
Madhwa Navami Celebrations on 01/29/2023 – https://skvnc.org/madhwa-navami/
Bhajane sequence and song presentation
Session 1 – 9.30 AM – 10 AM
Satya Jagathidu Pancha Bhedavu – Shree Purandara Dasaru
ಸತ್ಯ ಜಗತ್ತಿದು ಪಂಚ ಭೇದವು | ನಿತ್ಯಶ್ರೀ ಗೋವಿಂದನ ||ಪ||
ಕೃತ್ಯವರಿತು ತಾರತಮ್ಯದಿ ಕೃಷ್ಣ ನಧಿಕೆಂದು ಸಾರಿರೈ || ಅ.ಪ.| |
ಜೀವ ಈಶಗೆ ಭೇದ | ಸರ್ವತ್ರ | ಜೀವ ಜೀವಕೆ ಭೇದವು ||
ಜೀವ ಜಡ ಜಡ ಜಡಕೆ ಭೇದ | ಜೀವ ಜಡ ಪರಮಾತ್ಮಗೆ II ೧||
ಮಾನುಷೋತ್ತಮಗಧಿಪ ಕ್ಷಿತಿಪರು | ಮನುಜ ದೇವಗಂಧರ್ವರು ||
ಜ್ಞಾನಿ ಪಿತ್ರಾ ಜಾನಕರ್ಮಜ | ದಾನವಾರಿ ತತ್ವಾತ್ಮರು I| 2 |I
ಗಣಪ ಮಿತ್ರರು ಸಪ್ತ ಋಷಿಗಳು | ವನ್ನಿನಾರದವರುಣನು ||
ಇವಜ ಸಮ ಚಂದ್ರ ಸೂರ್ಯರು | ಮನುಸತಿಯು ಹೆಚ್ಚು ಪ್ರವಹನು ||೩ ||
ದಕ್ಷ ಸಮ ಅನಿರುದ್ಧ ಗುರುಶಚಿ | ರತಿ ಸ್ವಯಂ ಭುವ ರಾಲ್ವರು ||
ಕಕ್ಷ ಪ್ರಾಣನಿಗಿಂತ ಕಾಮನು ಕಿಂಚಿದಥಿಕನು ಇಂದ್ರನು || 4 ||
ದೇವೇಂದ್ರನಿನಿಂದಧಿಕ ಮಹರುದ್ರ | ದೇವ ಸಮಶೇಷ ಗರುಡರು
ಕೇವಲಧಿಕರು ಶೇಷ ಗರುಡಗೆ ದೇವಿಭಾರತಿ ಸರಸ್ವತಿ ॥೫॥
ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೇ ಬ್ರಹ್ಮರು |
ವಾಯು ಬ್ರಹ್ಮಗೆ ಕೋಟಿ ಗುಣದಿಂದ ಅಧಿಕ ಶಕ್ತಳು ಶ್ರೀ ರಮಾ ॥೬॥
ಅನಂತ ಗುಣದಿಂಲಕುಮಿಗಿಂತ | ಅಧಿಕ ಪುರಂದರ ವಿಠಲನು ||
ಘನ ಸಮರು ಇವಗಿಲ್ಲ ಜಗದೊಳು ಹನುಮ ಹೃತ್ಪದ ವಾಸಿಗೆ I೭॥
Satya jagatidu panchabhedavu nitya shri govindana || pa ||
krutyavaritu taaratamyadi krushnanadhikendu saarirai || A. pa||
jiva Ishage bheda sarvatra jiva jivake bhedavu
jiva jadake jadajadake bheda jivajada paramaatmage | 1 |
maanushottamaradhika kshitiparu manujadeva gandharvaru
jjaanapitraajaana karmaja ukta Shesha Shatastaru | 2 |
ganapamitrauu saptarushigalu vahni naarada varunaru
inajage sama chandra suryaru manusuteyu hechchu pravahanu |3|
daksha sama aniruddha shachi guru rati svayambhuvaraarvaru
praanaginda adhika kaamanu kinchidadhikanu indranu |4|
deva indrage adhika maharudra – deva sama sheshagarudaru
kevala rudra shesha garudage devi hechchu sarasvati |5|
vaayuvige samarilla jagadolu vaayudevare brahmaru
vaayubrahmage koti gunadindadhika shaktalu shriramaa |6|
ananta gunagalindadhika lakumige Adi purandaravithalanu
Ganaru samaru illa jagadolu hanumahrutpadmavaasige |7|
Guru Madhwa Rayarige Namo Namo – Shree Guru Shrisha Vittala
ಗುರು ಮಧ್ವ ರಾಯರಿಗೆ ನಮೋ ನಮೋ
ಗುರು ಮಧ್ವ ಸಂತತಿಗೆ ನಮೋ ನಮೋ || pa||
ಶ್ರಿಪಾದರಜರಿಗೆ ಗುರು ವ್ಯಾಸರಾಜರಿಗೆ
ಗುರು ವಾದಿರಾಜರಿಗೆ ನಮೋ ನಮೋ || 1 ||
ರಾಘವೇಂದ್ರ ರಾಯರಿಗೆ ವೈಕುಂಠ ದಾಸರಿಗೆ
ಪುರಂದರ ದಾಸರಿಗೆ ನಮೋ ನಮೋ || 2 ||
ಗುರು ವಿಜಯ ದಾಸರಿಗೆ ಭಾಗಣ್ಣ ದಾಸರಿಗೆ
ಶ್ರೀ ರಂಗ ವಲಿದ ದಾಸರಿಗೆ ನಮೋ ನಮೋ || 3 ||
ಪರಮ ವೈರಾಗ್ಯಶಲಿ ತಿಮ್ಮಣ್ಣ ದಾಸರಿಗೆ
ಹುನ್ದೆಕಾರ ದಾಸರಿಗೆ ನಮೋ ನಮೋ || 4 ||
ಗುರು ಶ್ರೀಶ ವಿಠಲನ ಪರಮ ಭಕ್ತರ ಚರಣ
ಸರಸಿಜ ಯುಗಗಳಿಗೆ ನಮೋ ನಮೋ || 5 ||
guru madhva rayarige namo namo
guru madhva saantatige namo namo || pa||
shripadarajarige guru vyasarajarige
guru vadirajarige namo namo || 1 ||
raghavendra rayarige vaikunaa dasarige
