Archive for May 12th, 2024

Anudina Ninna Nenedu Manavu Ninnali Nillali

Composer : Pavanje Sri Lakshmi Narayan Acharya
Ankita : lakshuminarayana
Singer : Ms. Vinaya

ಅನುದಿನ ನಿನ್ನ ನೆನೆದು
ಮನವು ನಿನ್ನಲಿ ನಿಲ್ಲಲಿ || PA ||

ದುಃಖ ಸುಖ ಲೆಕ್ಕಿಸದೆ ಮುಖ್ಯ ಫಲ ಮುಂದರಿಸೆ
ಮಿಕ್ಕುತ್ತ ಸೊಕ್ಕಿ ಮೋಹಕ್ಕೆ ಸಿಕ್ಕದೆ || 1 ||

ನಿನ್ನ ಗುಣ ವರ್ಣಿಸುತ ನಿನ್ನವರ ಮನ್ನಿಸುತ
ನಿನ್ನ ಪಾವನ್ನ ಲಾವಣ್ಯ ಧ್ಯಾನಿಸೆ || 2 ||

ಸಂತೋಷ ನಿರಂತರವು ಸಂತ ಜನ ಸಹವಾಸವು
ಶಾಂತತ್ವವಾಂತು ಮಹಾಂತಧೈರ್ಯದಿ || 3 ||

ಭಕ್ತಿ ಸುವಿರಕ್ತಿ ಜ್ಞಾನ ಮುಕ್ತಿಗೆ ಮುಖ್ಯ ಕಾರಣ
ಚಿತ್ತದೊಳಿತ್ತೆಲ್ಲ ಹೊತ್ತು ಹೊತ್ತಿಗೆ || 4 ||

ಪ್ರಿಯ ಶ್ರೀಲಕ್ಷುಮಿನಾರಾಯಣ ಪರಾಯಣನ
ಧೈರ್ಯದಂತರ್ಯ ಗಾಂಭೀರ್ಯ ಭಾವದಿ || 5 ||

anudina ninna nenedu
manavu ninnali nillali || PA ||

duhkha sukha lekkisade mukhya phala mundarise
mikkutta sokki mohakke sikkade || 1 ||

ninna guna varnisuta ninnavara mannisuta
ninna pavanna lavanya dhyanise || 2 ||

santosa nirantaravu santa jana sahavasavu
santatvavantu mahantadhairyadi || 3 ||

bhakti suvirakti jnana muktige mukhya karana
cittadolittella hottu hottige || 4 ||

priya srilaksuminarayana parayanana
dhairyadantarya gambhirya bhavadi || 5 ||