Archive for the ‘Tulasi Pooja’ Category

2022 Sri Tulasi Pooje Pictures

Hope you all had a wonderful Sri Tulasi Pooje at home. After almost two decades, we did the pooje at our apartment in North Carolina. Definitely missed our Maryland home where I would light rows of Deepa.

We also visited the SKV temple in the morning at 6 AM for Tulasi Ksheerabhdi Seva. Will share video. We also finished pooje at home and attended the evening Tulasi vivaha at the SKV temple. Will share video as well. It was just awesome witnessing the Pooje done by our Acharyaru Sri Narendra Udupa Avaru.

I am sharing a small video of our home pooje. Sri Tulasi Bless us all.

Sri Tulasi Devi References in Hari Kathamrutha Sara

During one of our Hari Kathamrutha Sara recital, the group had shared a PDF during Shri Narashima Jayanthi on references of Lord Narashima in Hari Kathamrutha Sara. I was thinking of searching Goddess Lakshmi and it just occurred to me to search for Tulasi as well.

From the book I have ( image all the way at the bottom), I searched for references of Tulasi Devi and compiled a list.

Recite the very first stanza before and after.

ಹರಿ ಕಥಾಮೃತ ಸಾರ ಗುರುಗಳ|
ಕರುಣದಿಂದಾಪನಿತು ಹೇಳುವೆ |
ಪರಮ ಭಗವದ್ಭಕ್ತರಿದನಾದರದಿ ಕೇಳುವದು ||

ಪ್ರತಿಮೆ ಸಾಲಗ್ರಾಮ ಗೋsಭ್ಯಾ | ಗತ ಅತಿಥಿ ಶ್ರೀತುಳಸಿ ಪಿಪ್ಪಲ |
ಯತಿ ವನಸ್ಥ ಗೃಹಸ್ಥ ವಟು ಯಜಮಾನ ಸ್ವಪರಜನ ||
ಪೃಥಿವಿ ಜಲ ಶಿಖಿ ಪವನ ತಾರಾ | ಪಥ ನವಗ್ರಹ ಯೋಗ ಕರಣ ಭ |
ತಿಥಿ ಸಿತಾಸಿತ ಪಕ್ಷ ಸಂಕ್ರಮ ಅವನಧಿಷ್ಠಾನ || 5 – 3 ||

ವಾರಿಯೊಳಗಿಪ್ಪತ್ತು ನಾಲಕು | ಮೂರೆರಡು ಸಾವಿರದ ಮೇಲೆ ಮು |
ನ್ನೂರು ಹದಿನೇಳೆನಿಪ ರೂಪವು ಶ್ರೀ ತುಳಸಿ ದಳದಿ ||
ನೂರ ಅರವ ತ್ತೊಂದು ಪುಷ್ಪದಿ | ಮೂರಧಿಕ ದಶದೀಪದೊಳು ನಾ |
ನೂರು ಮೂರು ಸುಮೂರ್ತಿಗಳು ಗಂಧದೊಳಗಿರುತಿಹವು|| 5 – 8 ||

ಪಾಪ ಕರ್ಮವು ಪಾದುಕೆಗಳನು | ಲೇಪನವು ಸತ್ಪುಣ್ಯ ಶಾಸ್ತ್ರ |
ಲಾಪನವೆ ಶ್ರೀ ತುಳಸಿ ಸುಮನೋ ವೃತ್ತಿಗಳೆ ಸುಮನ ||ಕೋಪ ಧೂಪವು ಭಕ್ತಿ ಭೂಷಣ | ವ್ಯಾಪಿಸಿದ ಸದ್ಬುದ್ಧಿ ಛತ್ರವು |
ದೀಪವೇ ಸುಜ್ಞಾನ ಆರಾರ್ತಿಗಳೆ ಗುಣಕಥನ|| 5 – 15 ||

ಸ್ಥಳ ಜಲಾದ್ರಿಗಳಲ್ಲಿ ಜನಿಸುವ | ಫಲ ಸುಪುಷ್ಪಜ ಗಂಧರಸ ಶ್ರೀ |
ತುಳಸಿ
ಮೊದಲಾದ ಖಿಲ ಪೂಜಾ ಸಾಧನ ಪದಾರ್ಥ ||
ಹಲವು ಬಗೆಯಿಂದರ್ಪಿಸುತ ಬಾಂ | ಬೊಳೆಯ ಜನಕಗೆ ನಿತ್ಯ ನಿತ್ಯದಿ |
ತಿಳಿವುದಿದು ವ್ಯತಿರೇಕ ಪೂಜೆಗಳೆಂದು ಕೋವಿದರು|| 11 – 24 ||

ಕೃತ ಪ್ರತೀಕದಿ ಟಂಕಿ ಭಾರ್ಗವ | ಹುತವ ಹಾನಿಲ ಮುಖ್ಯ ದಿವಿಜರು |
ತುತಿಸಿ ಕೊಳುತಭಿಮಾನಿಗಳು ತಾವಾಗಿ ನೆಲೆಸಿದ್ದು ||
ಪ್ರತಿ ದಿವಸ ಶ್ರೀ ತುಳಸಿ ಗಂಧಾ | ಕ್ಷತೆ ಕುಸುಮ ಫಲ ದೀಪ ಪಂಚಾ |
ಮೃತದಿ ಪೂಜಿಪ ಭಕ್ತರಿಗೆ ಕೊಡುತಿಹರು ಪುರುಷಾರ್ಥ|| 11 – 30 ||