purandara dasarige namo namo || 2 ||
guru vijaya dasarige bhaganna dasarige
shri ranga valida dasarige namo namo || 3 ||
parama vairagyashali timmanna dasarige
hundeekara dasarige namo namo || 4 ||
guru shrisha vithalanna parama bhaktara charana
sarasija yugagalige namo namo || 5 ||
Kayo Shree Narashima – Shree Gopala Vittala Dasaru
ಕಾಯೋ ಶ್ರೀ ನಾರಸಿಂಹ ಕಾಯೋ ||ಪ||
ಕಾಯೋ ಶ್ರೀ ನಾರಸಿಂಹ ತ್ರಿಯಂಬಕಾದ್ಯಮರೇಶ
ಭಯ ಅಂಧ ತಿಮಿರ ಮಾರ್ತಾಂಡ ಶ್ರೀ ನಾರಸಿಂಹ ||ಅ ಪ||
ಘೋರ ಅಕಾಲಮೃತ್ಯು ಮೀರಿಬರಲು ಕಂಡು
ಧೀರ ನೀ ಬಿಡಿಸದಿನ್ಯಾರೊ ಶ್ರೀ ನಾರಸಿಂಹ ||೧||
ಭೀಷಣನೆ ಸುಭದ್ರ ದೋಷ ಮೃತ್ಯುಗೆ ಮೃತ್ಯು
ಸುಷುಮ್ನಾನಾಡಿಸ್ಥಿತವಿಭುವೆ ಶ್ರೀ ನಾರಸಿಂಹ ||೨||
ಜ್ಞಾನರಹಿತನಾಗಿ ನಾ ನಿನ್ನ ಮರೆತರೆ
ನೀನೂ ಮರೆತದ್ಯಾಕೆ ಪೇಳೊ ಶ್ರೀ ನಾರಸಿಂಹ ||೩||
ಪ್ರಬಲೋತ್ತಮನೆನಿಸಿ ಅಬಲರ ಕಾಯದಿರೆ
ಸಬಲರು ಕಂಡು ಮೆಚ್ಚುವರೆ ಶ್ರೀ ನಾರಸಿಂಹ ||೪||
ಪಾಲಮುನ್ನೀರಾಗರ ಪದುಮೆ ಮನೋಹರ
ಗೋಪಾಲವಿಠಲ ಜಗತ್ಪಾಲ ಶ್ರೀ ನಾರಸಿಂಹ ||೫||
kaayO shrI naarasiMha kaayO ||pa||
kaayO shrI naarasiMha triyaMbakaadyamarEsha
bhaya aMdha timira maartaaMDa shrI naarasiMha ||a pa||
ghOra akaalamRutyu mIribaralu kaMDu
dhIra nI biDisadinyaaro shrI naarasiMha ||1||
bhIShaNane subhadra dOSha mRutyuge mRutyu
suShumnaanaaDisthitavibhuve shrI naarasiMha ||2||
j~jaanarahitanaagi naa ninna maretare
nInU maretadyaake pELo shrI naarasiMha ||3||
prabalOttamanenisi abalara kaayadire
sabalaru kaMDu meccuvare shrI naarasiMha ||4||
paalamunnIraagara padume manOhara
gOpaalaviThala jagatpaala shrI naarasiMha ||5||
Hanuma Namma Thayi Thande – Sri Purandara Vittala Dasaru
ಹನುಮ ನಮ್ಮ ತಾಯಿತಂದೆ
ಭೀಮ ನಮ್ಮ ಬಂಧು ಬಳಗ
ಆನಂದ ತೀರ್ಥರೇ ನಮ್ಮ ಗತಿಗೋತ್ರವಯ್ಯ ||ಪ||
ತಾಯಿ ತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ
ಆಯಾಸವಿಲ್ಲದೆ ಸಂಜೀವನವ ತಂದೆ
ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆವ ರಘು
ರಾಯನಂಘ್ರಿಗಳೆ ಸಾಕ್ಷಿ ತ್ರೇತಾ ಯುಗದಿ ||
ಬಂಧುಬಳಗದಂತೆ ಆಪದ್ಬಾಂಧವನಾಗಿ ಪಾರ್ಥನಿಗೆ
ಬಂದ ದುರಿತಗಳ ಪರಿಹರಿಸಿ
ಅಂಧಕ ಜಾತರ ಕೊಂದು ನಂದ ಕಂದಾರ್ಪಣೆಂದ ಗೋ-
ವಿಂದನಂಘ್ರಿಗಳೆ ಸಾಕ್ಶಿ ದ್ವಾಪರ ಯುಗದಿ ||
ಗತಿ ಗೋತ್ರರಂತೆ ಸಾಧುಯತಿಗಳಿಗೆ ಮತಿಯ ತೋರಿ
ಮತಿ ಕೆಟ್ಟ ಇಪ್ಪತ್ತಒಂದು ಮತವ ಖಂಡಿಸಿ
ಗತಿಗೆಟ್ಟ ವೈಷ್ಣವರಿಗೆ ಗತಿಯ ತೋರಿದೆ ಪರಮಾತ್ಮ
ಗತಿ ಪುರಂದರ ವಿಠಲನೆ ಸಾಕ್ಷಿ ಕಲಿಯುಗದಲ್ಲಿ ||
Hanuma namma thayi thande
bheema namma bhandu bhalaga
Ananda thirthare namma gathigothravayya||
Thayithande hasulegagi sahayamadi sakuvanthe
ayasavillade sanjivanava thande
ghayagonda kapigalanu sayadanthe poreda
raghu rayanangrigale sakshi threetayugadi||1||
Bandhubalagadanthe aapadbandhavanagi parthanige
bahdha bandha durithagala pariharisi
andhakajhathara kondu nadakandarpanendu
govindanangrigale sakshi dwaparayugadi||2||
Gathigotraranthe sadhuthathigalige mathiya thori
mathigetta ipathaondu mathava khandisi
gathigetta sadhvaishnavarige sadgathiya thorida paramathama
gathi purandaravittahalane sakshi kaliyugadalli||3||
