Archive for June 16th, 2024

Sri Sreepadarajaru – Aaradhane June 20th 2024

Update : June 20th Wednesday USA & India

ಶ್ರೀ ಶ್ರೀಪಾದರಾಜರು – Sri Sreepadarajaru
Ankitha : Rangavittala
Parents : Sheshagiriyappa & Giriyamma
Birth Place : Abboor
Birth Name : Lakshminarayana
Ashrama Nama : Sri Lakshminarayana Teertharu
Vidya Gurugalu : Sri Vibudendra Teertharu
Period : 1412 – 1504
Aradhana : Jyesta Shuddha Chaturdhashee
Vrundavana : Mulbagal

ತಂ ವಂದೇ ನರಸಿಂಹತೀರ್ಥನಿಲಯಂ ಶ್ರೀವ್ಯಾಸರಾಟ್ ಪೂಜಿತಂ |
ಧ್ಯಾಯಂತಂ ಮನಸಾ ನೃಸಿಂಹಚರಣಂ ಶ್ರೀಪಾದರಾಜಂ ಗುರುಂ ||
ಪದವಾಕ್ಯಪ್ರಮಾಣಾಬ್ಧಿವಿಕ್ರೀಡನವಿಶಾರದಾನ್ |
ಲಕ್ಷ್ಮೀನಾರಾಯಣಮುನೀನ್ ವಂದೇ ವಿದ್ಯಾಗುರೂನ್ಮಮ ||

Tham Vande Narasimhatheerthanilayam Srivyasarat Pujitham |
Dhyayantam Manasa Nrisimhacharanam Sripadarajam Gurum ||
Padavakyapramanabdhivikredanavisharadan |
Lakshminarayanamunien Vande Vidyaguroonmama ||

ಶ್ರೀಪಾದರಾಜರ ಜನ್ಮಸ್ಥಳ ಚನ್ನಪಟ್ಟಣ ತಾಲೂಕಿನ ಅಬ್ಬೂರು. ಅದು ಬ್ರಹ್ಮಣ್ಯತೀರ್ಥರೆಂಬ ಯತಿಗಳ ಸ್ಥಳವೂ ಹೌದು.
ಶ್ರೀಪಾದರಾಜರ ಪೂರ್ವಾಶ್ರಮದ ಹೆಸರು ಲಕ್ಷ್ಮೀನಾರಾಯಣ ಎಂಬುದು.

ಶೇಷಗಿರಿಯಪ್ಪ ಮತ್ತು ಗಿರಿಯಮ್ಮ ತಂದೆತಾಯಿಗಳು, ಲಕ್ಷ್ಮೀನಾರಾಯಣ ಚಿಕ್ಕವನಿದ್ದಾಗ ಹಸುಗಳನ್ನು ಮೇಯಿಸುತ್ತ ಊರ ಹೊರಗೆ ಓಡಾಡುತ್ತಿದ್ದ.

ಆ ವೇಳೆಗೆ ಅಲ್ಲಿ ಸ್ವರ್ಣವರ್ಣತೀರ್ಥರೆಂಬ ಯತಿಗಳ ಕಣ್ಣಿಗೆ ಬಿದ್ದ. ಶ್ರೀರಂಗಮ್‌ದಿಂದ ಬಂದಿದ್ದ ಅವರು ಅಬ್ಬೂರುನಲ್ಲಿದ್ದ ಶ್ರೀ ಪುರುಷೋತ್ತಮ ತೀರ್ಥರನ್ನು ಕಾಣಬಯಸಿದ್ದರು. ತಮ್ಮ ಕಣ್ಣಿಗೆ ಬಿದ್ದ ಲಕ್ಷ್ಮೀನಾರಾಯಣನ ಮುಖದ ತೇಜಸ್ಸು, ವಾಕ್‌ಚತುರತೆಗಳನ್ನು ಮನಗಂಡು, ಶ್ರೀ ಪುರುಷೋತ್ತಮತೀರ್ಥರ ಮಧ್ಯಸ್ಥಿಕೆಯಿಂದ ತಂದೆತಾಯಿಗಳನ್ನೊಪ್ಪಿಸಿ ಅವನನ್ನು ಶ್ರೀರಂಗಮ್‌ಗೆ ಕರೆದೊಯ್ದರು.

