May 2024 Important Dates

May has a number of significant festivals. Will share information and details specific to each festival, as always.

P.S: Akshaya Truteeya is composed of two words, where akshaya means growth and trutiya is the third day in the calendar. As per the Madhwa calendar, performing japa ಜಪ , homa ಹೋಮ , pitru tharpana ಪಿತೃ ತರ್ಪಣ , and dana ದಾನ will give immense growth. Also, gandha has to be applied to God.

Dana to be given during Vaishaka Masa and its benefits. As per Uttaradi Mutta Panchanga. Some are very easy to donate. See what’s feasible and suits your budget and donate accordingly.

Do these donations from May 8th – June 6th – USA. May 9th – June 6th – India.

ದಾನ – Danaಫಲ – Benefits
ಜಲದಾನ – Waterಹಲ್ಲಿ ಜನ್ಮ ನಿವೃತ್ತಿ – Lizard birth retirement (😃). You must have heard your Mom or Grandmother say give them water, if no you will become a Lizard.
ಹಾಸಿಗೆ – Bedಸರ್ವಭೋಗ – All benefits
ಚಾಪೆ – Matಸಂಸಾರದಿಂದ ಮುಕ್ತಿ – Freedom from samsara
ಕಂಬಳಿ – Blanketಅಪಮೃತ್ಯು ಪರಿಹಾರ – Prevents accidental deaths
ವಸ್ತ್ರ – Clothesಪೂರ್ಣಾಯು – Full life
ಕುಸುಮ-ಕುಂಕುಮ – Kusuma-Kumkumರಾಜ್ಯಪದವೀ – Live like a king?
ತಾಂಬೂಲ – Tambulaಸಾರ್ವಭೌಮಪದವೀ – Sarvabhumapadavi
ನಾರಿಕೇಲ – Coconutಸಪ್ತಜನ್ಮವಿಪ್ರತ್ವ – Saptajanmavipratva
ಮಜ್ಜಿಗೆ – Buttermilkವಿದ್ಯಾಧನ ಪ್ರಾಪ್ತಿ – Getting an education is a blessing
ಕೋಸಂಬರಿ – Kosambariಶ್ವೇತದ್ವೀಪವಾಸ – Svetadweepavasa
https://meerasubbarao.wordpress.com/?s=Kosambari
ಪಾನಕ – Panakaಪಿತೃಗಳ ತೃಪ್ತಿ – Forefathers will be happy
https://meerasubbarao.wordpress.com/2013/04/14/panaka-recipes-for-shree-rama-navami/
ಪಾದರಕ್ಷೆ – Footwearನರಕಪ್ರವೇಶವಿಲ್ಲ – You will never go to hell
ಛತ್ರಿ – Umbrellaತಾಪತ್ರಯನಾಶ – Get rid of all bad things happening
ಮೊಸರುಬುತ್ತಿ – Yogurt riceಸ್ವರ್ಗ – Heaven

Important Dates in May 2024 listed below for India and USA:

Festivals & Key datesIndia Dates according to UM MuttaUSA Dates according to Putige Mutta, North CarolinaDetails
Ekadashi May 4thMay 4th
DwadashiMay 5thMay 5th
AmavasyaMay 8thMay 7th
Vaishakha masa beginsMay 9thMay 8th
Parashurama JayantiMay 10thMay 9th
Akshaya TriteeyaMay 10thMay 10thhttps://meerasubbarao.wordpress.com/?s=Akshaya
EkadashiMay 19thMay 18th
DwadashiMay 20thMay 19th Harivasara until 10:52AM
Narasimha Jayanthi May 21stMay 21sthttps://meerasubbarao.wordpress.com/category/lord-narashima/
https://meerasubbarao.wordpress.com/?s=Narashima+Jayanthi
Purnima – Vaishkha (Buddha) PoornimaMay 23rdMay 23rd

Important Links:

  1. 2024-2025 Key dates – https://meerasubbarao.wordpress.com/festivals/2024-2025/
  2. Lyrics on Lord Narasimha – https://meerasubbarao.wordpress.com/category/lord-narashima/
  3. Akshaya Threeteya – https://meerasubbarao.wordpress.com/?s=Akshaya

Bagi Bhajisiro Raghavendra Yatiya Koduvanu Sanmatiya | Sri Abhinava Janardhana Vittala Dasaru

Composer : Sri Abhinava Janardhana Vittala Dasaru
Ankita : Abhinava Janardhana Vittala

ಬಾಗಿ ಭಜಿಸಿರೊ ರಾಘವೇಂದ್ರ ಯತಿಯ ಕೊಡುವನು ಸನ್ಮತಿಯ || PA ||

ಯೋಗಿಕುಲವರ್ಯ ಭಾಗವತರಪ್ರಿಯ ಸತ್ಕವಿಕುಲಗೇಯ || A PA ||

ಯತಿಸುಧೀಂದ್ರಕರಸುತಾದ್ಭುತಚರಿಯ ಪುಸಿಯಲ್ಲವು ಖರಿಯ
ಶ್ರಿತಜನನುತ ಕಾಮಿತತರು ಸುರಧೇನು ಚಿಂತಾಮಣಿ ತಾನು
ಶತಪರ್ವತವತ್ಸರ ವೃಂದಾವನದಿ ನಲಿವನು ಮುದದಿ
ಚತುರವಿಧಸುಪುರುಷಾರ್ಥಗಳನೆ ಕೊಡುವ ನಂಬಿದವರಘ ತಡೆವ || 1 ||

ವರಮಂತ್ರಾಲಯ ಸುರುಚಿರ ಗೃಹದಲ್ಲಿ ವರಹಜತೀರದಲಿ
ಮೆರೆವ ಮಂದರನು ಕರೆದು ಪಾಪ ಕಳೆವ ಮನದಲಿ ತಾ ಪೊಳೆವ
ಸರ್ವಜ್ಞರು ಮೊದಲಾದ ಮುನಿಗಳಲ್ಲಿ ಇಪ್ಪರು ಮುದದಲ್ಲಿ
ದುರಭಿಮಾನದಲಿ ಬಾರದವನೆ ಕೆಟ್ಟ ಬರಲವ ಸುಶ್ರೇಷ್ಠ || 2 ||