Anjikinyatakayya Sajjanarige by Sri Purandara Vittala Dasaru
ಅಂಜಿಕಿನ್ಯಾತಕಯ್ಯ ಸಜ್ಜನರಿಗೆ ಭಯವು ಇನ್ಯಾತಕಯ್ಯ || ಪ ||
ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ ॥ಅ.ಪ॥
ಕನಸಿಲಿ ಮನಸಿಲಿ ಕಳವಳವಾದರೆ ಹನುಮನ ನೆನೆದರೆ ಹಾರಿ ಹೋಗದೆ ಭೀತಿ ॥೧॥
ರೋಮ ರೋಮಕೆ ಕೋಟಿ ಲಿಂಗವುದುರಿಸಿದ ಭೀಮನ ನೆನೆದರೆ ಬಿಟ್ಟು ಹೋಗದೆ ಭೀತಿ ॥೨॥
ಪುರಂದರವಿಠಲನ ಪೂಜೆಯ ಮಾಡುವ ಗುರು ಮಧ್ವರಾಯರ ಸ್ಮರಣೆ ಮಾಡಿದ ಮೇಲೆ ॥೩॥
anjikinyatakayya sajjanarige bhayavu inyatakayya l
sanjivarayara smarane madida mele ll
kanasali manasali kalavalavadare l
hanumana nenedare hari hogade bhiti ll 1 ||
roma romake koti lingavudarisida l
bhimana nenedare bittu hogade biti ll 2 |
purandara vittalana pujeya maduva l
guru madvarayara smarane madida mele ll 3 |
Anandatirtharembo Arthiya Pesarulla – Sri Guru Pranesha Vittala Dasaru
ಆನಂದತೀರ್ಥರೆಂಬೊ ಅರ್ಥಿಯ ಪೆಸರುಳ್ಳ ಗುರುಮಧ್ವ ಮುನಿರಾಯಾ ।
ಏನೆಂಬೆ ನಾ ನಿನ್ನ ಕರುಣಕ್ಕೆ ಎಣೆಗಾಣೆ ಗುರುಮಧ್ವ ಮುನಿರಾಯಾ ॥ pa ||
ಬೇಸರದೆ ಸರ್ವರೊಳು ಶ್ವಾಸ ಜಪಗಳ ಮಾಡಿ ಗುರುಮಧ್ವ ಮುನಿರಾಯಾ |
ಶ್ರೀಶಗರ್ಪಿಸುತ ನಿನ್ನ ದಾಸರನ್ನು ಸಲಹಿದೆ ಗುರುಮಧ್ವ ಮುನಿರಾಯಾ ।| 1 ||
ಅಂದು ಹನುಮಂತನಾಗಿ ಬಂದು ಸುಗ್ರೀವಗೆ ಗುರುಮಧ್ವ ಮುನಿರಾಯಾ |
ಅಂದವಾದ ಪದವಿತ್ತಾನಂದದಿಂದ ಸಲಹಿದೆ ಗುರುಮಧ್ವ ಮುನಿರಾಯಾ ॥ 2 ||
ಕುಂತಿಯ ಕುಮಾರನಾಗಿ ಹಂತ ಕೌರವರ ಕೊಂದೆ ಗುರುಮಧ್ವ ಮುನಿರಾಯಾ ।
ಅನಂತ ಪುಣ್ಯಗಳಿಸಿ ಶ್ರೀಕಾಂತನಿಗೆ ಅರ್ಪಿಸಿದೆ ಗುರುಮಧ್ವ ಮುನಿರಾಯಾ ॥ 3 ||
ಅದ್ವೈತರನು ಕಾದಿ ಗೆದ್ದು ನಿನ್ನ ಭಕ್ತರಿಗೆ ಗುರುಮಧ್ವ ಮುನಿರಾಯಾ ।
ಶುದ್ಧ ತಾತ್ಪರ್ಯವಾಕ್ಯ ಪದ್ಧತಿಯ ತೋರಿಸಿದಿ ಗುರುಮಧ್ವ ಮುನಿರಾಯಾ ॥ 4 ||
ಗುರುಪ್ರಾಣೇಶ ವಿಠ್ಠಲ ಪರನೆಂದು ಡಂಗುರುವ ಗುರುಮಧ್ವ ಮುನಿರಾಯಾ ।
ಸಾರಿ ಸಜ್ಜನರಿಗೆ ಹರಿಯ ಲೋಕ ತೋರಿಸಿದ ಗುರುಮಧ್ವ ಮುನಿರಾಯಾ ॥ 5 ||
Anandatirtharembo Arthiya Pesarulla Gurumadhva Muniraya।
Enembe Na Ninna Karunakke Enegane Gurumadhva Muniraya॥ Pa ||
Besarade Sarvarolu Svasa Japagala Madi Gurumadhva Muniraya |
Srisagarpisuta Ninna Dasarannu Salahide Gurumadhva Muniraya।| 1 ||
Andu Hanumantanagi Bandu Sugrivage Gurumadhva Muniraya |
Andavada Padavittanandadinda Salahide Gurumadhva Muniraya॥ 2 ||
Kuntiya Kumaranagi Hanta Kauravara Konde Gurumadhva Muniraya।
Ananta Punyagalisi Srikantanige Arpiside Gurumadhva Muniraya॥ 3 ||
Advaitaranu Kadi Geddu Ninna Bhaktarige Gurumadhva Muniraya।
Sud’dha Tatparyavakya Pad’dhatiya Torisidi Gurumadhva Muniraya॥ 4 ||
Gurupranesa Viththala Paranendu Danguruva Gurumadhva Muniraya।
Sari Sajjanarige Hariya Loka Torisida Gurumadhva Muniraya॥ 5 ||
Session 2 – During Homa
Pavamana Pavamana – Sri Vijaya Vittala Dasaru
ಪವಮಾನ ಪವಮಾನ ಜಗದ ಪ್ರಾಣ ಸಂಕರುಷಣ
ಭವಭಯಾರಣ್ಯ ದಹನ |ಪ|
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ |ಅ.ಪ|
ಹೇಮ ಕಚ್ಚುಟ ಉಪವೀತ ಧರಿಪ ಮಾರುತ
ಕಾಮಾದಿ ವರ್ಗ ರಹಿತ
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ
ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು || 1 ||