ಹಲವು ಕರ್ಮವ ಮಾಡಿ ದೇಹವ | ಬಳಲಿಸದೆ ದಿನ ದಿನದಿ ಹೃದಯಾ |
ಮಲ ಸದನದಿ ವಿರಾಜಿಸುವ ಹರಿ ಮೂರ್ತಿಯನೆ ಭಜಿಸು ||
ತಿಳಿಯದೀ ಪೂಜಾ ಪ್ರಕರಣವ | ಫಲ ಸುಪುಷ್ಪಾ ಗ್ರ್ಯೋದ್ಕ ಕ ಶ್ರೀ
ತುಳಸಿ
ಗಳನ ರ್ಪಿಸಲು ಒಪ್ಪನು ವಾಸುದೇವ ಸದಾ|| 13 – 21 ||

ಮಂದನಾದರು ಸರಿಯೆ ಗೋಪೀ | ಚಂದನ ಶ್ರೀ ಮುದ್ರೆಗಳ ನಲಿ |
ವಿಂದ ಧರಿಸುತ ಶ್ರೀ ತುಳಸಿ ಪದ್ಮಾಕ್ಷ ಸರಗಳನು ||
ಕಂಧರದ ಮಧ್ಯದಲಿ ಧರಿಸಿ ಮು | ಕುಂದ ಶ್ರೀ ಭೂರಮಣ ತ್ರಿಜಗ |
ದ್ವಂದ್ಯ ಸರ್ವ ಸ್ವಾಮಿ ಮಮ ಕುಲ ದೈವ ವೆನೆ ಪೊರೆವ|| 16 – 20 ||

ನೇಮದಿಂದ ಶ್ವತ್ಥ ತುಳಸೀ | ಸೋಮಧರನಲಿ ವಿಮಲ ಸಾಲ |
ಗ್ರಾಮಗಳನಿಟ್ಟಭಿನಮಿಪ ನರ ಮುಕ್ತಿಯೋಗ್ಯ ಸದಾ ||
ಭೂಮಿಯೊಳು ಧರ್ಮಾರ್ಥ ಮುಕ್ತಿ ಸು |ಕಾಮ ಪೇಕ್ಷೆಗಳಿಂದ ಸಾಲ |
ಗ್ರಾಮಗಳ ವ್ಯತಿರಿಕ್ತ ವಂದಿಸೆ ದುಃಖವೈದುವನು || 30 – 6 ||

ಶೈವ ಶೂದ್ರ ಕರಾರ್ಚಿತ ಮಹಾ | ದೇವ ವಾಯು ಹರಿ ಪ್ರತಿಮೆ ವೃಂ |
ದಾವನದಿ ಮಾಸದ್ವಯದೊಳಿಹ ತುಳಸಿ ಅಪ್ರಸವ ||
ಗೋ ವಿವಾಹವರ್ಜಿ ತಾಶ್ವ | ತ್ಥಾ ವಿಟಪಿಗಳ ಭಕ್ತಿ ಪೂರ್ವಕ |
ಸೇವಿಸುವ ನರ ನಿತ್ಯ ಶಾಶ್ವತ ದುಃಖ ವೈದುವನು|| 30 – 8 ||

ಪಣೆಯೊಳೊಪ್ಪುವ ತಿಲಕ ತುಳಸೀ | ಮಣಿಗಣಾಂಚಿತ ಕಂಠ ಕರದಲಿ |
ಕ್ವಣಿತ ವೀಣಾ ಸುಸ್ವರದಿ ಬಹುತಾಳ ಗತಿಗಳಲಿ ||
ಪ್ರಣವ ಪ್ರತಿಪಾದ್ಯನ ಗುಣಂಗಳ | ಕುಣಿದು ಪಾಡುತ ಪರಮ ಸುಖ ಸಂ |
ದಣಿಯೊಳಾಡುವ ದೇವ ಋಷಿ ನಾರದರಿ ಗಭಿನಮಿಪೆ|| 32 -26 ||

ಹರಿ ಕಥಾಮೃತ ಸಾರ ಗುರುಗಳ|
ಕರುಣದಿಂದಾಪನಿತು ಹೇಳುವೆ |
ಪರಮ ಭಗವದ್ಭಕ್ತರಿದನಾದರದಿ ಕೇಳುವದು ||

With Padachedha. Referred the blog for this one : https://sampradaaya.wordpress.com/harikathamrutasara/

Thanks a million to Smt. Vinoda Singanamalli for an amazing blog.