ಮಧ್ವಮುನಿಯಸುಮತಾಬ್ಧಿಪೂರ್ಣಚಂದ್ರ ಸದ್ಗುಣಸಾಂದ್ರ
ಸದ್ವೈಷ್ಣವಗುರು ಕುಮತಾದ್ರಿಗೆಕುಲಿಶ ಕಾಷಾಯವಾಸ
ಸಿದ್ಧಾಂತಸುಧೆಗೆ ಪರಿಮಳಾಖ್ಯ ಗ್ರಂಥ ಮಾಡಿದ ದಯವಂತ
ಮುದ್ದು ಅಭಿನವಜನಾರ್ದನವಿಠಲನ್ನ ಸದ್ಭಕ್ತವರೇಣ್ಯ || 3 ||

bagi bhajisiro raghavendra yatiya koduvanu sanmatiya || PA ||

yogikulavarya bhagavatarapriya satkavikulageya || A PA ||

yatisudhindrakarasutadbhutacariya pusiyallavu khariya
sritajananuta kamitataru suradhenu cintamani tanu
sataparvatavatsara vrndavanadi nalivanu mudadi
caturavidhasupurusarthagalane koduva nambidavaragha tadeva || 1 ||

varamantralaya surucira grhadalli varahajatiradali
mereva mandaranu karedu papa kaleva manadali ta poleva
sarvajnaru modalada munigalalli ipparu mudadalli
durabhimanadali baradavane ketta baralava susrestha || 2 ||

madhvamuniyasumatabdhipurnacandra sadgunasandra
sadvaisnavaguru kumatadrigekulisa kasayavasa
sid’dhantasudhege parimalakhya grantha madida dayavanta
muddu abhinavajanardanavithalanna sadbhaktavarenya || 3 ||

Nodu Nodu Venkatesha | Sri Puranadara Dasaru

Composer : Sri Puranadara Dasaru
Ankita : Purandara Vittala
Book Ref : Haridasaru Kanda Srinivasa and this is the 66th song. Most other places, the first paragraph isn’t there.  ಶ್ರೀನಿವಾಸದೇವರು ಬೇಟೆಗೆ ಹೋದುದು – A composition showing us what happened when Lord Srinivasa went hunting and when he saw Princess Padmavathi.