ವಜ್ರ ಶರೀರ ಗಂಭೀರ ಮುಕುಟಧರ
ದುರ್ಜನವನ ಕುಠಾರ
ನಿರ್ಜರ ಮಣಿದಯಾ ಪಾರ ವಾರ ಉದಾರ
ಸಜ್ಜನರಘವ ಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ
ಮಾರ್ಜನದಲಿ ಭವ ವರ್ಜಿತನೆನಿಸೊ || 2 ||
ಪ್ರಾಣ ಅಪಾನ ವ್ಯಾನೋದಾನ ಸಮಾನ
ಆನಂದ ಭಾರತಿ ರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ
ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ
ಕಾಣಿಸಿ ಕೊಡುವದು ಭಾನು ಪ್ರಕಾಶ || 3 ||
pavamAna pavamAna jagada prANa
saMkaruShaNa bhava BayAraNya dahana | pa |
SravaNave modalAda navavidha Bakutiya
tavakadiMdali koDu kavijanapriyA | apa |
hEma kacchUTa upavIta dharipa mArutha
kAmAdivargarahitA
vyOmAdi sakala vyAvputA nirBItA
rAmachaMdrana nijadUta
yAma yAmake ninAradhipudake
kAmipe enagidu nEmisi pratidina manasige suKastOmava
tOruta pAmaramatiyanu nImANipudO || 1 ||
vajra SarIra gaMBIra mukuTadhara durjanavanakuThAra
nirjaramaNi dayA pArAvArA udAra sajjanaraGaparihAra
arjunagolidaMdu dhvajavAnisi niMdu mUrjagavarivaMte
garjane mADidi hejje hejjege nin abja pAdadoLi mUrjagadali
Bavavarjita nenisO || 2 ||
prANa apAna vyAna udAna samAna AnaMda BArati ramaNa
nIne SarvAdigIrvANAdyarige jAnadhanapAlipa varENya
nAnu nirutadali EnEnesaguve mAnasAdi karma
ninagoppisidenO prANanAtha sirivijayaviThalana
kANisikoDuvudu BAnuprakASa || 3 ||
Veera Hanuma – Shree Purandara Dasaru
ವೀರ ಹನುಮ ಬಹು ಪರಾಕ್ರಮ ||ಪ||
ಸಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ ||ಅ.ಪ||
ರಾಮ ದೂತನೆನಿಸಿ ಕೊಂಡೆ ನೀ ರಾಕ್ಷಸರ
ವನವನೆಲ್ಲ ಕಿತ್ತು ಬಂದೆ ನೀ
ಜಾನಕಿಗೆ ಮುದ್ರೆಯಿತ್ತು ಜಗತಿಗೆಲ್ಲ ಹರ್ಷವಿತ್ತು
ಚೂಡಾಮಣಿಯ ರಾಮಗಿತ್ತು ಲೋಕಕೆ ಮುದ್ದೆನಿಸಿ ಮೆರೆವ || 1 ||
ಗೋಪಿಸುತನ ಪಾದ ಪೂಜಿಸಿ ಗದೆಯ ಧರಿಸಿ
ಬಕಾಸುರನ ಸಂಹರಿಸಿದೆ
ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು
ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ || 2 ||
ಮಧ್ಯಗೇಹನಲ್ಲಿ ಜನಿಸಿ ನೀ ಬಾಲ್ಯದಲ್ಲಿ
ಮಸ್ಕರೀಯ ರೂಪಗೊಂಡೆ ನೀ
ಸತ್ಯವತಿಯ ಸುತನ ಭಜಿಸಿ ಸನ್ಮುಖದಿ ಭಾಷ್ಯ ಮಾಡಿ
ಸಜ್ಜನರ ಪೊರೆವ ಮುದ್ದು ಪುರಂದರವಿಠಲನ ದಾಸ || 3 ||
Veera Hanuma Bahu paraakrama || pa||
Sugnana vittu paalisenna jeevarotthama|| A Pa||
Raama dhoota nenisi konde nee
Raakshasara vanavanella kittu bande nee|
Jaanakige mudre ittu jagattigella harushavittu
Choodamaniya Raamagittu, lokake muttenisi mereva || 1 ||
Gopisutana paada poojisi Gadheya dharisi
bakaasurana samhariside|
Draupadiya moreya keli matte keechakanna kondu
Bheema nemba naama dharisi Sangraama dheeranaagi jagadi || 2 ||
Madhya gehanalli janisi nee
Baalyadalli matsariya roopa gonde nee|
Sathyavathiya sutana bhajisi sanmukhadi bhaashya maadi
Sajjanara poreva muddu Purandara vittalana daasa || 3 ||
Session 3 – During Teertha ( Will be added soon) – 12 noon
Palayachyuta – Shri Vadiraja Thirtharu on Lord Krishna of Udupi.