ಪ್ರತಿಮೆ- ಸಾಲ – – ಗ್ರಾಮ ಗೋsಭ್ಯಾ- | ಗತ ಅ-ತಿಥಿ ಶ್ರೀ – – ತುಳಸಿ – ಪಿಪ್ಪಲ |

ಯತಿ ವ-ನಸ್ಥ ಗೃ – – ಹಸ್ಥ -ವಟು ಯಜ – – ಮಾನ- ಸ್ವಪರಜ-ನ ||

ಪೃಥಿವಿ- ಜಲ ಶಿಖಿ – – ಪವನ – ತಾರಾ- | ಪಥ ನ-ವಗ್ರಹ – – ಯೋಗ -ಕರಣ ಭ |

ತಿಥಿ ಸಿ-ತಾಸಿತ – – ಪಕ್ಷ -ಸಂಕ್ರಮ – – ಅವನ – ಧಿಷ್ಠಾ – ನ || 5 – 3 ||

ವಾರಿ – ಯೊಳಗಿ – – ಪ್ಪತ್ತು  – ನಾಲಕು | ಮೂರೆ – ರಡು ಸಾ – – ವಿರದ- ಮೇಲೆಮು- |

ನ್ನೂರು – ಹದಿನೇ – – ಳೆನಿಪ- ರೂಪವು – – ಶ್ರೀ ತು – ಳಸಿ ದಳ – ದಿ ||

ನೂರ – ಅರವ – – ತ್ತೊಂದು- ಪುಷ್ಪದಿ | ಮೂರ – ಧಿಕ ದಶ – – ದೀಪ – ದೊಳು ನಾ- |

ನೂರು – ಮೂರು ಸು – -ಮೂರ್ತಿ – ಗಳು ಗಂ – -ಧದೊಳ – ಗಿರುತಿಹ – ವು|| 5 – 8 ||

ಪಾಪ – ಕರ್ಮವು – – ಪಾದು – ಕೆಗಳನು- | ಲೇಪ – ನವು ಸ – – ತ್ಪುಣ್ಯ – ಶಾಸ್ತ್ರ – |

ಲಾಪ – ನವೆ ಶ್ರೀ – – ತುಳಸಿ – ಸುಮನೋ – –  ವೃತ್ತಿ – ಗಳೆ ಸುಮ – ನ ||
ಕೋಪ – ಧೂಪವು – – ಭಕ್ತಿ – ಭೂಷಣ | ವ್ಯಾಪಿ – ಸಿದ ಸ – – ದ್ಬುದ್ಧಿ – ಛತ್ರವು |

