Archive for May 11th, 2024

Mukhya Karana Visnu Svatantrane | Sri Gopala Dasaru

Composer : Sri Gopala Dasaru
Ankita : Gopala Vittala
Singer : Ms. Vinaya

ಮುಖ್ಯ ಕಾರಣ ವಿಷ್ಣು ಸ್ವತಂತ್ರನೆ || PA ||

ಸಖ್ಯ ಸತ್ವರ ಪೋಷ್ಯ ಸರಸಿಜಾದ್ಯಮರೇಶ || A PA ||

ತಿಳಿವೆಂಬುವವ ನೀನೆ ತಿಳಿದು ತಿಳಿಸುವ ನೀನೆ
ತಿಳಿವ ವಸ್ತುವು ನೀನೇ ತೀರ್ಥ ಪದನೇ
ತಿಳಿದುದಕೆ ಫಲ ನೀನೆ ತಿಳಿಯಗೊಡದವ ನೀನೆ
ತಿಳಿವ ತಂತ್ರವು ನಿನ್ನದು ತಿಳಿಸೋ ಸರ್ವೇಶ || 1 ||

ಚೇತನನು ನಾನು ನೀ ಚೇಷ್ಟೆ ಮಾಡಿಸಲಾಗ
ಅಚೇತನನು ಸರಿ ನೀನು ಸುಮ್ಮನಿರಲು
ಯಾತರವ ನಾನಯ್ಯ ನಿನ್ನಾಧೀನವು ಎಲ್ಲ
ಚೇತನನು ಅಹುದೋ ನೀ ಚಲಿಸೆ ಚಲಿಸುವೆನು || 2 ||

ತಿಳಿಯೆನ್ನುವುದಕ್ಕಾಗಿ ತಿಳಿಯತಕ್ಕದು ನೀನೆ
ತಿಳಿಸೋ ಸೋತ್ತಮರೆಲ್ಲ ತಿಳಿದ ಶೇಷ
ತಿಳಿವಲ್ಲಿ ತಿಳಿಪಲ್ಲಿ ತಿಳುವಳಿಕೆ ನೀನಾಗಿ
ಚಲಿಸದಲೆ ಮನ ನಿಲಿಸೋ ಗೋಪಾಲವಿಠ್ಠಲ || 3 ||

mukhya karana visnu svatantrane || PA ||

sakhya satvara posya sarasijadyamaresa || A PA ||

tilivembuvava nine tilidu tilisuva nine
tiliva vastuvu nine tirtha padane
tilidudake phala nine tiliyagodadava nine
tiliva tantravu ninnadu tiliso sarvesa || 1 ||

cetananu nanu ni ceste madisalaga
acetananu sari ninu sum’maniralu
yatarava nanayya ninnadhinavu ella
cetananu ahudo ni calise calisuvenu || 2 ||

tiliyennuvudakkagi tiliyatakkadu nine
tiliso sottamarella tilida sesa
tilivalli tilipalli tiluvalike ninagi
calisadale mana niliso gopalaviththala || 3 ||