ನೋಡು ನೋಡು ವೆಂಕಟೇಶ
ನೋಡು ನೋಟವ ಅವನು
ಆಡುವಾಟವ
ಬೇಟೆಗಾಗಿ ಹೊರಟು ಬಂದ ಪ್ರಖ್ಯಾತವ || pa ||

ಡಂಗುರವ ತೀಡಿ ಮೈಯೊಳು ಗಂಧ ಪೂಸಿದ
ಸ್ವಾಮಿ ಗಂಧ ಪೂಸಿದ || 1 ||

ಪುಣುಗು ಜವ್ವಾಜಿ ಕಸ್ತೂರಿ ಹಚ್ಚಿದ
ಸ್ವಾಮಿ ಕಸ್ತೂರಿ ಹಚ್ಚಿದ || 2 ||

ನೊಸಲ ಮೇಲೆ ಮೃಗನಾಭಿ ತಿಲಕ ಧರಿಸಿದ
ಸ್ವಾಮಿ ತಿಲಕ ಧರಿಸಿದ || 3 ||

ಓರೆ ತುರುಬು ಓರೆ ಜಡೆಯ ಗೊಂಡೆ ಕಟ್ಟಿದ
ಸ್ವಾಮಿ ಗೊಂಡೆ ಕಟ್ಟಿದ || 4 ||

ಎಂಟು ಎಂಟು ಮುತ್ತ್ತಿನ ವಂಟಿ ಇಟ್ಟನೆ
ಸ್ವಾಮಿ ವಂಟಿ ಇಟ್ಟನೆ || 5 ||

ಕಂಠದಲ್ಲಿ ಕೌಸ್ತುಭ ಆಭರಣವಿಟ್ಟನೆ
ಸ್ವಾಮಿ ಆಭರಣವಿಟ್ಟನೆ || 6 ||

ಪಾದದಲ್ಲಿ ಹೊನ್ನಂದುಗೆ ನೂಪುರವಿಟ್ಟನೆ
ಸ್ವಾಮಿ ಬಾಪುರಿ ಇಟ್ಟನೆ || 7 ||

ಕಿರುಗೆಜ್ಜೆ ಪಾಡಗ ಪೆಂಡೆ ಕಾಲಲಿಟ್ಟನೆ
ಸ್ವಾಮಿ ಕಾಲಲಿಟ್ಟನೆ || 8 ||

ಅಂಗುಲಿಗೆ ತಕ್ಕಂಥ ಉಂಗುರವಿಟ್ಟನೆ
ಸ್ವಾಮಿ ಹೊನ್ನುಂಗುರವಿಟ್ಟನೆ || 9 ||

ತೋಳರಕ್ಷೆ ಮಣಿಹಸ್ತ ಕಡಗ ಇಟ್ಟನೆ
ಸ್ವಾಮಿ ಕಡಗ ಇಟ್ಟನೆ || 10 ||

ಹಾರಪದಕ ಹುಲಿಯುಗುರು ವೈಜಯಂತಿಯು
ಕೊರಳೊಳ್ ವೈಜಯಂತಿಯು || 11 ||

ದುಂಡು ಮುತ್ತು ಕಟ್ಟಿ ಸರಿಗೆ ತಾಳಿ ಧರಿಸಿದ
ಸ್ವಾಮಿ ತಾಳಿ ಧರಿಸಿದ || 12 ||

ಬಂದಿ ಕಂಕಣ ಬಾಪುರಿ ವಂಕಿ ಇಟ್ಟನೆ
ಸ್ವಾಮಿ ವಂಕಿ ಇಟ್ಟನೆ || 13 ||

ಶೃಂಗಾರದ ಜರತರದ ಅಂಗಿ ತೊಟ್ಟನೆ
ಸ್ವಾಮಿ ಅಂಗಿ ತೊಟ್ಟನೆ || 14 ||

ಅಂಗದಲ್ಲಿ ಭಂಗಾರದ ಕವಚವಿಕ್ಕಿದ
ಸ್ವಾಮಿ ಕವಚವಿಕ್ಕಿದ || 15 ||

ದಿಟ್ಟ ವೆಂಕಟೇಶ ಬೇಟೆಯಾಡ ಹೊರಟನೆ
ಸ್ವಾಮಿ ಬೇಟೆ-ಯಾಡಹೊರಟನೆ || 16 ||

ಪಟ್ಟವಾಳಿ ಶಾಮಿಯ ಕಸೆಯ ಬಿಗಿದನೆ
ಸ್ವಾಮಿ ಕಸೆಯ ಬಿಗಿದನೆ || 17 ||

ಹುಡಿಯ ಕಟ್ಟು ನಡುವಿಗೆ ಕಟ್ಠಾಣಿ ಹೊಗಿಸಿದ
ಸ್ವಾಮಿ ಕಟ್ಠಾಣಿ ಹೊಗಿಸಿದ || 18 ||

ಓರೆ ತುರುಬಿನ ನಾಯಕ ಬಾರದ್ಹೋದನೆ
ಸ್ವಾಮಿ ಬಾರದ್ಹೋದನೆ || 19 ||

ಚೆಲುವ ಚೆನ್ನಿಗರಾಯನಾಗಿ ವನಕೆ ಹೊರಟನೆ
ಸ್ವಾಮಿ ವನಕೆ ಹೊರಟನೆ || 20 ||

ಜಗವೆಲ್ಲ ನೋಡುತಿರಲು ತೇಜಿಯೇರಿದ
ಸ್ವಾಮಿ ತೇಜಿಯೇರಿದ || 21 ||

ತ್ರಿಜಗವನ್ನೆ ಪಾಲಿಸೆಂದು ತೇಜಿ ಹಿಡಿದನೆ
ಸ್ವಾಮಿ ವಾಜಿ ಹಿಡಿದನೆ || 22 ||

ಗಟ್ಟ ಬೆಟ್ಟವನ್ನೆ ಸುತ್ತಿ ಕಷ್ಟಬಟ್ಟನೆ
ಸ್ವಾಮಿ ಕಷ್ಟಬಟ್ಟನೆ || 23 ||

ವೃಕ್ಷಮೂಲದಲ್ಲಿ ಮಿಂಚುತಿಹಳ ಕಂಡನೆ
ಸ್ವಾಮಿ ಮಿಂಚುತಿಹಳ ಕಂಡನೆ || 24 ||

ಸೋಲುಮುಡಿಯ ಸೋಗೆಗಣ್ಣ ಓರೆನೋಟವ
ಅವಳ ಓರೆನೋಟವ || 25 ||

ನೀಲವರ್ಣದ ಕೋಮಲಾಂಗಿ ಮೇಲೆ ಛಾಯವ
ಅವಳ ಮೇಲೆ ಛಾಯವ || 26 ||

ಎರಳೆಗಂಗಳಂತೆ ಕಣ್ಣ ತಿರುಗುತಿಹಳು
ಅವಳು ಹೊಳೆಯುತಿಹಳು || 27 ||

ಮೃಗವ ಕಂಡು ಶಿರವನೆತ್ತಿ ನೋಡುತಿಹಳು
ಅವಳು ನೋಡುತಿಹಳು || 28 ||

ಕುಂಜರಗಮನೆಯಂತೆ ತಿರುಗುತಿಹಳು
ಅವಳು ಒಲೆವುತಿಹಳು || 29 ||

ವನವ ಬಿಟ್ಟು ವನಕೆ ವನಕೆ ಹಾರುತಿಹಳು
ಅವಳು ಹಾರುತಿಹಳು || 30 ||

ಅವಳ ಕಂಡು ವೆಂಕಟೇಶ ಭ್ರಾಂತಿಬಟ್ಟನೆ
ಸ್ವಾಮಿ ಭ್ರಾಂತಿಗೊಂಡನೆ || 31 ||

ಅಡ್ಡದಾರಿಯಲ್ಲಿ ಮೋರೆ ನೋಡುತಿಹನೆ