ಉಪನಯನ ಮಾಡಿಸಿ ಸನ್ಯಾಸ ದೀಕ್ಷೆಯನ್ನಿತ್ತರು. ತಮ್ಮಲ್ಲಿಯೇ ಕೆಲಕಾಲ ವಿದ್ಯಾಭ್ಯಾಸ ಮಾಡಿಸಿ, ಹೆಚ್ಚಿನ ಅಧ್ಯಯನಕ್ಕಾಗಿ ಶ್ರೀ ವಿಭುದೇಂದ್ರ- ತೀರ್ಥರಲ್ಲಿಗೆ (ಈಗಿನ ಶ್ರೀ ರಾಘವೇಂದ್ರ ಮಠದ ಆರಂಭಪೂರ್ವದ ಶ್ರೀಗಳವರು) ಕಳುಹಿದರು. ಪರಿಣಾಮವಾಗಿ ಲಕ್ಷ್ಮೀನಾರಾಯಣ ತೀರ್ಥರು ಬಲು ಬೇಗ ಸಕಲ ಶಾಸ್ತ್ರಪಾರಂಗತರಾದರು.


ಒಮ್ಮೆ ಕೊಪ ಎಂಬಲ್ಲಿ ಶ್ರೀ ವಿಭುದೇಂದ್ರರು ಉತ್ತರಾದಿಮಠದ ಶ್ರೀ ರಘುನಾಥತೀರ್ಥರನ್ನು ಸಂಧಿಸಿದಾಗ, ಅವರೆದುರು ತಮ್ಮ ಈ ನೆಚ್ಚಿನ ಶಿಷ್ಯನ ಪಾಂಡಿತ್ಯವನ್ನು ತೋರ್ಪಡಿಸುವಂತೆ ವ್ಯವಸ್ಥೆ ಮಾಡಿದರು.

ಅದರಿಂದ ಸುಪ್ರೀತರಾದ ಶ್ರೀ ರಘುನಾಥತೀರ್ಥರು ಮನವಾರೆ ಹೊಗಳಿದಾಗ ಲಕ್ಷ್ಮೀ-ನಾರಾಯಣತೀರ್ಥರು “ತಮ್ಮಂಥ ಶ್ರೀಪಾದರ ಹೊಗಳಿಕೆಗೆ ಪಾತ್ರನಾದ ನಾನು ನಿಜವಾಗಿ ಧನ್ಯನು” ಎಂದರಂತೆ, ಆಗ ಶ್ರೀಗಳವರು “ನಾವು ಶ್ರೀಪಾದರಾದರೆ ನೀವೋ ಶ್ರೀಪಾದ ರಾಜರು” ಎಂದು ಉದ್ಗಾರವೆತ್ತಿದರು. ಅಂದಿನಿಂದ ‘ಶ್ರೀಪಾದರಾಜರು’ ಎಂಬ ನಾಮಧೇಯವೇ ರೂಢಿಯಲ್ಲಿ ಬಂದಿತು.

Sripadaraja’s birth place is Abbur in Channapatnam taluk. It is also the place of Yatigalu called Brahmanyatirtharu.

The name of Sripadaraja’s Purvashram is Lakshminarayana. Seshagiriappa and Giriamma were his parents, Lakshminarayan used to roam outside the town tending cows when he was young.