ದೀಪ – ವೇ ಸು – – ಜ್ಞಾನ – ಆರಾ – – ರ್ತಿಗಳೆ –  ಗುಣಕಥ – ನ|| 5 – 15 ||

ಸ್ಥಳ ಜ – ಲಾದ್ರಿಗ – – ಳಲ್ಲಿ – ಜನಿಸುವ | ಫಲ ಸು – ಪುಷ್ಪಜ – – ಗಂಧ – ರಸ ಶ್ರೀ- |

ತುಳಸಿ –  ಮೊದಲಾ – -ದ ಖಿಲ – ಪೂಜಾ – –  ಸಾಧ – ನ ಪದಾ – ರ್ಥ ||

ಹಲವು –  ಬಗೆಯಿಂ – – ದರ್ಪಿ – ಸುತ ಬಾಂ- | ಬೊಳೆಯ –  ಜನಕಗೆ  – – ನಿತ್ಯ- ನಿತ್ಯದಿ -|

ತಿಳಿವು – ದಿದು ವ್ಯತಿ – – ರೇಕ – ಪೂಜೆಗ – – ಳೆಂದು –  ಕೋವಿದ-ರು|| 11 – 24 ||

ಕೃತ ಪ್ರ – ತೀಕದಿ – – ಟಂಕಿ- ಭಾರ್ಗವ | ಹುತವ – –  ಹಾನಿಲ ಮುಖ್ಯ – ದಿವಿಜರು |

ತುತಿಸಿ – ಕೊಳುತಭಿ – – ಮಾನಿ – ಗಳು ತಾ – – ವಾಗಿ -ನೆಲೆಸಿ – ದ್ದು ||

ಪ್ರತಿ ದಿ-ವಸ ಶ್ರೀ – – ತುಳಸಿ – ಗಂಧಾ- | ಕ್ಷತೆ ಕು – ಸುಮ ಫಲ – –  ದೀಪ- ಪಂಚಾ- |

ಮೃತದಿ – ಪೂಜಿಪ- –  ಭಕ್ತ – ರಿಗೆ ಕೊಡು – – ತಿಹರು- ಪುರುಷಾ – ರ್ಥ| 11 – 30 ||

ಹಲವು – ಕರ್ಮವ – – ಮಾಡಿ- ದೇಹವ | ಬಳಲಿ – ಸದೆ ದಿನ – – ದಿನದಿ – ಹೃದಯಾ- |

ಮಲಸ – ದನದಿ ವಿ – -ರಾಜಿ – ಸುವ ಹರಿ – – ಮೂರ್ತಿ – ಯನೆ ಭಜಿ – ಸು ||

ತಿಳಿಯ – ದೀ ಪೂ – – ಜಾ ಪ್ರ – ಕರಣವ | ಫಲ ಸು – ಪುಷ್ಪಾ  – – ಗ್ರ್ಯೋದ್ಕ – ಕ  ಶ್ರೀ – |

ತುಳಸಿಗಳನ – – ರ್ಪಿಸಲು – ಒಪ್ಪನು – – ವಾಸು – ದೇವ ಸ – ದಾ|| 13 – 21 ||

ಮಂದ – ನಾದರು – – ಸರಿಯೆ- ಗೋಪೀ- | ಚಂದ – ನ ಶ್ರೀ  – – ಮುದ್ರೆ – ಗಳ ನಲಿ –  |

ವಿಂದ – ಧರಿಸುತ – – ಶ್ರೀ ತು – ಳಸಿ ಪ – – ದ್ಮಾಕ್ಷ – ಸರಗಳ – ನು ||

ಕಂಧ – ರದ ಮ – – ಧ್ಯದಲಿ- ಧರಿಸಿ ಮು— | ಕುಂದ – ಶ್ರೀ ಭೂ – – ರಮಣ- ತ್ರಿಜಗ- |

ದ್ವಂದ್ಯ – ಸರ್ವ – – ಸ್ವಾಮಿ –  ಮಮ ಕುಲ – – ದೈವ – ವೆನೆ ಪೊರೆ – ವ|| 16 – 20 ||

ನೇಮ – ದಿಂದ – – ಶ್ವತ್ಥ – ತುಳಸೀ | ಸೋಮ – ಧರನಲಿ – – ವಿಮಲ- ಸಾಲ |

ಗ್ರಾಮ – ಗಳನಿ – – ಟ್ಟಭಿನ – ಮಿಪ ನರ – – ಮುಕ್ತಿ – ಯೋಗ್ಯ ಸ – ದಾ ||

ಭೂಮಿ-ಯೊಳು ಧ – – ಮಾರ್ಥ – ಮುಕ್ತಿ ಸು- |ಕಾಮ –  ಪೇಕ್ಷೆಗ – – ಳಿಂದ- ಸಾಲ- |

ಗ್ರಾಮ-ಗಳ ವ್ಯತಿ – – ರಿಕ್ತ – ವಂದಿಸೆ – – ದುಃಖ – ವೈದುವ – ನು || 30 – 6 ||

ಶೈವ- ಶೂದ್ರ ಕ – – ರಾರ್ಚಿ-ತ ಮಹಾ | ದೇವ- ವಾಯು ಹ – – ರಿ ಪ್ರ – ತಿಮೆ ವೃಂ- |

ದಾವ-ನದಿ ಮಾ – – ಸದ್ವ – ಯದೊಳಿಹ – – ತುಳಸಿ –  ಅಪ್ರಸ – ವ ||

ಗೋ ವಿ – ವಾಹ ವಿ – – ವರ್ಜಿ – ತಾಶ್ವ  | ತ್ಥಾ ವಿ-ಟಪಿಗಳ – – ಭಕ್ತಿ – ಪೂರ್ವಕ |

ಸೇವಿ – ಸುವ ನರ – – ನಿತ್ಯ – ಶಾಶ್ವತ – – ದುಃಖ – ವೈದುವ – ನು|| 30 – 8 ||

ಪಣೆಯೊ – ಳೊಪ್ಪುವ – – ತಿಲಕ – ತುಳಸೀ –  | ಮಣಿಗ – ಣಾಂಚಿತ – – ಕಂಠ – ಕರದಲಿ |

ಕ್ವಣಿತ -ವೀಣಾ – – ಸುಸ್ವ – ರದಿ ಬಹು – – ತಾಳ – ಗತಿಗಳ – ಲಿ ||

ಪ್ರಣವ – ಪ್ರತಿಪಾ – – ದ್ಯನ ಗು – ಣಂಗಳ | ಕುಣಿದು- ಪಾಡುತ – – ಪರಮ – ಸುಖ ಸಂ- |

ದಣಿಯೊ – ಳಾಡುವ – – ದೇವ – ಋಷಿ ನಾ – – ರದರಿ- ಗಭಿನಮಿ – ಪೆ|| 32 -26 ||

hari kathAmRuta sAra gurugaLa|
karuNadiMdApanitu hELuve |
parama bhagavadbhaktaridanAdaradi kELuvadu ||

Pratime sālagrāma gōsbhyā | gata atithi śrītuḷasi pippala | yati vanastha gr̥hastha vaṭu yajamāna svaparajana || pr̥thivi jala śikhi pavana tārā | patha navagraha yōga karaṇa bha | tithi sitāsita pakṣa saṅkrama avanadhiṣṭhāna || 5 – 3 ||

vāriyoḷagippattu nālaku | mūreraḍu sāvirada mēle mu | nnūru hadinēḷenipa rūpavu śrī tuḷasi daḷadi || nūra arava ttondu puṣpadi | mūradhika daśadīpadoḷu nā | nūru mūru sumūrtigaḷu gandhadoḷagirutihavu|| 5 – 8 ||

pāpa karmavu pādukegaḷanu | lēpanavu satpuṇya śāstra | lāpanave śrī tuḷasi sumanō vr̥ttigaḷe sumana ||
kōpa dhūpavu bhakti bhūṣaṇa | vyāpisida sadbud’dhi chatravu | dīpavē sujñāna ārārtigaḷe guṇakathana|| 5 – 15 ||

sthaḷa jalādrigaḷalli janisuva | phala supuṣpaja gandharasa śrī | tuḷasi modalāda khila pūjā sādhana padārtha || halavu bageyindarpisuta bāṁ | boḷeya janakage nitya nityadi | tiḷivudidu vyatirēka pūjegaḷendu kōvidaru|| 11 – 24 ||