ಸ್ವಾಮಿ ನೋಡುತಿಹನೆ || 32 ||

ದಾರಿಗಡ್ಡ ನಿಂದಿರಲಾರು ಹೀನರಾವುತ
ಎಲೊ ಹೀನರಾವುತ || 33 ||

ಪರನಾರಿಯರ ಕಂಡು ಮೋರೆ ಹೇಗೆ ಮಾಡುತಿ
ಎಲೊ ಹೇಗೆ ಮಾಡುತಿ || 34 ||

ಹೀನನಲ್ಲವೆ ನಿನ್ನ ಹುಡುಕಬಂದೆನೆ
ನಿನ್ನ ಹುಡುಕಬಂದೆನೆ || 35 ||

ನಿನ್ನ ಗುರುಕುಚಗಳ ಕಂಡು ಭ್ರಾಂತಿಗೊಂಡೆನೆ
ನಾನು ಭ್ರಾಂತಿಗೊಂಡೆನೆ || 36 ||

ಲಂಡ ಪುಂಡರ ಮಾತ ಆಡದಿರೊ
ಎನ್ನ ಕೂ-ಡಾಡದಿರೊ || 37 ||

ಕತ್ತಿ ಕಠಾರಿ ನಿನ್ನ ಸೇನೆಗಂಜೆನೋ
ನಾನು ಸೇನೆಗಂಜೆನೋ || 38 ||

ನಿನ್ನ ಬಿರುದ ಬಿಟ್ಟುಕೊಟ್ಟು ಬಾರೆ ಚುಂಚುಕಿ
ಬೇಗ ಬಾರೆ ಚುಂಚುಕಿ || 39 ||

ಬಾರೆ ಹೋಗೆ ಎನ್ನಲಿಕ್ಕೆ ಭಾಮೆಯೆ ನಾನು
ಎಲೊ ಭಾಮೆಯೆ ನಾನು || 40 ||

ನಿನ್ನ ಬಿಂಕ ಬಿಟ್ಟುಕೊಟ್ಟು ತಿರುಗೊ ರಾವುತ
ಅತ್ತ ಸಾರೊ ರಾವುತ || 41 ||

ನೀಲವೇಣಿ ಎನ್ನ ಕೂಡ ನಿಲ್ಲಲಾರೆಯೆ
ಎನ್ನೊಳ್ ನಿಲ್ಲಲಾರೆಯೆ || 42 ||

ನಿನ್ನ ಮುಖಪದ್ಮಗಳ ಕಂಡು ಭ್ರಾಂತಿಗೊಂಡೆನೆ
ನೀರೆ ಭ್ರಾಂತಿಗೊಂಡೆನೆ || 43 ||

ಹೀನಮಾತಾಡದಿರೊ ಹೀನ ರಾವುತ
ಎಲೊ ಹೀನ ರಾವುತ || 44 ||

ವಾರಿಜಾಕ್ಷಿ ಎನ್ನ ಕೂಡೆ ವಾದವೇತಕೆ
ಎಲೆ ವಾದವೇತಕೆ || 45 ||

ಪ್ರೇಮದಿಂದ ಬಂದು ತೊಡೆಯ ಮೇಲೆ ಏರೆ ಚುಂಚುಕಿ
ಮೇಲೆ ಏರೆ ಚುಂಚುಕಿ || 46 ||

ತೊಡೆಯ ಮೇಲೆ ಏರಲಿಕ್ಕೆ ಮಡದಿಯೆ ನಾನು
ಎಲೊ ಮಡದಿಯೆ ನಾನು|| 47 ||

ಹೀನಮಾತಾಡದಿರೊ ಹುಡುಗ ರಾವುತ
ಎಲೊ ತುಡುಗ ರಾವುತ || 48 ||

ರಾಜ್ಯಭೂಮಿಗಳನು ಅಷ್ಟು ಕೊಡುವೆನು ನಾನು
ನಿನಗೆ ಬಿಟ್ಟುಕೊಡುವೆನು || 49 ||

ನಿನ್ನೊಡೆಯನೆಂದು ಪಾಲಿಸೆ ಚುಂಚುಕಿ
ಬೇಡಿ-ಕೊಂಬೆ ನಾಯಕಿ || 50||

ರಾಜ್ಯಭೂಮಿಯಾಳಲಿಕ್ಕೆ ರಾಯನೇ ನಾನು
ಎಲೊ ರಾಯನೇ ನಾನು || 51 ||

ದೊಡ್ಡ ಅಡವಿಬೆಟ್ಟದೊಳಗೆ ಆಹಾರವೇನೊ
ಎಲೊ ಆಹಾರವೇನೊ || 52 ||

ಆಲದಂತಿಹ ಹಣ್ಣು ಮುಟ್ಟಬಾರದ ಹಣ್ಣು
ಮುಟ್ಟ-ಬಾರದ ಹಣ್ಣು || 53 ||

ಮುದ್ದು ಸುರಿವ ಹೂ ಬಹಳ
ಮುದ್ದು ಸುರಿವ ಹೂ || 54 ||

ಕರೆಯಬಾರದಾ ಹಣ್ಣು ಕೈಗೆ ನೀಕಾದ
ಹಣ್ಣು ಕೈಗೆ ನೀಕಾದ || 55 ||

ಎಷ್ಟು ಪೇಳ್ದರು ಕೇಳಲಿಲ್ಲ ಏನ ಮಾಡಲಿ
ಇ-ನ್ನೇನು ಮಾಡಲಿ || 56 ||

ಅಡವಿಯೊಳಗೆ ದಾರಿಲ್ಲೆಂದು ಜುಲ್ಮೆ ಮಾಡಿದ
ಸ್ವಾಮಿ ಜುಲ್ಮೆ ಮಾಡಿದ || 57 ||

ಸ್ವಾಮಿಪುಷ್ಕರಣಿಯ ತೀರದಲ್ಲಿ ವಾಸ ಮಾಡಿದ
ಸ್ವಾಮಿ ವಾಸ ಮಾಡಿದ || 58 ||

ವರಹವತಾರ ತಾನೆಂದು ಅರಸನಾದನೆ
ಸ್ವಾಮಿ ಅರಸನಾದನೆ || 59 ||

ಕೊಲ್ಲಾಪುರದಲ್ಲಿ ತನ್ನ ನಾರಿಯಿಟ್ಟನೆ
ಸ್ವಾಮಿ ನಾರಿಯಿಟ್ಟನೆ || 60 ||

ಬೆಟ್ಟ ನಡೆವರಿಲ್ಲೆಂದು ಕೃಷ್ಣ ನಡೆದನೆ
ಸ್ವಾಮಿ ಕೃಷ್ಣ ನಡೆದನೆ || 61 ||

ಸ್ವಾಮಿ ವೆಂಕಟೇಶ ತಾನು ಬೇಟೆಯಾಡಿದ
ಸ್ವಾಮಿ ಬೇಟೆಯಾಡಿದ || 62 ||

ಅಪ್ಪ ವೆಂಕಟೇಶ ತಾನು ಒಪ್ಪದಿಂದಲೆ
ಗಿರಿಗೆ ಬಂದನೆ || 63 ||

ಶ್ರೀಶ ಪುರಂದರವಿಠಲನೆಂದು ಹಾಗೆ ನಿಂದನೆ
ಸ್ವಾಮಿ ಹಾಗೆ ನಿಂದನೆ || 64 ||

Nodu nodu venkatesa
nodu notava avanu
aduvatava
betegagi horatu banda prakhyatava || pa ||

