Archive for May 10th, 2024

Bandalu Node Mandiradolu Bhagyadalaksmi | Sri Jagannatha Dasaru

Composer : Sri Jagannatha Dasaru
Ankita : Jagannatha Vittala
Singer : Ms. Vinaya

ಬಂದಳು ನೋಡೇ ಮಂದಿರದೊಳು ಭಾಗ್ಯದಲಕ್ಷ್ಮೀ |
ಭಾಗ್ಯದಲಕ್ಷ್ಮೀ ಬಂದಾಳು ನೋಡೇ || PA ||

ಅಂದುಗೆ ಕಿರು ಗೆಜ್ಜೆ ಘಿಲ್ ಘಿಲ್ಲೇನುತ || A PA ||

ಘಿಲ್ ಘಿಲ್ ಘಿಲ್ ಘಿಲ್ ಘಿಲ್ಲೇನುತಾ |
ಮುದ್ದು ಪಾದದಿ ಹೆಜ್ಜೆಯನಿಕ್ಕುತ್ತಾ || 1 ||

ಎಡ ಬಲದಲ್ಲಿ ಗಜಗಳಿಂದ ಪೂಜೆಗೊಳ್ಳುತ |
ಬಿಡದೆ ತನ್ನ ಕರ ಕಮಲದಿ ಅಭಯ ಕೊಡುತಲಿ || 2 ||

ಅತಿ ಹರುಷದಿ ಹಿತದಿ ತನ್ನ ಪತಿಯ ಸಹಿತಾಗಿ |
ವಾರಿನೋಟದಿಂದ ಭಕ್ತರಿಗೆ ವರವ ಕೊಡುತಲಿ || 3 ||

ಸೃಷ್ಟಿಗೊಡೆಯ ತಂದೆ ಜಗನ್ನಾಥವಿಠ್ಠಲನ |
ಪಟ್ಟದರಸಿ ಅರ್ತಿಯಿಂದಲಿ ಭಕ್ತರ ಮನೆಗೆ || 4 ||

bandalu node mandiradolu bhagyadalaksmi |
bhagyadalaksmi bandalu node || PA ||

anduge kiru gejje ghil ghillenuta || A PA ||

ghil ghil ghil ghil ghillenuta |
muddu padadi hejjeyanikkutta || 1 ||

eda baladalli gajagalinda pujegolluta |
bidade tanna kara kamaladi abhaya kodutali || 2 ||

ati harusadi hitadi tanna patiya sahitagi |
varinotadinda bhaktarige varava kodutali || 3 ||

srstigodeya tande jagannathaviththalana |
pattadarasi artiyindali bhaktara manege || 4 ||