Archive for June 2nd, 2024

Madhwamathada Sidhanthada | Sri Purandara Dasaru

Composer : Sri Purandara Dasaru
Ankita : Purandara Vittala
Singer : Ms. Vinaya. Ms. Suparna taught this song during our NESRSB – Hari Smarane Bhajane on Wednesday.

ಮಧ್ವಮತದ ಸಿದ್ಧಾಂತದ ಪದ್ಧತಿ ಬಿಡಬ್ಯಾಡೀ ಬಿಡಬ್ಯಾಡಿ | 

ಬಿಟ್ಟು ಕೆಡಬ್ಯಾಡೀ ಕೆಡಬ್ಯಾಡೀ || ಪಲ್ಲ ||

ಈ ಮಧ್ವಮತದ ಸಿದ್ದಾಂತದ ಪದ್ಧತಿ ಬಿಡಬ್ಯಾಡೀ

ಬಿಡಬ್ಯಾಡೀ | ಅ. ಪಲ್ಲ || 

ಹರಿಸರ್ವೋತ್ತಮ ನಹುದೆಂಬ ಜ್ಞಾನವ | 

ತಾರತಮ್ಯದಿಂದ ತಿಳಿಯುವ ಮಾರ್ಗವ | ಬಿಡಬ್ಯಾಡೀ ಬಿಡಬ್ಯಾಡೀ || ೧ || 

ಘೋರಯಮನ ಭಯ ದೂರವ ಮಾಡುವ | 

ಮುರಾರಿಯ ಚರಣವ ಸೇರುವ ಮಾರ್ಗವ | 

ಬಿಡಬ್ಯಾಡೀ ಬಿಡಬ್ಯಾಡೀ || ೨ || 

ಭಾರತೀಶ ಮುಖ್ಯಪ್ರಾಣಾಂತರ್ಗತ| 

ನೀರಜಾಕ್ಷನಮ್ಮ ಪುರಂದರ ವಿಠಲನ್ನ || 

ಬಿಡಬ್ಯಾಡೀ ಬಿಡಬ್ಯಾಡೀ | ಬಿಟ್ಟುಕೆಡ ಬ್ಯಾಡೀ ಕೆಡಬ್ಯಾಡೀ || 

ಈ ಮಧ್ಯಮತದ ಸಿದ್ದಾಂತದ ಪದ್ಧತಿ ಬಿಡಬ್ಯಾಡೀ ಬಿಡಬ್ಯಾಡೀ ॥ ೩ ॥

madhvamatada siddhAntada paddhati biDabyADI biDabyADI ।

biTTu keDa byADl keDa byADl  ||P||

I madhvamatada siddhantada paddhati biDabyADI biDabyADI ||A.P||

harisarvottama nahudemba jñAnava

tAratamyadinda tiLiyuva mArgava

biDabyADI biDabyADI ||1||

ghoraya manabhaya dUrava mADuva

murAriya caraNava sEruva mArgava

biDabyADI biDabyADI ||2||

bhAratISa mukhyaprANantargata |

nIrajAkShanamma purandara viThalana ||

biDabyADI biDabyADI | 

biTTu keDa byADl keDa byADl

I madhvamatada siddhantada paddhati biDabyADI biDabyADI ||3||