kr̥ta pratīkadi ṭaṅki bhārgava | hutava hānila mukhya divijaru | tutisi koḷutabhimānigaḷu tāvāgi nelesiddu || prati divasa śrī tuḷasi gandhā | kṣate kusuma phala dīpa pan̄cā | mr̥tadi pūjipa bhaktarige koḍutiharu puruṣārtha|| 11 – 30 ||

halavu karmava māḍi dēhava | baḷalisade dina dinadi hr̥dayā | mala sadanadi virājisuva hari mūrtiyane bhajisu || tiḷiyadī pūjā prakaraṇava | phala supuṣpā gryōdka ka śrī tuḷasigaḷana rpisalu oppanu vāsudēva sadā|| 13 – 21 ||

mandanādaru sariye gōpī | candana śrī mudregaḷa nali | vinda dharisuta śrī tuḷasi padmākṣa saragaḷanu || kandharada madhyadali dharisi mu | kunda śrī bhūramaṇa trijaga | dvandya sarva svāmi mama kula daiva vene poreva|| 16 – 20 ||

nēmadinda śvat’tha tuḷasī | sōmadharanali vimala sāla | grāmagaḷaniṭṭabhinamipa nara muktiyōgya sadā || bhūmiyoḷu dharmārtha mukti su |kāma pēkṣegaḷinda sāla | grāmagaḷa vyatirikta vandise duḥkhavaiduvanu || 30 – 6 ||

śaiva śūdra karārcita mahā | dēva vāyu hari pratime vr̥ṁ | dāvanadi māsadvayadoḷiha tuḷasi aprasava || gō vivāhavarji tāśva | t’thā viṭapigaḷa bhakti pūrvaka | sēvisuva nara nitya śāśvata duḥkha vaiduvanu|| 30 – 8 ||

paṇeyoḷoppuva tilaka tuḷasī | maṇigaṇān̄cita kaṇṭha karadali | kvaṇita vīṇā susvaradi bahutāḷa gatigaḷali || praṇava pratipādyana guṇaṅgaḷa | kuṇidu pāḍuta parama sukha saṁ | daṇiyoḷāḍuva dēva r̥ṣi nāradari gabhinamipe|| 32 -26 ||

hari kathAmRuta sAra gurugaLa|
karuNadiMdApanitu hELuve |
parama bhagavadbhaktaridanAdaradi kELuvadu ||

The book I have referenced is:

Sri Jagannatha Dasara Rare Composition on Tulasi

Composed by Shree Jagannatha Dasaru. A very rare composition.

Picture Credit: Udupi Mutta, Udupi

Will post lyrics soon.

Mangala Sri Tulasi Devige Lyrics

Tenth song composed by Shri Purandara Dasaru.

ಮಂಗಳ ಶ್ರೀ ತುಳಸಿ ದೇವಿಗೆ

ಜಯ ಮಂಗಳ ವೃಂದಾವನ ದೇವಿಗೆ \\ pa ||

ನೋಡಿದ ಮಾತ್ರಕೆ ದೋಷಸಂಹಾರಿಗೆ |
ಬೇಡಿದ ವರಗಳ ಕೊಡುವಳಿಗೆ |

ಮಾಡೆ ವಂದನೆಯನು ಮನುಜರ ಪಾಪದ |
ಗೂಡನೀಡಾಡುವ ಗುಣವಂತೆಗೆ || 1 ||

ಮುಟ್ಟದ ಮಾತ್ರಕ್ಕೆ ಮುಕ್ತರ ಮಾಡುವ |
ಮುದದಿಂದುದ್ಧರಿಸುವ ಮುನಿವಂದ್ಯೆಗೆ
 |
ಕೊಟ್ಟರೆ ನೀರನು ಪೇರಿಗೆ ಕಾಲನ |
ಮುಟ್ಟಲೇಸದ ಹಾಗೆ ಮಾಳ್ಪಳಿಗೆ || 2 ||

ಬಿತ್ತಿ ಬೆಳಸಿ ತನ್ನ ಹೆಚ್ಚಿಸಿದವರಿಗೆ |
ಚಿತ್ತವಲ್ಲಭ ಕೃಷ್ಣನಹರುಷದಲಿ
 |
ಅತ್ಯಂತವಾಗಿ ತಾ ಭವದ ಬೇರ |
ಕಿತ್ತು ಬಿಸಾಡುವ ಕೋಮಲೆಗೆ || 3 ||

ಕೋಮಲವಾಗಿದ್ದ ದಳಮಂಜರಿಗಳ |
ಪ್ರೇಮದಿಂದಲಿ ತಂದು ಶ್ರೀ ಹರಿಗೆ
 |
ನೇಮದಿಂದರ್ಚಿಸೆ ಪರಮಾತ್ಮನೊಳು ಜೀವ |
ಕಾಮಿತಾರ್ಥವನೀವ ಸದ್ಗುಣೆಗೆ || 4 ||

