆ – ರಾಮ ರಾಮ ರಾಮ ರಾಮ
ಸಾಧುಬೃಂದದಲ್ಲಿ ದಾಮೋದರನಿದ್ದಾನೆ – ರಾಮ ರಾಮ ರಾಮ ರಾಮ ಸಾಧುಬೃಂದವ ಕಂಡೆ ದಾಮೋದರನ ದಯದಿ – ರಾಮ ರಾಮ ರಾಮ ರಾಮ
ಸಕಲ ತೀರ್ಥದಲ್ಲಿ ಸಂಕರ್ಷಣನಿದ್ದಾನೆ – ರಾಮ ರಾಮ ರಾಮ ರಾಮ ಸಂಕರ್ಷಣನ ದಯದಿ ಸಕಲತೀರ್ಥದಿ ಮಿಂದೆ – ರಾಮ ರಾಮ ರಾಮ ರಾಮ
ವಸುಧೇಯ ಮೇಲೆಲ್ಲ ವಾಸುದೇವನಿದ್ದಾನೆ – ರಾಮ ರಾಮ ರಾಮ ರಾಮ ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ – ರಾಮ ರಾಮ ರಾಮ ರಾಮ
ವೃದ್ಧ ಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ – ರಾಮ ರಾಮ ರಾಮ ರಾಮ ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಕಂಡೆ – ರಾಮ ರಾಮ ರಾಮ ರಾಮ
ಅಲಕನಂದನೆಯಲ್ಲಿ ಅನಿರುದ್ಧನಿದ್ದಾನೆ – ರಾಮ ರಾಮ ರಾಮ ರಾಮ ಅಲಕನಂದನೆ ಮಿಂದೆ ಅನಿರುದ್ಧನ ದಯದಿ – ರಾಮ ರಾಮ ರಾಮ ರಾಮ
ಪುಣ್ಯಕ್ಶೇತ್ರದಲ್ಲಿ ಪುರುಷೋತ್ತಮನಿದ್ದಾನೆ – ರಾಮ ರಾಮ ರಾಮ ರಾಮ ಪುಣ್ಯಕ್ಶೇತ್ರವ ಕಂಡೆ ಪುರುಷೋತ್ತಮನ ದಯದಿ – ರಾಮ ರಾಮ ರಾಮ ರಾಮ
ವೈತರಣಿಯಲ್ಲಿ ಅದೋಕ್ಷ್ನಜನಿದ್ದಾನೆ – ರಾಮ ರಾಮ ರಾಮ ರಾಮ ವೈತರಣಿ ದಾಟಿದೆ ಅಧೋಕ್ಷಜನ ದಯದಿ – ರಾಮ ರಾಮ ರಾಮ ರಾಮ
ನಿರ್ಮಲ ಗಂಗೇಲಿ ನರಸಿಂಹನಿದ್ದಾನೆ – ರಾಮ ರಾಮ ರಾಮ ರಾಮ ನಿರ್ಮಲ ಗಂಗೆಯ ಮಿಂದೆ ನರಸಿಂಹನ ದಯದಿ – ರಾಮ ರಾಮ ರಾಮ ರಾಮ
ವೈಕುಂಠ ಗಿರಿಯಲಿ ಅಚ್ಯುತನಿದ್ದಾನೆ – ರಾಮ ರಾಮ ರಾಮ ರಾಮ ವೈಕುಂಠ ಗಿರಿ ಕಂಡೆ ಅಚ್ಯುತನ ದಯದಿ – ರಾಮ ರಾಮ ರಾಮ ರಾಮ
ಜಾಹ್ನವಿಯಲ್ಲಿ ಜನಾರ್ದನನಿದ್ದಾನೆ – ರಾಮ ರಾಮ ರಾಮ ರಾಮ ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ – ರಾಮ ರಾಮ ರಾಮ ರಾಮ
ಉಡುಪಿ ಕ್ಶೇತ್ರದಲ್ಲಿ ಉಪೇಂದ್ರನಿದ್ದಾನೆ – ರಾಮ ರಾಮ ರಾಮ ರಾಮ ಉಡುಪಿ ಕ್ಷೇತ್ರವ ಕಂಡೆ ಉಪೇಂದ್ರನ ದಯದಿ – ರಾಮ ರಾಮ ರಾಮ ರಾಮ
ಹರಿಯುವ ನದಿಯಲ್ಲಿ ಶ್ರಿಹರಿಯಿದ್ದಾನೆ – ರಾಮ ರಾಮ ರಾಮ ರಾಮ ಹರಿಯ ದಯದಿಂದ ಹರಿವನದಿಯ ಮಿಂದೆ – ರಾಮ ರಾಮ ರಾಮ ರಾಮ
ಕೃಷ್ಣಾ ಯೆಂದರೆ ಕಷ್ಟವು ಪರಿಹಾರ – ರಾಮ ರಾಮ ರಾಮ ರಾಮ ಕೃಷ್ಣನ ದಯದಿ ಸಕಲ ಕಷ್ಟಬಿಟ್ಟಿತು – ರಾಮ ರಾಮ ರಾಮ ರಾಮ
ಭಕ್ತಿಲಿಪ್ಪತ್ನಾಲ್ಕು ನಾಮ ಪೇಳುವರಿಗೆ – ರಾಮ ರಾಮ ರಾಮ ರಾಮ ಭುಕ್ತಿ ಮುಕ್ತಿಯನೀವ ವಿಜಯ ವಿಠ್ಠಲರೇಯ – ರಾಮ ರಾಮ ರಾಮ ರಾಮ
Recent Comments