At that time Svarnavarnatirtha yatigalu saw him. Coming from Srirangam, he wanted to visit Sri Purushottama Theertha at Abbur. Seeing the brilliance of Lakshminarayana’s face and eloquence, they took him to Srirangam through the intervention of Sri Purushottamathirtha. After doing Upanayana, he was given sainthood. After studying on his own for some time, he left for further study from Sri Vibhudendra-Theertha (the pre-srigalalu of the present Sri Raghavendra Math). As a result, Lakshminarayan Theertha became well versed in all the scriptures very quickly.

Once at Koppa, Sri Vibhudendra met Sri Raghunathatirtha of Uttaradimatha, who arranged for his favorite disciple to demonstrate his mastery. When Sri Raghunathatirtha, who was pleased with that, praised Manavare, Lakshmi-Narayanatirtha said, “I am truly blessed to have been praised by such a Sripada“, then the Raghunathatirtha Swamigalu exclaimed, “If I am Sripada, then you are the kings of Sripada – Sripada Rajaru“. Since then, the name ‘Sripadarajaru‘ became the name of Lakshminarayana .

P.S: I have been posting lyrics and audio ( Thanks Ms. Vinaya) for the past several weeks composed by Sri Sreepadarajaru. You can find them all here: https://meerasubbarao.wordpress.com/category/sri-madhwacharya/sri-sreepada-rajaru/

Marudansara Mata Pidiyade Iha Paradalli Sukhavillavante | Sri Sreepada Rajaru

Composer : Sri Sreepada Rajaru
Ankita : Ranga Vittala
Composed on : Sri Madhwacharya

ಮರುದಂಶರ ಮತ ಪಿಡಿಯದೆ ಇಹ
ಪರದಲ್ಲಿ ಸುಖವಿಲ್ಲವಂತೆ || PA ||

ಅರಿತು ವಿವೇಕದಿ ಮರೆಯದೆ ನಮ್ಮ ಗುರುರಾಯರ ನಂಬಿ ಬದುಕಿರೋ || A PA ||

ಕ್ಷೀರವ ಕರೆದಿಟ್ಟ ಮಾತ್ರದಿ ಸಂಸ್ಕಾರವಿಲ್ಲದೆ ಘೃತವಾಗದಂತೆ
ಸೂರಿಜನರ ಸಂಗವಿಲ್ಲದೆ ಸಾರವೈರಾಗ್ಯ ಭಾಗ್ಯ ಪುಟ್ಟದಂತೆ || 1 ||

ಉಪದೇಶವಿಲ್ಲದ ಮಂತ್ರ ಏಸು ಜಪಿಸಲು ಫಲಗಳ ಕೊಡದಂತೆ
ಉಪವಾಸ ವ್ರತಗಳಿಲ್ಲದೆ ಜೀವ ತಪಸಿಯೆನಿಸಿ ಕೊಳ್ಳಲರಿಯನಂತೆ || 2 ||

ಸಾರಮಧ್ವಶಾಸ್ತ್ರವೋದದೆ ಗುರುತಾರತಮ್ಯ ಜ್ಞಾನ ಪುಟ್ಟದಂತೆ
ಶ್ರೀರಂಗವಿಠಲನ ಭಜಿಸದೆ ಮುಂದೆ ಪರಮ ಗತಿ ದೊರಕೊಳ್ಳದಂತೆ || 3 ||

marudanśara mata piḍiyade iha paradalli sukhavillavante || PA ||

aritu vivēkadi mareyade nam’ma gururāyara nambi badukirō || A PA ||

kṣīrava karediṭṭa mātradi sanskāravillade ghr̥tavāgadante
sūrijanara saṅgavillade sāravairāgya bhāgya puṭṭadante || 1 ||

upadēśavillada mantra ēsu japisalu phalagaḷa koḍadante
upavāsa vratagaḷillade jīva tapasiyenisi koḷḷalariyanante || 2 ||

sāramadhvaśāstravōdade gurutāratamya jñāna puṭṭadante
śrīraṅgaviṭhalana bhajisade munde parama gati dorakoḷḷadante || 3 ||