dangurava tidi maiyolu gandha pusida svami gandha pusida || 1 ||

punugu javvaji kasturi haccida svami kasturi haccida || 2 ||

nosala mele mrganabhi tilaka dharisida svami tilaka dharisida || 3 ||

ore turubu ore jadeya gonde kattida svami gonde kattida || 4 ||

entu entu mutttina vanti ittane svami vanti ittane || 5 ||

kanthadalli kaustubha abharanavittane svami abharanavittane || 6 ||

padadalli honnanduge nupuravittane svami bapuri ittane || 7 ||

kirugejje padaga pende kalalittane svami kalalittane || 8 ||

angulige takkantha unguravittane svami honnunguravittane || 9 ||

tolarakse manihasta kadaga ittane svami kadaga ittane || 10 ||

harapadaka huliyuguru vaijayantiyu koralol vaijayantiyu || 11 ||

dundu muttu katti sarige tali dharisida svami tali dharisida || 12 ||

bandi kankana bapuri vanki ittane svami vanki ittane || 13 ||

srngarada jaratarada angi tottane svami angi tottane || 14 ||

angadalli bhangarada kavacavikkida svami kavacavikkida || 15 ||

ditta venkatesa beteyada horatane svami bete-yadahoratane || 16 ||

pattavali samiya kaseya bigidane svami kaseya bigidane || 17 ||

hudiya kattu naduvige katthani hogisida svami katthani hogisida || 18 ||

ore turubina nayaka barad’hodane svami barad’hodane || 19 ||

celuva cennigarayanagi vanake horatane svami vanake horatane || 20 ||

jagavella nodutiralu tejiyerida svami tejiyerida || 21 ||

trijagavanne palisendu teji hididane svami vaji hididane || 22 ||

gatta bettavanne sutti kastabattane svami kastabattane || 23 ||

vrksamuladalli mincutihala kandane svami mincutihala kandane || 24 ||

solumudiya sogeganna orenotava avala orenotava || 25 ||

nilavarnada komalangi mele chayava avala mele chayava || 26 ||

eralegangalante kanna tirugutihalu avalu holeyutihalu || 27 ||

mrgava kandu siravanetti nodutihalu avalu nodutihalu || 28 ||

kunjaragamaneyante tirugutihalu avalu olevutihalu || 29 ||

vanava bittu vanake vanake harutihalu avalu harutihalu || 30 ||

avala kandu venkatesa bhrantibattane svami bhrantigondane || 31 ||

addadariyalli more nodutihane svami nodutihane || 32 ||

darigadda nindiralaru hinaravuta elo hinaravuta || 33 ||

paranariyara kandu more hege maduti elo hege maduti || 34 ||

hinanallave ninna hudukabandene ninna hudukabandene || 35 ||

ninna gurukucagala kandu bhrantigondene nanu bhrantigondene || 36 ||

landa pundara mata adadiro enna ku-dadadiro || 37 ||

katti kathari ninna seneganjeno nanu seneganjeno || 38 ||

ninna biruda bittukottu bare cuncuki bega bare cuncuki || 39 ||

bare hoge ennalikke bhameye nanu elo bhameye nanu || 40 ||

ninna binka bittukottu tirugo ravuta atta saro ravuta || 41 ||

nilaveni enna kuda nillalareye ennol nillalareye || 42 ||

ninna mukhapadmagala kandu bhrantigondene nire bhrantigondene || 43 ||

hinamatadadiro hina ravuta elo hina ravuta || 44 ||

varijaksi enna kude vadavetake ele vadavetake || 45 ||

premadinda bandu todeya mele ere cuncuki mele ere cuncuki || 46 ||

todeya mele eralikke madadiye nanu elo madadiye nanu|| 47 ||

hinamatadadiro huduga ravuta elo tuduga ravuta || 48 ||

rajyabhumigalanu astu koduvenu nanu ninage bittukoduvenu || 49 ||

ninnodeyanendu palise cuncuki bedi-kombe nayaki || 50||

rajyabhumiyalalikke rayane nanu elo rayane nanu || 51 ||

dodda adavibettadolage aharaveno elo aharaveno || 52 ||

aladantiha hannu muttabarada hannu mutta-barada hannu || 53 ||

muddu suriva hu bahala muddu suriva hu || 54 ||

kareyabarada hannu kaige nikada hannu kaige nikada || 55 ||

estu peldaru kelalilla ena madali i-nnenu madali || 56 ||

adaviyolage darillendu julme madida svami julme madida || 57 ||

svamipuskaraniya tiradalli vasa madida svami vasa madida || 58 ||

varahavatara tanendu arasanadane svami arasanadane || 59 ||

kollapuradalli tanna nariyittane svami nariyittane || 60 ||

betta nadevarillendu krsna nadedane svami krsna nadedane || 61 ||

svami venkatesa tanu beteyadida svami beteyadida || 62 ||

appa venkatesa tanu oppadindale girige bandane || 63 ||

srisa purandaravithalanendu hage nindane svami hage nindane || 64 ||

Ajam Nirvikalpam Nirakaramekam – ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ Lyrics

Composer : Sri Adi Shankaracharya

Singer : Ms. Vinaya

ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ
ನಿರಾನಂದಮಾನಂದಮದ್ವೈತಪೂರ್ಣಂ
ಪರಂ ನಿರ್ಗುಣಂ ನಿರ್ವಿಶೇಷಂ ನಿರೀಹಂ
ಪರಬ್ರಹ್ಮರೂಪಂ ಗಣೇಶಂ ಭಜೇಮ ||

ಗುಣಾತೀತಮಾನಂ ಚಿದಾನಂದರೂಪಂ
ಚಿದಾಭಾಸಕಂ ಸರ್ವಗಂ ಧ್ಯಾನಗಮ್ಯಂ
ಮುನಿಧ್ಯೇಯಮಾಕಾಶರೂಪಂ ಪರೇಶಂ
ಪರಬ್ರಹ್ಮರೂಪಂ ಗಣೇಶಂ ಭಜೇಮ ||

ಜಗತ್ಕಾರಣಂ ಕಾರಣಜ್ಞಾನರೂಪಂ
ಸುರಾದಿಂ ಸುಖಾದಿಂ ಗುಣೇಶಂ ಗಣೇಶಂ
ಜಗದ್ವ್ಯಾಪಿನಂ ವಿಶ್ವವಂದ್ಯಂ ಸುರೇಶಂ
ಪರಬ್ರಹ್ಮರೂಪಂ ಗಣೇಶಂ ಭಜೇಮ ||