ಕಾಷ್ಟವ ತಂದು ಗಂಧವ ಮಾಡಿ ಕೃಷ್ಣಗೆ |
ನಿಷ್ಠೆಯಿಂದಲಿ ಲೇಪನ ಮಾಳ್ಪರ |

ಜ್ಯೇಷ್ಠರೆನಿಸಿ ವೈಕುಂಠದಿ ನಿಲಿಸಿ ಸಂ-
ತುಷ್ಟರ ಮಾಡುವ ಸೌಭಾಗ್ಯೆಗೆ || 5 ||

ಅನ್ನವನುಂಡರು ನೀಚರ ಮನೆಯಲ್ಲಿ |
ಉನ್ನತ ಪಾಪವ ಮಾಡಿದರು
 |
ತನ್ನ ದಳವನೊಂದ ಕರ್ಣದಲ್ಲಿಟ್ಟರೆ |
ಧನ್ಯರ ಮಾಡುವ ದಯವಂತೆಗೆ || 6 ||

ಸರಸಿಜನಾಭನ ಸಲಿಗೆಯ ರಾಣಿಗೆ |
ಶರಣ ಜನರ ಪೊರೆವ ಸದ್ಗುಣೆಗೆ |
ತಿರುಪತಿನಿಲಯ ಶ್ರೀ ಪುರಂದರ ವಿಠ್ಠಲನ |
ಚರಣ ಸೇವಕಳಾದ ಚಿನ್ಮಯೆಗೆ || 7 ||

Maṅgaḷa śrī tuḷasi dēvige

jaya maṅgaḷa vr̥ndāvana dēvige \\ pa ||

nōḍida mātrake dōṣasanhārige |

bēḍida varagaḷa koḍuvaḷige |
māḍe vandaneyanu manujara pāpada |

gūḍanīḍāḍuva guṇavantege || 1 ||

muṭṭada mātrakke muktara māḍuva |

mudadindud’dharisuva munivandyege
| koṭṭare nīranu pērige kālana |

muṭṭalēsada hāge māḷpaḷige || 2 ||

bitti beḷasi tanna heccisidavarige |

cittavallabha kr̥ṣṇanaharuṣadali |

atyantavāgi tā bhavada bēra |

kittu bisāḍuva kōmalege || 3 ||

kōmalavāgidda daḷaman̄jarigaḷa |

prēmadindali tandu śrī harige |

nēmadindarcise paramātmanoḷu jīva |

kāmitārthavanīva sadguṇege || 4 ||

kāṣṭava tandu gandhava māḍi kr̥ṣṇage |

niṣṭheyindali lēpana māḷpara |
jyēṣṭharenisi vaikuṇṭhadi nilisi saṁ-

tuṣṭara māḍuva saubhāgyege || 5 ||

annavanuṇḍaru nīcara maneyalli |

unnata pāpava māḍidaru |

tanna daḷavanonda karṇadalliṭṭare |

dhan’yara māḍuva dayavantege || 6 ||

sarasijanābhana saligeya rāṇige |

śaraṇa janara poreva sadguṇege |

tirupatinilaya śrī purandara viṭhṭhalana |

caraṇa sēvakaḷāda cinmayege || 7 ||

Elamma Suguna Tulasi Lyrics

Ninth song composed by Shri Shesha Vittala Dasaru.

ಏಳಮ್ಮ ಸುಗುಣಾ ತುಳಸಿ || ಪ ||
ನಿನ್ನ ಕಾಣದೆ ಕ್ಷಣವು ಪ್ರಾಣ ನಿಲ್ಲದು ತಾಯೆ || ಅ ಪ ||

ಇಂದುವದನೇ ಕೇಳೇ ಎನಗೊಂದನಾದರೂ ಪೇಳೆ
ಚೆಂದಾದಿ ಬಂದೆನ್ನ ನಂದಾ ಪಾಲಿಸು ತಾಯೆ || ೧ ||

ಕನಸು ಮನಸಿನಲ್ಲಿ ನಿನ್ನ ನೆನೆಸೂವೆ ಹಗಲಲ್ಲಿ
ಮನಸೀನ ಓಟಕ್ಕೆ ಮನವಾ ನಿಲ್ಲಿಸು ತಾಯೆ || ೨ ||

ಆಸೆ ಇಲ್ಲವೇ ಎನಗೆ ನಿನ್ನ ದಾಸನಲ್ಲವೇ ತಾಯೆ
ಪೋಷಿಸಿ ಸಲಹೆನ್ನ ಶೇಷವಿಠಲ ಪ್ರಿಯೆ || ೩ ||

Ēḷam’ma suguṇā tuḷasi || pa ||

ninna kāṇade kṣaṇavu prāṇa nilladu tāye || a pa ||

induvadanē kēḷē enagondanādarū pēḷe

cendādi bandenna nandā pālisu tāye || 1 ||

kanasu manasinalli ninna nenesūve hagalalli |

manasīna ōṭakke manavā nillisu tāye || 2 ||

āse illavē enage ninna dāsanallavē tāye |

pōṣisi salahenna śēṣaviṭhala priye || 3 ||

 Namo Namo Shri Tulasi Lyrics

Eighth song composed by Shri Pranesha Vittala Dasaru.