ಪಾಲಯಾಚ್ಯುತ ಪಾಲಯಾಜಿತ ಪಾಲಯಾ ಕಮಲಾಲಯ |
ಲೀಲಯಾ ಧೃತ ಭೂಧರಾಂಬುರುಹೋದರ ಸ್ವಜನೋದರ |
ಮಧ್ವಮಾನಸಪದ್ಮಭಾನುಸಮಂ ಸ್ಮರಪ್ರತಿಮಂ ಸ್ಮರ |
ಸ್ನಿಗ್ದನಿರ್ಮಲಶೀತಕಾಂತಿಲಸನ್ಮುಖಂ ಕರುಣೋನ್ಮುಖಮ್ |
ಹೃದ್ಯಕಂಬುಜ ಮಾನಕಂಧರಮಕ್ಷಯಂ ದುರಿತಕ್ಷಯಂ |
ಸ್ನಿಗ್ದ ಸಂಸ್ತುತ ರೂಪ್ಯಪೀಠಕೃತಾಲಯಂ ಹರಿಮಾಲಯಮ್ | ೧ |
ಅಂಗದಾದಿಸುಶೋಭಿಪಾಣಿಯುಗೇನ ಸಂಕ್ಶುಭಿತೈನಸಂ |
ತುಂಗಮಾಲ್ಯ ಮಣೀಂದ್ರಹಾರಸರೋರಸಂ ಖಲನೀರಸಮ್ |
ಮಂಗಲಪ್ರದಮಂಥದಾಮವಿರಾಚಿತಂ ಭಜತಾಜಿತಂ ತಂಗೃಣೇ |
ವರ ರೂಪ್ಯಪೀಠಕೃತಾಲಯಂ ಹರಿಮಾಲಯಮ್ | ೨ |
ಪೀನರಮ್ಯತನೂದರಂ ಭಜ ಹೇ ಮನಃ ಶುಭ ಹೇ ಮನಃ
ಸ್ವಾನುಭಾವನಿದರ್ಶನಾಯ ದಿಶಂತಮರ್ಥಿಸುಶಂತಮಮ್ |
ಆನತೋಸ್ಮಿ ನಿಜಾರ್ಜುನಪ್ರಿಯಸಾಧಕಂ ಖಲಬಾಧಕಂ |
ಹೀನತೋಜ್ಝಿತ ರೂಪ್ಯಪೀಠಕೃತಾಲಯಂ ಹರಿಮಾಲಯಮ್ | ೩ |
ಹೈಮಕಿಂಕಿಣಿಮಾಲಿಕಾರಶನಾಂಚಿತಂ ತಮವಂಚಿತಂ |
ಕಮ್ರಕಾಂಚನ ವಸ್ತ್ರಚಿತ್ರಕಟಿಂ ಘನಪ್ರಭಯಾ ಘನಮ್ |
ನಮ್ರನಾಗರೋಪಮೋರುರುಮನಾಮಯಯಂ ಶುಭಧೀಮಯಂ |
ನೌಮ್ಯಹಂ ವರ ರೂಪ್ಯಪೀಠಕೃತಾಲಯಂ ಹರಿಮಾಲಯಮ್ | ೪ |
ವೃತ್ತಜಾನುಮನೋಜ್ಞಜಂಘಮಮೋಹದಂ ಪರಮೋಹದಂ |
ರತ್ನಕಲ್ಪನಖತ್ವಿಷಾ ಹೃತ್ತಹೃತ್ತಮಸ್ತತಿಮುತ್ತಮಮ್ |
ಪ್ರತ್ಯಹಂ ರಚಿತಾರ್ಚನಂ ರಮಯಾ ಸ್ವಯಾಗತಯಾ ಸ್ವಯಂ |
ಚಿತ್ತ ಚಿಂತಯ ರೂಪ್ಯಪೀಠಕೃತಾಲಯಂ ಹರಿಮಾಲಯಮ್ | ೫ |
ಚಾರುಪಾದಸರೋಜಯುಗ್ಮರುಚಾಮರೋಚ್ಚಯಚಾಮರೋ |
ದಾರಮೂರ್ಧಜಭಾನುಮಂಡಲರಂಜಕಂ ಕಲಿಭಂಜಕಮ್ |
ವೀರತೋಚಿತಭೂಷಣಂ ವರನೂಪುರಂಸ್ವತನೂಪುರಂ |
ಧಾರಯಾತ್ಮನಿರೂಪ್ಯಪೀಠಕೃತಾಲಯಂ ಹರಿಮಾಲಯಮ್ | ೬ |
ಶುಷ್ಕವಾದಿಮನೋತಿದೂರತರಾಗಮೋತ್ಸವದಾಗಮಂ |
ಸತ್ಕವೀಂದ್ರವಚೋವಿಲಾಸಮಹೋದಯಂ ಮಹಿತೋದಯಮ್ |
ಲಕ್ಷಯಾಮಿ ಯತೀಶ್ವರೈಃ ಕ್ತಪೂಜನಂ ಗುಣಭಾಜನಂ |
ಧಿಕೃತೋಪಮ ರೂಪ್ಯಪೀಠಕೃತಾಲಯಂ ಹರಿಮಾಲಯಮ್ | ೭ |
ನಾರದಪ್ರಿಯಮಾವಿಶಾಂಬುರುಹೇಕ್ಷಣಂ ನಿಜರಕ್ಷಣಂ |
ತಾರಕೋಪಮಚಾರುದೀಪಚಯಾಂತರೇ ಗತಚಿಂತರೇ |
ಧೀರ ಮಾನಸ ಪೂರ್ಣಚಂದ್ರಸಮಾನಮಚ್ಯುತಮಾನಮ |
ದ್ವಾರಕೋಪಮ ರೂಪ್ಯಪೀಠಕೃತಾಲಯಂ ಹರಿಮಾಲಯಮ್ | ೮ |
ರೂಪ್ಯಪೀಠಕೃತಾಲಯಸ್ಯ ಹರೇಃ ಪ್ರಿಯಂ ದುರಿತಾಪ್ರಿಯಂ |
ತತ್ಪದಾರ್ಚಕವಾದಿರಾಜಯತೀರಿತಂ ಗುಣಪೂರಿತಮ್ |
ಗೋಪ್ಯಮಷ್ಟಕಮೆತದುಚ್ಚಮುದೇ ಮಮಾಸ್ತ್ವಿಹ ನಿರ್ಮಮ |
ಪ್ರಾಪ್ಯಶುದ್ಧಫಲಾಯ ತತ್ರ ಸುಕೋಮಲಂ ಹೃತಧೀಮಲಮ್ | ೯ | ||
ಇತಿ ಶ್ರೀ ವಾದಿರಾಜತೀರ್ಥಶ್ರೀ ಚರಣಕೃತಂ ಶ್ರೀ ಕೃಷ್ಣಾಷ್ಟಕಮ್ ||
Palayachyutha palayajitha palaya kamalalaya,
Leelaya drutha bhoodharamburuhodhra swajanodhara ||pa||
Madhwa manasa padma bhanu samam smara prathimam(sam) smara
Snighdha nirmala seethe kanthila sanmukham karunonmukham
Hrudhya kambhu samana kandharamakshayam durithakshayam
Snigdha samsthutha roupya peeta kruthalayam harimalayam || 1 ||
Angadhadhi sushobhi pani yugena samkshubhithainasam
Thunga malya manindra hara sarorasam khala nerasam
Mangalapradha manda dhahama virajitham bhajathajitham
Tham grena vara roupya peeta kruthalayam harimalayam || 2 ||
Peena ramya thanudharam bhaja hey mana shubha hey mana
Svanubhava nidharsanaya disantha mardhisu santhamam
Aanathosmi nijarjuna priya sadhakam khalabhadhakam
Heenathojijjatharaoupya peeta kruthalayam harimalayam || 3 ||
Hema malika kinkini malikarasanchitham thamavanchitham
Rathna kanchana chithra vasthrakateem Ghana prabhaya ghanam
Kamra naga karopa moru mana mayam shubhadhee mayam
Naumyaham vara roupya peeta kruthalayam harimalayam || 4 ||
Vrutha janu manojna janga mamohadham paramohadham
Rathna kalpa nakhathwisha hrutha hruththamasthathimuthamam
Prathyaham rachitharchanam ramaya swayaagathaya swayam
Chitha chinthya roupya peeta kruthalayam harimalayam || 5 ||
Charu pada saroja yugma rucha amarochayachamaro
Dhara mordh a jabhara mandala ranchakam kali bhanchakam
Veerathothuchitha bhooshanam vara noopuam swathanuparam
Dharayaathmani roupya peeta kruthalayam harimalayam || 6 ||
Sushka vadhi mano aathidhoora tharagamothsava dagamam
Sath kaveendra vacho vilasa mahodhaam maahithodhayam
Lakshyami yatheeswarai krutha poojanam guna bhajanam
Ddhikruthopama roupya peeta kruthalayam harimalayam || 7 ||
Narada priyamavishambhuruhekshanam nija lakshanam
Tharakopama charu dheepa chayanthare gatha chinthare
Dheera manasa poorna Chandra samanamachyuthamanama
Dhwarakopama roupya peeta kruthalayam harimalayam || 8 ||
Roupyapeeta kruthalayasya hare priyam durithaapriyam
Thad padarchaka Vadhi raja yatiritham guna pooritham
Gopyamashtakam edathuchamudhe mamasthivaha nirmama
Prapya shudha phalaya thathra sukomalam hruthadheemalam || 9 ||
Poornaprajna stotra – Sri Vadirajaru
ನಳಿನಸೌಂದರ್ಯಜಿಷ್ಣುಂ ಪದಾಭ್ಯಾಂ
ಲಳಿತರೂಪಾಂಗುಲೀಮಂಗಲಾಭ್ಯಾಮ್ |
ದಳಿತನೂತ್ನೇಂದುಮಾನಂ ನಖಾಲ್ಯಾ
ದಳಿತಶೋಣೋಪಲಾಳೀಕನಾಲ್ಯಾ ||೧||
ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ
ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ||[ಧ್ರುವಪದ]
ಅಹಿವಿಹಂಗೇಶಭೂತೇಶಪೂರ್ವೈ-
ರಹಮಹಂಪೂರ್ವಮಿತ್ಯಾಪ್ತಚಿತ್ತೈಃ |
ಮುಹುರಹೋ ಮಾಂಸನೇತ್ರೈರದೃಷ್ಟೈ-
ರಿಹ ಸಮಾಜುಷ್ಟಜಂಘಾಂಘ್ರಿರೇಣುಮ್||೨||
ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ
ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ||[ಧ್ರುವಪದ]
ಕನಯಮಾನಂ ದಧಾನಂ ಪ್ರಕಾಶೈಃ
ಕನಕಕೌಶೇಯಮಾಶಾವಕಾಶಮ್ |
ಜನಮನೋಹಾರಿವೃತ್ತೋರುಕಾಂತ್ಯಾ
ಜನಿತಸಂಪರ್ಕಸಂಪದ್ ವಿಶೇಷಮ್||೩||
ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ
ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ||[ಧ್ರುವಪದ]
ಪರದುರಾರೋಹಮಾರೋಹಯೇದ್ ಯಂ
ಪುರುಷಕಾಂಡಪ್ರಕಾಂಡೋ ನಿಜಾಂಕಮ್ |
ನಿರವಧಿಸ್ನೇಹಸಂದೋಹಮಂದ
ಸ್ಫುರಿತಹಾಸಾವಲೋಕೇನ ಸಾಕಮ್ ||೪||
ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ
ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ||[ಧ್ರುವಪದ]
ಸುವಲಿಭಂ ಭದ್ರಗಂಭೀರನಾಭಿಂ
ಶಿವಮುದಾರೋದರಂ ಮಂಜುಮಧ್ಯಮ್ |
ಸುವಿಪುಲೋರಸ್ಥಲಂ ಮಾನಯಂತ
ಕವಿಜನಾ ಯಸ್ಯ ಸಂದೇಹದೇಹಮ್ ||೫||
ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ
ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ||[ಧ್ರುವಪದ]
ವಿಕಟಸುಸ್ತಂಭಸಂಭಾವನೀಯಂ
ಪ್ರಕಟಮಂಭೋಜನಾಭೋಪಭಾಜಾ |
ವಿಕಟವಿದ್ಯಾವಿಲಾಸಾಂಗಣಂ ಧೀ-
ಸ್ಫುಟಕನನ್ಮಂಟಪಂ ಯಸ್ಯ ರಮ್ಯಮ್ ||೬||
ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ
ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ||[ಧ್ರುವಪದ]
ಭುಜಗಭೋಗಾಭಮುದ್ಯಮ್ಯ ಹೃದ್ಯಂ
ನಿಜಭುಜಂ ದಕ್ಷಿಣಂ ಲಕ್ಷಣಾಢ್ಯಮ್ |
ಲಳಿತಮುದ್ರಿಕ್ತವಿಜ್ಞಾನಮುದ್ರಂ
ಭಜಭಜಾನಂತಮಿತ್ಯಾಲಪಂತಮ್ ||೭||
ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ
ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ||[ಧ್ರುವಪದ]
ಭವದವೋಷ್ಣೇನ ತಾತಪ್ಯಮಾನಾನ್
ಭುವಿ ಪರಂ ನಾಥಮಪ್ರೇಕ್ಷಮಾಣಾನ್ |
ಭುವನಮಾನ್ಯೇನ ಚಾನ್ಯೇನ ದೋಷ್ಣಾ
ಭವತು ಭೀರ್ಮೇತಿ ನಃ ಸಾಂತ್ವಯಂತಮ್ ||೮||
ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ
ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ||[ಧ್ರುವಪದ]
ಅಧಿಗಲಂ ವಾನರೋ ವನ್ಯಮಾಲಾಂ
ವಿಧಿಮುಖೋದಾರಭೂಭಾರಮಾಲಾಮ್ |
ವಿಧಿವಿಧಾತ್ರಾ~ಕ್ಷಮಾಲಾಂ ಪುರಾ ಯೋ
ವ್ಯಧಿತ ಲೋಕಾತತಾಂ ಕೀರ್ತಿಮಾಲಾಮ್ ||೯||
ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ
ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ||[ಧ್ರುವಪದ]
ಮೃದುತಮಂ ವಿಭ್ರಮಂ ಬಿಭ್ರದಾಸೀದ್
ವದನಮಿಂದೋಃ ಸಮಂ ಯಸ್ಯ ಸಾಕ್ಷಾತ್ |
ಮದನಮುದ್ದೀಪಯೇದಿಂದುರೇತ-
ನ್ಮದಸಖಂ ಸಂದಹೇದೇಷ ಭೇದಃ ||೧೦||
ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ
ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ||[ಧ್ರುವಪದ]
ವಿಮುಮುಹುಃ ಸಿಂಹನಾದೇನ ದೈತ್ಯಾಃ
ಪ್ರಮುಮುಹುಃ ಸಜ್ಜನಾಃ ಸಾಧುವಾಣ್ಯಾ |
ಮಮ ಗುರೋಃ ಪೂರ್ವತನ್ವೋರಿದಾನೀಂ
ಸಮಮಿದಂ ವಾಖ್ಯಯಾ ಯಸ್ಯ ಜಾತಮ್ ||೧೧||
ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ
ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ||[ಧ್ರುವಪದ]
ಶಿವಮುಖೈರೇಕತೋ ದೇವವೃಂದೈಃ
ಶುಕಮುಖೈರನ್ಯತಃ ಸನ್ಮುನೀಂದ್ರೈಃ |
ಶುಕಶುಚಿವ್ಯಾಖ್ಯಮಾಸ್ರಾಕುಲಾಕ್ಷೈಃ
ಶಿರಸಿ ಬದ್ಧಾಂಜಲಿಂ ಭಕ್ತಿಹೇತೋಃ ||೧೨||
ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ
ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ||[ಧ್ರುವಪದ]
ತರುಣಹಾರಾವಲೀದಂತಪಂಕ್ತಿಂ
ಶರಣದಂ ಶಾರದಾಶ್ಲಾಘ್ಯವಾಚಮ್ |
ಕರುಣಯಾ ಮಂದಹಾಸೇನ ಮಂದಂ
ಶರಣಯಾತಂ ಜನಂ ವೀಕ್ಷಮಾಣಮ್ ||೧೩||
ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ
ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ||[ಧ್ರುವಪದ]
ರಘುಪವಾರ್ಷ್ಣೇಯವಾಸಿಷ್ಠರೂಪಾಃ
ಪ್ರಭುಮಹಾಜ್ಞಾಮನೋಜ್ಞಾವತಂಸಮ್ |
ತ್ರಿವಪುಷಾ~ಪ್ಯುತ್ತಮೇನೋತ್ತಮಾಂಗಂ
ವಿದಧಿರೇ ಯೇನ ಚಾನ್ಯೇ ನ ತುಷ್ಟಾಃ ||೧೪||
ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ
ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ||[ಧ್ರುವಪದ]
ವಿಧಿಭವೇಂದ್ರಾದಿದೇವಾಧಿನಾಥಂ
ಕಮಲಯಾ ಸನ್ನತಶ್ರೀಪದಾಬ್ಜಮ್ |
ಕಮಲನಾಭಂ ಭಜಂತಂ ಸುಭಕ್ತ್ಯಾ
ಸುಜನತುಷ್ಟಿಪ್ರದಂ ವಾಸುದೇವಮ್ ||೧೫||
ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ
ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ||
Naḷinasaundaryajiṣṇuṁ padābhyāṁ
laḷitarūpāṅgulīmangalābhyām |
daḷitanūtnēndumānaṁ nakhālyā
daḷitaśōṇōpalāḷīkanālyā ||1||
praṇatavān prāṇināṁ prāṇabhūtaṁ
praṇatibhiḥ prīṇayē pūrṇabōdham ||[dhruvapada]
Ahivihaṅgēśabhūtēśapūrvai-
rahamahampūrvamityāptacittaiḥ |
muhurahō mānsanētrairadr̥ṣṭai-
riha samājuṣṭajaṅghāṅghrirēṇum||2||
praṇatavān prāṇināṁ prāṇabhūtaṁ
praṇatibhiḥ prīṇayē pūrṇabōdham ||[dhruvapada]
kanayamānaṁ dadhānaṁ prakāśaiḥ
kanakakauśēyamāśāvakāśam |
janamanōhārivr̥ttōrukāntyā
janitasamparkasampad viśēṣam||3||
praṇatavān prāṇināṁ prāṇabhūtaṁ
praṇatibhiḥ prīṇayē pūrṇabōdham ||[dhruvapada]
Paradurārōhamārōhayēd yaṁ
puruṣakāṇḍaprakāṇḍō nijāṅkam |
niravadhisnēhasandōhamanda