Plain English

marudansara mata pidiyade iha paradalli sukhavillavante || PA ||

aritu vivekadi mareyade nam’ma gururayara nambi badukiro || A PA ||

ksirava kareditta matradi sanskaravillade ghrtavagadante
surijanara sangavillade saravairagya bhagya puttadante || 1 ||

upadesavillada mantra esu japisalu phalagala kodadante
upavasa vratagalillade jiva tapasiyenisi kollalariyanante || 2 ||

saramadhvasastravodade gurutaratamya jnana puttadante
srirangavithalana bhajisade munde parama gati dorakolladante || 3 ||

Mangala Mukhya Prananige | Sri Vyasa Rajaru

Composer : Sri Vyasa Rajaru
Ankita : Sri Krishna
Singer : Ms. Vinaya

ಮಂಗಳ ಮುಖ್ಯ ಪ್ರಾಣನಿಗೆ || PA ||

ಜಯ ಮಂಗಳ ವಾಯುಕುಮಾರನಿಗೆ || A PA ||

ಅಂಜನಾದೇವಿಯ ಕಂದಗೆ ಮಂಗಳ
ಕಂಜಾಕ್ಷ ಹನುಮಂತಗೆ ಮಂಗಳ
ಸಂಜೀವನ ತಂದಾತಗೆ ಮಂಗಳ
ಸಜ್ಜನ ಪರಿ ಪಾಲಗೆ ಮಂಗಳ || 1 ||

ಅತಿ ಬಲವಂತ ಶ್ರೀಭೀಮಗೆ ಮಂಗಳ
ಪ್ರತಿಮಲ್ಲರ ಗೆಲಿದವಗೆ ಮಂಗಳ
ಸತಿಯ ಸೀರೆಯ ಸೆಳೆಯ ಬಂದವನ
ಪೃಥ್ವಿ ಮ್ಯಾಲೆ ಕೆಡಹಿ, ದಾತಗೆ ಮಂಗಳ |\ 2 ||

ಸರಸಸು ಶಾಸ್ತ್ರವ ಪೇಳ್ದವಗೆ ಮಂಗಳ
ನಿರುತ ಶ್ರೀರಾಮರ ಭಂಟಗೆ ಮಂಗಳ
ದೊರೆ ಶ್ರೀ ಕೃಷ್ಣನ ಪೂಜೆಯ ಮಾಡುವ
ಗುರು ಮಧ್ವ ಮುನಿರಾಯರಿಗೆ ಮಂಗಳ |\ 3 ||

maṅgaḷa mukhya prāṇanige || PA ||

jaya maṅgaḷa vāyukumāranige || A PA ||

an̄janādēviya kandage maṅgaḷa
kan̄jākṣa hanumantage maṅgaḷa
san̄jīvana tandātage maṅgaḷa
sajjana pari pālage maṅgaḷa || 1 ||

ati balavanta śrībhīmage maṅgaḷa
pratimallara gelidavage maṅgaḷa
satiya sīreya seḷeya bandavana
pr̥thvi myāle keḍahi, dātage maṅgaḷa |\ 2 ||

sarasasu śāstrava pēḷdavage maṅgaḷa
niruta śrīrāmara bhaṇṭage maṅgaḷa
dore śrī kr̥ṣṇana pūjeya māḍuva
guru madhva munirāyarige maṅgaḷa |\ 3 ||

Plain English

mangala mukhya prananige || PA ||

jaya mangala vayukumaranige || A PA ||

anjanadeviya kandage mangala
kanjaksa hanumantage mangala
sanjivana tandatage mangala
sajjana pari palage mangala || 1 ||

ati balavanta sribhimage mangala
pratimallara gelidavage mangala
satiya sireya seleya bandavana
prthvi myale kedahi, datage mangala |\ 2 ||

sarasasu sastrava peldavage mangala
niruta sriramara bhantage mangala
dore sri krsnana pujeya maduva
guru madhva munirayarige mangala |\ 3 ||