ನಮೋ ನಮೋ ಶ್ರೀ ತುಳಸಿ
ಪಾಹೀ ಪಾಹೀ ಕುಮತಿಯ ಪರಿಹರಿಸಿ | |ಪ||

ಅಮಿತ ಮಹಿಮೆ ಸದ್ಗುಣಗಳ ಪೂರ್ಣಿ
ಕಮಲೇಕ್ಷಣ ಮಧುಸೂಧನನರಸಿ | ಅ.ಪ |

ಅಂದಿನ ಕಾಲದಲ್ಲಿ ಹರಿಪಾದ ವಂದಿಸಿ ಭಕುತಿಯಲಿ
ಅಂದದಿ ವರ ಪಡೆಗಿಂದಿಗೂ ಸರ್ವರ
ಮಂದಿರದೊಳಗೆ ಪೂಜೆಯಗೊಳುತಲಿ ||೧||

ನಾ ನಂಬಿದೆ ನಿನ್ನ ದೇವತಾ ಮಾನಿನಿ ಮಣಿ ಇನ್ನಾ
ಹೀನದಿ ಎಣಿಸದೇ ಕರುಣಿಸಿ ಸರ್ವರ
ಪ್ರಾಣೇಶ ವಿಠಲನ ಧ್ಯಾನದೊಳಿಡಿಸಿ | |೨||

Namō namō śrī tuḷasi

pāhī pāhī kumatiya pariharisi || pa. ||

amita mahime sadguṇagaḷa pūrṇi

kamalēkṣaṇa madhusūdhananarasi | a.Pa |

andina kāladalli haripāda vandisi bhakutiyali

andadi vara paḍegindigū sarvara

mandiradoḷage pūjeyagoḷutali ||1||

nā nambide ninna dēvatā mānini maṇi innā

hīnadi eṇisadē karuṇisi sarvara

prāṇēśa viṭhalana dhyānadoḷiḍisi | |2||

Uthwana Dwadashi-Tulasi Habba – November 5th 2022

ತುಲಸೀ ಹಬ್ಬವಿವಾಹ ಉತ್ವಾನ ದ್ವಾದಶಿ – Uthwana Dwadashi/Tulasi Habba – November 5th Saturday in USA and in India.
Last year’s pictures:

Tulasi-Pooje-2020Close up of our little Tulasi Plant:

IMG_6674
Uthwana Dwadashi – Tulasi Habba or Tulasi Pooje is celebrated a fortnight after Deepavali. It signifies the day Tulasi married Lord Vishnu. On this day, Tulasi katte is decorated like a bride. Amla trees are planted along with the tulsi plant.

Pooje to be done in the evening.

What’s Tulasi?

In most Hindu homes, you find a Tulasi plant growing out of a Tulasi katte . Tulasi is considered to be a holy plant and is worshiped every morning. Tulasi has medicinal value and is often used as a herb in curing the common cold and cough.

So what’s Tulasi Habba?
Tulasi came out of the ocean during Amrita Manthan as a younger sister of Lakshmi. She too was devoted to Lord Vishnu and wanted to marry him. But Lakshmi who was already married to him did not like the idea and cursed her to become a plant. Thus the tulasi plant was born. But the all merciful Lord Vishnu took pity and fulfilling her wish declared that when he will be in the form of a saligrama, found in most temples and madhwa houses, she will remain close to him in the form of a tulasi leaf. Therefore even today a saligrama will have a tulsi leaf along with it. In front of every Hindu home there will be a tulasi katte in which a plant grows round the year.
Although the prayers are offered to Tulasi everyday by watering the plant in the morning and lighting an oil lamp before it in the evening, on Kartik Shukla Dwadashi there will be an annual Tulasi Pooja in the evening when the tulasi katte will be beautifully decorated with clay lamps.

Attached below is a screen shot of the Tulasi Vivaha Slokas and Procedure as printed in the Uttaradi Matta Panchanga. If you click on the image a bigger picture will display which has the words very very clear.

tulasi-vivaha-sloka

Here is the link for all the Tulasi slokas and songs I have recorded.

1. Slokas

2. Daily Tulasi Pooja Procedure

3. Several Songs on Tulasi

You can also listen to several songs I have recorded on YouTube and created a Playlist below:

 Ugabhoga’s on Tulasi

Seventh is a small Ugabhoga in the series is composed by Shree Purandara dasaru.