sphuritahāsāvalōkēna sākam ||4||
praṇatavān prāṇināṁ prāṇabhūtaṁ
praṇatibhiḥ prīṇayē pūrṇabōdham ||[dhruvapada]
suvalibhaṁ bhadragambhīranābhiṁ
śivamudārōdaraṁ man̄jumadhyam |
suvipulōrasthalaṁ mānayanta
kavijanā yasya sandēhadēham ||5||
praṇatavān prāṇināṁ prāṇabhūtaṁ
praṇatibhiḥ prīṇayē pūrṇabōdham ||[dhruvapada]
Vikaṭasustambhasambhāvanīyaṁ
prakaṭamambhōjanābhōpabhājā |
vikaṭavidyāvilāsāṅgaṇaṁ dhī-
sphuṭakananmaṇṭapaṁ yasya ramyam ||6||
praṇatavān prāṇināṁ prāṇabhūtaṁ
praṇatibhiḥ prīṇayē pūrṇabōdham ||[dhruvapada]
bhujagabhōgābhamudyamya hr̥dyaṁ
nijabhujaṁ dakṣiṇaṁ lakṣaṇāḍhyam |
laḷitamudriktavijñānamudraṁ
bhajabhajānantamityālapantam ||7||
praṇatavān prāṇināṁ prāṇabhūtaṁ
praṇatibhiḥ prīṇayē pūrṇabōdham ||[dhruvapada]
bhavadavōṣṇēna tātapyamānān
bhuvi paraṁ nāthamaprēkṣamāṇān |
bhuvanamān’yēna cān’yēna dōṣṇā
bhavatu bhīrmēti naḥ sāntvayantam ||8||
praṇatavān prāṇināṁ prāṇabhūtaṁ
praṇatibhiḥ prīṇayē pūrṇabōdham ||[dhruvapada]
Adhigalaṁ vānarō van’yamālāṁ
vidhimukhōdārabhūbhāramālām |
vidhividhātrā~kṣamālāṁ purā yō
vyadhita lōkātatāṁ kīrtimālām ||9||
praṇatavān prāṇināṁ prāṇabhūtaṁ
praṇatibhiḥ prīṇayē pūrṇabōdham ||[dhruvapada]
mr̥dutamaṁ vibhramaṁ bibhradāsīd
vadanamindōḥ samaṁ yasya sākṣāt |
madanamuddīpayēdindurēta-
nmadasakhaṁ sandahēdēṣa bhēdaḥ ||10||
praṇatavān prāṇināṁ prāṇabhūtaṁ
praṇatibhiḥ prīṇayē pūrṇabōdham ||[dhruvapada]
vimumuhuḥ sinhanādēna daityāḥ
pramumuhuḥ sajjanāḥ sādhuvāṇyā |
mama gurōḥ pūrvatanvōridānīṁ
samamidaṁ vākhyayā yasya jātam ||11||
praṇatavān prāṇināṁ prāṇabhūtaṁ
praṇatibhiḥ prīṇayē pūrṇabōdham ||[dhruvapada]
Śivamukhairēkatō dēvavr̥ndaiḥ
śukamukhairan’yataḥ sanmunīndraiḥ |
śukaśucivyākhyamāsrākulākṣaiḥ
śirasi bad’dhān̄jaliṁ bhaktihētōḥ ||12||
praṇatavān prāṇināṁ prāṇabhūtaṁ
praṇatibhiḥ prīṇayē pūrṇabōdham ||[dhruvapada]
taruṇahārāvalīdantapaṅktiṁ
śaraṇadaṁ śāradāślāghyavācam |
karuṇayā mandahāsēna mandaṁ
śaraṇayātaṁ janaṁ vīkṣamāṇam ||13||
praṇatavān prāṇināṁ prāṇabhūtaṁ
praṇatibhiḥ prīṇayē pūrṇabōdham ||[dhruvapada]
raghupavārṣṇēyavāsiṣṭharūpāḥ
prabhumahājñāmanōjñāvatansam |
trivapuṣā~pyuttamēnōttamāṅgaṁ
vidadhirē yēna cān’yē na tuṣṭāḥ ||14||
praṇatavān prāṇināṁ prāṇabhūtaṁ
praṇatibhiḥ prīṇayē pūrṇabōdham ||[dhruvapada]
Vidhibhavēndrādidēvādhināthaṁ
kamalayā sannataśrīpadābjam |
kamalanābhaṁ bhajantaṁ subhaktyā
sujanatuṣṭipradaṁ vāsudēvam ||15||
praṇatavān prāṇināṁ prāṇabhūtaṁ
praṇatibhiḥ prīṇayē pūrṇabōdham ||
Madhvanama – by Shri Sreepada Rajaru
You find Madhwa Nama lyrics at the following links: https://meerasubbarao.files.wordpress.com/2009/02/madhwanama.pdf
And English : https://meerasubbarao.wordpress.com/2008/02/10/madhwa-nama/