Archive for May 28th, 2024

Avadevarigunti Vaibhava | Sri Rama Dasaru

Composer : Sri Rama Dasaru
Ankita : Srirama
Book Ref : Haridasaru Kanda Srinivasa and this is the 8th song.

ಆವದೇವರಿಗುಂಟೀ ವೈಭವ || PA ||

ಸಾರ್ವಭೌಮ ನೀನೆ ಸಕಲ
ದೇವರೊಳಗೆ ಭಾವಜನಯ್ಯ || A PA ||

ಸಿರಿಯರೆಂಟುಮಂದಿ ನಿನಗೆ
ಅರಸಿಯರು ಕರುಣಶರಧಿ
ಸುರರು ಮೂವತ್ತುಮೂರುಕೋಟಿ
ಚರಣಸೇವಕರಯ್ಯ ಹರಿಯ || 1 ||

ಅನುದಿನವು ಎಡೆಬಿಡದೆ ಮನು
ಮುನಿಗಳ ಸುಜನ ಸಂತತಿ
ಘನವೇದಘೋಷದಿಂದ
ನೆನೆದು ಪೂಜಿಪರಪರಿಮಿತ ಲೀಲೆ || 2 ||

ಕೋಟಿಸೂರ್ಯಪ್ರಕಾಶ ನಿನ್ನ
ಆಟ ಬಲ್ಲವರಾರು ಜಗದಿ
ಆಟವಾಡುವಿ ಅಗಮ್ಯಚರಿತ
ಸಾಟಿಯಿಲ್ಲದೆ ಧನವ ಕಲಿಸಿ || 3 ||

ಕರೆಸಿ ಅಸಮಭಕುತ ಜನರ
ವರವ ನೀಡಿ ಮುಡಿಪುಗೊಂಡು
ಮೆರೆವಿ ಪರಮ ಉತ್ಸವದೊಡನೆ
ಗಿರಿಯ ಭೂವೈಕುಂಠವೆನಿಸಿ || 4 ||

ಕಿಂಕರ ಜನರ ಪೊರೆಯಲೋಸುಗ
ವೆಂಕಟಾದ್ರಿಯಲ್ಲಿ ನಿಂದಿ
ವೆಂಕಟೇಶ ಕಿಂಕರಜನರ
ಸಂಕಟಹರ ಶ್ರೀರಾಮಪ್ರಭೋ || 5 ||

Avadevarigunti vaibhava || PA ||

sarvabhauma nine sakala
devarolage bhavajanayya || A PA ||

siriyarentumandi ninage
arasiyaru karunasaradhi
suraru muvattumurukoti
caranasevakarayya hariya || 1 ||

anudinavu edebidade manu
munigala sujana santati
ghanavedaghosadinda
nenedu pujiparaparimita lile || 2 ||

kotisuryaprakasa ninna
ata ballavararu jagadi
atavaduvi agamyacarita
satiyillade dhanava kalisi || 3 ||

karesi asamabhakuta janara
varava nidi mudipugondu
merevi parama utsavadodane
giriya bhuvaikunthavenisi || 4 ||

kinkara janara poreyalosuga
venkatadriyalli nindi
venkatesa kinkarajanara
sankatahara sriramaprabho || 5 ||