अजं निर्विकल्पं निराकारमॆकं
निरानंदमानंदमद्वैतपूर्णं
परं निर्गुणं निर्विशॆषं निरीहं
परब्रह्मरूपं गणॆशं भजॆम ॥

गुणातीतमानं चिदानंदरूपं
चिदाभासकं सर्वगं ध्यानगम्यं
मुनिध्यॆयमाकाशरूपं परॆशं
परब्रह्मरूपं गणॆशं भजॆम ॥

जगत्कारणं कारणज्ञानरूपं
सुरादिं सुखादिं गुणॆशं गणॆशं
जगद्व्यापिनं विश्ववंद्यं सुरॆशं
परब्रह्मरूपं गणॆशं भजॆम ॥

ajaM nirvikalpaM nirAkAramEkaM
nirAnaMdamAnaMdamadvaitapUrNaM
paraM nirguNaM nirvishEShaM nirIhaM
parabrahmarUpaM gaNEshaM bhajEma ||

guNAtItamAnaM cidAnaMdarUpaM
cidAbhAsakaM sarvagaM dhyAnagamyaM
munidhyEyamAkAsharUpaM parEshaM
parabrahmarUpaM gaNEshaM bhajEma ||

jagatkAraNaM kAraNaj~jAnarUpaM
surAdiM sukhAdiM guNEshaM gaNEshaM
jagadvyApinaM vishvavaMdyaM surEshaM
parabrahmarUpaM gaNEshaM bhajEma ||

Sarasijaksa Sarasadinda Sarasijodbhavagolidu Banda | Sri Sreepada Rajaru

Composer : Sri Sreepada Rajaru
Ankita : Ranga Vittala
Book Ref : Samagra Dasa Sahitya Samputa on SripadaRajaru & VyasaRajaru. This is the 49th composition featured in this book, and each piece, including the suladi and ugabhoga, is truly exceptional.

ಸರಸಿಜಾಕ್ಷ – Sarasijākṣa – ಕಮಲದಂತೆ ಕಣ್ಣುಳ್ಳವನು-ವಿಷ್ಣು, Lotus-eyed-Vishnu
ಸರಸಿಜೋದ್ಭವ – sarasijōdbhava – ಬ್ರಹ್ಮ – Brahma
ಸರಸಿಜಾಕ್ಷಿ – ಕಮಲದಂತೆ ಕಣ್ಣುಳ್ಳವಳು-ಲಕ್ಷ್ಮಿ – Lotus-eyed – Lakshmi
ಉರಸ್ಸು – urassu – the fore or ventral part of the body between the neck and the abdomen; the chest;

ಸರಸಿಜಾಕ್ಷ ಸರಸದಿಂದ ಸರಸಿಜೋದ್ಭವಗೊಲಿದು ಬಂದ || PA ||

ಉರಸಿನ ಮ್ಯಾಲೆ ಸರಸಿಜಾಕ್ಷಿಯನಿರಿಸಿ ಬಂದ || A PA ||

ಧೀರ ಶರಧಿಗಂಭೀರ ವರಘನಸಾರ ಕಸ್ತೂರಿತಿಲಕಧರ
ಹೀರ ಮೌಕ್ತಿಕ ಕೇಯೂರ ಧರಿಸಿದ ನವನೀತ ಚೋರ ಬಂದ || 1 ||

ನಂದ ಗೋಪಿಗಾನಂದವೂಡಿದ ಕಂದ ಗೋಕುಲದಿ ಬಂದ
ಅಂದದಿಂದ ಸೌಂದರಿಯರ ಗೋವಿಂದ ಮುಕುಂದ || 2 ||

ಅಂಗನೆಯರ ಕುಚಗಳಾಲಿಂಗನವ ಮಾಡಿ ನವಮೋಹನಾಂಗ
ರಂಗವಿಠಲನು ನಮ್ಮಂತರಂಗದೊಳಗಿಹ ಕಲ್ಮಷಭಂಗ || 3 ||

sarasijaksa sarasadinda sarasijodbhavagolidu banda || PA ||

urasina myale sarasijaksiyanirisi banda || A PA ||

dhira saradhigambhira varaghanasara kasturitilakadhara
hira mauktika keyura dharisida navanita cora banda || 1 ||

nanda gopiganandavudida kanda gokuladi banda
andadinda saundariyara govinda mukunda || 2 ||

anganeyara kucagalalinganava madi navamohananga
rangavithalanu nam’mantarangadolagiha kalmasabhanga || 3 ||

Anudina Ninna Nenedu Manavu Ninnali Nillali

Composer : Pavanje Sri Lakshmi Narayan Acharya
Ankita : lakshuminarayana
Singer : Ms. Vinaya

ಅನುದಿನ ನಿನ್ನ ನೆನೆದು
ಮನವು ನಿನ್ನಲಿ ನಿಲ್ಲಲಿ || PA ||

ದುಃಖ ಸುಖ ಲೆಕ್ಕಿಸದೆ ಮುಖ್ಯ ಫಲ ಮುಂದರಿಸೆ
ಮಿಕ್ಕುತ್ತ ಸೊಕ್ಕಿ ಮೋಹಕ್ಕೆ ಸಿಕ್ಕದೆ || 1 ||

ನಿನ್ನ ಗುಣ ವರ್ಣಿಸುತ ನಿನ್ನವರ ಮನ್ನಿಸುತ
ನಿನ್ನ ಪಾವನ್ನ ಲಾವಣ್ಯ ಧ್ಯಾನಿಸೆ || 2 ||

ಸಂತೋಷ ನಿರಂತರವು ಸಂತ ಜನ ಸಹವಾಸವು
ಶಾಂತತ್ವವಾಂತು ಮಹಾಂತಧೈರ್ಯದಿ || 3 ||

ಭಕ್ತಿ ಸುವಿರಕ್ತಿ ಜ್ಞಾನ ಮುಕ್ತಿಗೆ ಮುಖ್ಯ ಕಾರಣ
ಚಿತ್ತದೊಳಿತ್ತೆಲ್ಲ ಹೊತ್ತು ಹೊತ್ತಿಗೆ || 4 ||

ಪ್ರಿಯ ಶ್ರೀಲಕ್ಷುಮಿನಾರಾಯಣ ಪರಾಯಣನ
ಧೈರ್ಯದಂತರ್ಯ ಗಾಂಭೀರ್ಯ ಭಾವದಿ || 5 ||

anudina ninna nenedu
manavu ninnali nillali || PA ||

duhkha sukha lekkisade mukhya phala mundarise
mikkutta sokki mohakke sikkade || 1 ||

ninna guna varnisuta ninnavara mannisuta
ninna pavanna lavanya dhyanise || 2 ||

santosa nirantaravu santa jana sahavasavu
santatvavantu mahantadhairyadi || 3 ||

bhakti suvirakti jnana muktige mukhya karana
cittadolittella hottu hottige || 4 ||

priya srilaksuminarayana parayanana
dhairyadantarya gambhirya bhavadi || 5 ||

Mukhya Karana Visnu Svatantrane | Sri Gopala Dasaru

Composer : Sri Gopala Dasaru
Ankita : Gopala Vittala
Singer : Ms. Vinaya

ಮುಖ್ಯ ಕಾರಣ ವಿಷ್ಣು ಸ್ವತಂತ್ರನೆ || PA ||

ಸಖ್ಯ ಸತ್ವರ ಪೋಷ್ಯ ಸರಸಿಜಾದ್ಯಮರೇಶ || A PA ||

ತಿಳಿವೆಂಬುವವ ನೀನೆ ತಿಳಿದು ತಿಳಿಸುವ ನೀನೆ
ತಿಳಿವ ವಸ್ತುವು ನೀನೇ ತೀರ್ಥ ಪದನೇ
ತಿಳಿದುದಕೆ ಫಲ ನೀನೆ ತಿಳಿಯಗೊಡದವ ನೀನೆ
ತಿಳಿವ ತಂತ್ರವು ನಿನ್ನದು ತಿಳಿಸೋ ಸರ್ವೇಶ || 1 ||

ಚೇತನನು ನಾನು ನೀ ಚೇಷ್ಟೆ ಮಾಡಿಸಲಾಗ
ಅಚೇತನನು ಸರಿ ನೀನು ಸುಮ್ಮನಿರಲು
ಯಾತರವ ನಾನಯ್ಯ ನಿನ್ನಾಧೀನವು ಎಲ್ಲ
ಚೇತನನು ಅಹುದೋ ನೀ ಚಲಿಸೆ ಚಲಿಸುವೆನು || 2 ||

ತಿಳಿಯೆನ್ನುವುದಕ್ಕಾಗಿ ತಿಳಿಯತಕ್ಕದು ನೀನೆ
ತಿಳಿಸೋ ಸೋತ್ತಮರೆಲ್ಲ ತಿಳಿದ ಶೇಷ
ತಿಳಿವಲ್ಲಿ ತಿಳಿಪಲ್ಲಿ ತಿಳುವಳಿಕೆ ನೀನಾಗಿ
ಚಲಿಸದಲೆ ಮನ ನಿಲಿಸೋ ಗೋಪಾಲವಿಠ್ಠಲ || 3 ||

mukhya karana visnu svatantrane || PA ||

sakhya satvara posya sarasijadyamaresa || A PA ||

tilivembuvava nine tilidu tilisuva nine
tiliva vastuvu nine tirtha padane
tilidudake phala nine tiliyagodadava nine
tiliva tantravu ninnadu tiliso sarvesa || 1 ||

cetananu nanu ni ceste madisalaga
acetananu sari ninu sum’maniralu
yatarava nanayya ninnadhinavu ella
cetananu ahudo ni calise calisuvenu || 2 ||

tiliyennuvudakkagi tiliyatakkadu nine
tiliso sottamarella tilida sesa
tilivalli tilipalli tiluvalike ninagi
calisadale mana niliso gopalaviththala || 3 ||

Bandalu Node Mandiradolu Bhagyadalaksmi | Sri Jagannatha Dasaru

Composer : Sri Jagannatha Dasaru
Ankita : Jagannatha Vittala
Singer : Ms. Vinaya

ಬಂದಳು ನೋಡೇ ಮಂದಿರದೊಳು ಭಾಗ್ಯದಲಕ್ಷ್ಮೀ |
ಭಾಗ್ಯದಲಕ್ಷ್ಮೀ ಬಂದಾಳು ನೋಡೇ || PA ||

ಅಂದುಗೆ ಕಿರು ಗೆಜ್ಜೆ ಘಿಲ್ ಘಿಲ್ಲೇನುತ || A PA ||

ಘಿಲ್ ಘಿಲ್ ಘಿಲ್ ಘಿಲ್ ಘಿಲ್ಲೇನುತಾ |
ಮುದ್ದು ಪಾದದಿ ಹೆಜ್ಜೆಯನಿಕ್ಕುತ್ತಾ || 1 ||

ಎಡ ಬಲದಲ್ಲಿ ಗಜಗಳಿಂದ ಪೂಜೆಗೊಳ್ಳುತ |
ಬಿಡದೆ ತನ್ನ ಕರ ಕಮಲದಿ ಅಭಯ ಕೊಡುತಲಿ || 2 ||

ಅತಿ ಹರುಷದಿ ಹಿತದಿ ತನ್ನ ಪತಿಯ ಸಹಿತಾಗಿ |
ವಾರಿನೋಟದಿಂದ ಭಕ್ತರಿಗೆ ವರವ ಕೊಡುತಲಿ || 3 ||

ಸೃಷ್ಟಿಗೊಡೆಯ ತಂದೆ ಜಗನ್ನಾಥವಿಠ್ಠಲನ |
ಪಟ್ಟದರಸಿ ಅರ್ತಿಯಿಂದಲಿ ಭಕ್ತರ ಮನೆಗೆ || 4 ||

bandalu node mandiradolu bhagyadalaksmi |
bhagyadalaksmi bandalu node || PA ||

anduge kiru gejje ghil ghillenuta || A PA ||

ghil ghil ghil ghil ghillenuta |
muddu padadi hejjeyanikkutta || 1 ||

eda baladalli gajagalinda pujegolluta |
bidade tanna kara kamaladi abhaya kodutali || 2 ||

ati harusadi hitadi tanna patiya sahitagi |
varinotadinda bhaktarige varava kodutali || 3 ||

srstigodeya tande jagannathaviththalana |
pattadarasi artiyindali bhaktara manege || 4 ||

Swami Kayo Karuni | Sri Varada Gopala Vittala Dasaru

Composer : Sri Varada Gopala Vittala Dasaru
Ankita : tandevaradagopalaviththala
Book Ref : Samagra Dasa Sahitya Volume 21 Part 2
Singer : Ms. Vinaya

ಘೃಣಿ – ghřṇi – The Sun, sunlight or Sunshine
ಯೋಚಿಪ – yōcipa – ಪ್ರಾರ್ಥಿಸು, ಬೇಡು

ಸ್ವಾಮಿ ಕಾಯೋ ಕರುಣೀ || PA ||

ನಮ್ಮ ಗುರು ರಾಘವೇಂದ್ರ ಘೃಣಿ || A PA ||

ನಿನ್ನ ಯೋಚಿಪ ಮಾರ್ಗ ನಾನರಿಯೆ ಧೀರಾ
ಯನ್ನ ವಿಚಾರಿಸದೆ ಇರುವುದು ಥರವೇ || 1 ||

ನಿನ್ನ ಪೋಲುವ ಕರುಣಿಗಳೆ ಇಲ್ಲೆಂಬೋರು
ನಿಜವಾದರೆ ಕರುಣಿಸಿ ಕಾಯೋ ಗುರುವೇ || 2 ||

ನೊಂದೆನಯ್ಯ ಬೆಂದೆನಯ್ಯ ಬಂಧನದೊಳು ಸಿಲ್ಕಿ ಗೋವಿಂದಾ
ತಂದೆವರದಗೋಪಾಲವಿಠ್ಠಲನ ಕಂದಾ || 3 ||

svami kayo karuni || PA ||

nam’ma guru raghavendra ghrni || A PA ||

ninna yocipa marga nanariye dhira
yanna vicarisade iruvudu tharave || 1 ||

ninna poluva karunigale illemboru
nijavadare karunisi kayo guruve || 2 ||

nondenayya bendenayya bandhanadolu silki govinda
tandevaradagopalaviththalana kanda || 3 ||

Kandire Sri Krishnana | Haridasini Saraswati Bai

Composer : Haridasini Saraswati Bai
Anikita : SriSrinivasa
Book ref : Samagra Dasa Sahitya Tirumalambha and Other women – Saraswatibai’s Composition – ಸರಸ್ವತಿಬಾಯಿಯವರ ಕೀರ್ತನೆಗಳು

ಕಂಡಿರೆ ಶ್ರೀ ಕೃಷ್ಣನ || PA ||

ಪುಂಡರಿಕಾಕ್ಷ ಪುರುಷೋತ್ತಮನ
ಅಂಡಜವಾಹನ ಅಸುರಾಂತಕನ || A PA ||

ಅರುಣ ಕಿರಣ ಸೋಲಿಪ ಚರಣ
ವರ ಗೆಜ್ಜೆಯ ಧರಿಶಿಹನ
ಕಿರುನಗೆಯಿಂದಲಿ ಬೆರಳಲಿ ಮುರಳಿಯ
ಸ್ವರ ಊದಿದ ಮುರಹರನ || 1 ||

ಕೋಟಿ ಸೂರ್ಯ ಕಿರೀಟ ಧರಿಸಿ
ಹಾಟಕಾಂಬರಧರ ನಮ್ಮ
ಊಟ ಮಾಡಿ ಪಾಲ್ ಬೆಣ್ಣೆಯ ಮೆದ್ದು ವಾರೆ
ನೋಟದಿ ಮನ ಸೆಳೆಯುವನ || 2 ||

ಅಂಗಿಯ ತೊಡಿಸಿ ಉಂಗುರವಿಟ್ಟು
ಅಂಗಳದೊಳು ಬಿಟ್ಟೆನಮ್ಮ
ರಂಗ ಶ್ರೀ ಶ್ರೀನಿವಾಸನ ಕಾಣೆ ನಿ
ಮ್ಮಂಗಳದೊಳು ಇಹನೇನಮ್ಮ ಇಹನೇನಮ್ಮ || 3 ||

kandire sri Krishnana || PA ||

pundarikaksa purusottamana
andajavahana asurantakana || A PA ||

aruna kirana solipa carana
vara gejjeya dharisihana
kirunageyindali beralali muraliya
svara udida muraharana || 1 ||

koti surya kirita dharisi
hatakambaradhara nam’ma
uta madi pal benneya meddu vare
notadi mana seleyuvana || 2 ||

angiya todisi unguravittu
angaladolu bittenam’ma
ranga sri srinivasana kane ni
m’mangaladolu ihanenam’ma ihanenam’ma || 3 ||

Veerasimhane Naarasimhane – Narashima Suladi

Updated Post : Recite the Suladi from May 8th – May 21st– USA. May 9th – May 21st – India.

Having parents who guide you in your day to day activities and push you towards eternal Bhakti is a true blessing. It is a blessing I have such a father and had such a mother.

My father called today and mentioned starting tomorrow which is Vaishakha masa, and until Shree Narashima Jayanthi we need to recite Shree Narashima Suladi composed by Shree Vijaya Dasaru.

There is also a Shree Narashima Suladi composed by Shree Jaganatha Dasaru. However, my father said reciting Shree Narashima Suladi composed by Shree Vikaya Dasaru it would ward off all of our difficulties we are facing throughout the world, just like Lord Narashima helped Putta Prahladha.

So, recite from tomorrow until May 21st which is Shree Narashima Jayanthi, after finish your morning pooje.

Shree Narashima Suladi in Kannada

Shree Narashima Suladi in English

The video from Vid Kallapura Pavamanachar is amazing on the same.