ಉಗಾಭೋಗ – 1

ಇಲ್ಲದಿದ್ದರೆ ಮುಗುಳುತೆನೆ

ಇಲ್ಲದಿದ್ದರೆ ಚಿಗುರೆಲೆ

ಇಲ್ಲದಿದ್ದರೆ ಬರಲುಕಟ್ಟಿಗೆ

ಇಲ್ಲದಿದ್ದರೆ ಬೇರುಮಣ್ಣು

ಅದೂ ಇಲ್ಲದಿದ್ದರೆ ತುಳಸಿ ತುಳಸಿ ಎಂದು ಕೂಗಿದರೆ ಸಾಕು

ಎಲ್ಲ ವಸ್ತುಗಳನೀಡಾಡುವ ಪುರಂದರವಿಠಲ ||

Ugābhōga – 1

illadiddare muguḷutene

illadiddare cigurele

illadiddare baralukaṭṭige

illadiddare bērumaṇṇu

adū illadiddare tuḷasi tuḷasi endu kūgidare sāku

ella vastugaḷanīḍāḍuva purandaraviṭhala 1।

ಉಗಾಭೋಗ – 2

ಶ್ರೀತುಲಸಿ ಇಲ್ಲದಿರೆ, ಶ್ರೀಕೃಷ್ಣತುಳಸಿ

ತುಳಸಿದಳ ಇಲ್ಲದಿರೆ, ತುಳಸಿಕಾಷ್ಠ ಇಲ್ಲದಿರೆ, ತುಳಸಿ ಶುಷ್ಕ ಅದು ಹಳೆತಾದರೆ ಏನು

ಅವನಿಗರ್ಪಿಸಬಹುದು ಇಲ್ಲದಿರೆ, ಚಿಗುರುತುಳಸಿ ಇಲ್ಲದಿರೆ, ಮುಗುಳುತೆನೆ

ಇಲ್ಲದಿದ್ದರೆ, ಬೇರು, ಮಣ್ಣು ಇಲ್ಲದಿರೆ, ತುಳಸಿ ತುಳಸಿ ಎಂದು ಕೂಗಿದರೆ ಸಾಕು

ಇಲ್ಲದಿರೆ, ಪುರಂದರವಿಠಲಯ್ಯ ಎಲ್ಲ ವಸ್ತುಗಳ ಈಡ್ಯಾಡುವ

Ugābhōga – 2

Śrītulasi illadire, śrīkr̥ṣṇatuḷasi

tuḷasidaḷa illadire, tuḷasikāṣṭha

illadire, tuḷasi śuṣka adu haḷetādare ēnu

avanigarpisabahudu

illadire, cigurutuḷasi illadire, muguḷutene

illadiddare, bēru, maṇṇu

illadire, tuḷasi tuḷasi endu kūgidare sāku

illadire, purandaraviṭhalayya ella vastugaḷa īḍyāḍuva

The meaning of the two: one should worship the Lord with Tulasi in whatever form available, be it Sri Tulasi, be it Krishna Tulasi, Tulasi seed, or even if that is not available the root of Tulasi, or even the soil in which seeds are grown, if none of the above Tulasi is available, just by reciting Tulasi Tulasi is sufficient to Lord Vittala.

A slight variation in both Ugabhoga but the gist is the same.

 Arati Jaya Tulasi Lyrics

Sixth song in the series is composed by Shree Indiresha dasaru.

ಆರತಿ ಜಯ ತುಳಸಿ

ಆರತಿ ಜಯ ತುಳಸಿ ಕಾರ್ತಿಕ ದಾಮೋದರನರಸಿ || pa ||

ನೀರನು ಎರೆದು ನೀರೆಯರ ಮನ್ನಿಸಿ ಭಾರಿ ಸುಖವ ಸುರಿಸಿ ಮೆರೆಯುವಿ || 1 ||

ಮನೆಯ ಹಿತ್ತಲದ ಅಂಗಳದೊಳ್ ನೆಲೆಸಿ ಸರ್ವ ಮಾನ್ಯಳೆನಿಸಿ ಮೆರೆಯುವಿ || 2 ||

ರಾಧಾ ಮಾಧವರೊಂದಿಗೆ ವಾಸಿಪ ಇಂದಿರೇಶನ ರಾಣಿ ಎಂದೆನಿಸಿ || 3 ||

Ārati jaya tuḷasi

ārati jaya tuḷasi kārtika dāmōdaranarasi || pa ||

nīranu eredu nīreyara mannisi bhāri sukhava surisi mereyuvi || 1 ||

maneya hittalada aṅgaḷadoḷ nelesi sarva mān’yaḷenisi mereyuvi || 2 ||

rādhā mādhavarondige vāsipa indirēśana rāṇi endenisi || 3 ||

Poojisuvene Tulasi Lyrics

Fifth song in the series is composed by Shree Gopala Krishna Vittala Dasaru.

ಪೂಜಿಸುವೆನೆ ತುಳಸಿ ನಿನ್ನ ಬೇಗ ಸಲಹೆ ನೀ || pa ||

ಜಾಜಿ ಮಲ್ಲಿಗೆ ಕುಸುಮದಿಂದ ಪೂಜೆಗೈಯ್ಯವೆ || a.pa ||

ಧ್ಯಾನ ಆವಾಹನೆಯಿಂದ ಶ್ರೀ ವರನ ಸಹ

ನಾನಾ ಮಂಗಳ ದ್ರವ್ಯದಿ ನಾನು ಪೂಜಿಪೆ ||1||

ವೃಂದಾವನದಿ ಮೆರೆಯುವವಳೆ ಸುಂದರಾಂಗಿಯೆ

ನಂದಕಂದಗೆ ಮಾಲೆಯವಳೆ ಇಂದು ಕರುಣಿಸೆ ||2||

ಗೋಪಾಲಕೃಷ್ಣವಿಠ್ಠಲನ ರೂಪ ತೋರೆ ನೀ

ಶ್ರೀಪತಿಯ ಪಾದ ತೋರಿ ಕಾಪಾಡೆ ದೇವಿ ||3||

Pūjisuvene tuḷasi ninna bēga salahe nī || pa || 

jāji mallige kusumadinda pūjegaiyyave || a.Pa || 

dhyāna āvāhaneyinda śrī varana saha 

nānā maṅgaḷa dravyadi nānu pūjipe ||1|| 

vr̥ndāvanadi mereyuvavaḷe sundarāṅgiye 

nandakandage māleyavaḷe indu karuṇise ||2|| 

gōpālakr̥ṣṇaviṭhṭhalana rūpa tōre nī 

śrīpatiya pāda tōri kāpāḍe dēvi ||3||

%d bloggers like this: