Archive for June 23rd, 2024

Hyaange Maadalayya Krishna | Sri Gopala Dasaru

Composer : Sri Gopala Dasaru
Ankita: gopalavittala
Ref : NESRS Hari Smarane Bhajane, Ms. Rashmi Rajan taught this song. I was unable to join the bhajane class due to work, but Ms. Vinaya learnt and shared the recording.
Singer : Ms. Vinaya

ಹ್ಯಾಂಗೆ ಮಾಡಲಯ್ಯ ಕೃಷ್ಣ ಹೋಗುತಿದೆ ಆಯುಷ್ಯ
ಮಂಗಲಾಂಗ ಭವಭಂಗವ ಬಿಡಿಸಿ ನಿನ್ನ ಡಿಂಗರಿಗನ್ನ ಮಾಡೋ ಅನಂಗ ಜನಕ || PA ||

ಯೇಸು ಜನುಮದ ಸುಕೃತದ ಫಲವೊ ತಾನು ಜನಿಸಲಾಗಿ
ಭೂಸುರದೇಹದ ಜನುಮವು ಎನಗೆ ಸಂಭವಿಸಿದೆಯಾಗಿ|
ಮೋದತೀರ್ಥ ಮತ ಚಿನ್ಹಿತನಗದೆ ದೋಷಕೆ ಒಳಗಾಗಿ
ಲೇಶಸಾಧನವ ಕಾಣದೆ ದುಸ್ಸಹವಾಸದಿಂದಲೆ ದಿನ ದಿನ ಕಳೆದೆ || 1 ||

ಶಶಿಮುಖ ಕನಕದ ಆಶೆಗೆ ಬೆರೆತು ವಸುಪತಿ ನಿನ್ನಡಿಯ
ಹಸನಾಗಿ ನಿನ್ನ ನೆನೆಯದೆ ಕೃಪೆಯ ಗಳಿಸದೆ ಕೆಟ್ಟೆನಯ್ಯ|
ನಿಶೆ ಹಗಲು ಸ್ಥಿರವೆಂದು ತನುವನು ಪೋಶಿಸಲಾಶಿಸಿ ಜೀಯ
ಉಸುರಿದೆ ನೆಲವೊ ಸರ್ವಕಾಲ ನಿನ್ನೊಡೆತನವೆಂಬುವ ಬಗೆಯನು ಅರಿಯದೆ || 2 ||

ನೆರೆನಂಬಿದೆ ಪಾವಟೆಗಳು ಎಲ್ಲ ಸರಿದು ಹೋದವಲ್ಲ
ಮರಳಿ ಈ ಪರಿಯ ಜನುಮವು ಬರುವ ಭರವಸೆಯಂತು ಇಲ್ಲ|
ಪರಿಪರಿ ವಿಷಯದ ಆಶೆಯು ಎನಗೆ ಕಿರಿದು ಆಯಿತಲ್ಲ
ಹರಿಯೆ ಜಗದಿ ನೀನೊಬ್ಬನಲ್ಲದೆ ಪೊರೆವರಿನ್ನಾರು ಇಲ್ಲವಲ್ಲ || 3 ||

ಅವನಿ ಒಳಗೆ ಪುಣ್ಯಕ್ಷೇತ್ರ ಚರಿಸುವ ಹವನಿಕೆ ಎನಗಿಲ್ಲ
ಪವನಾತ್ಮಕ ಗುರು ಮಧ್ವ ಶಾಸ್ತ್ರದ ಪ್ರವಚನ ಕೇಳಲಿಲ್ಲ|
ತವಕದಿಂದ ಗುರು ಹಿರಿಯರ ಸೇವಿಸಿ ಅವರ ಒಲಿಸಲಿಲ್ಲ
ರವಿನಂದನ ಕೇಳಿದರುತ್ತರ ಕೊಡೆ ವಿವರ ಸರಕು ಒಂದಾದರಿಲ್ಲ || 4 ||

ಭಗವತರೊಡಗೂಡಿ ಉಪವಾಸ ಜಾಗರ ಒಂದಿನ ಮಾಡಲಿಲ್ಲ
ರಾಗದಿ ಶುಕಮುನಿ ಪೇಲ್ದ ಹರಿಕಥೆ ಸಮ್ಯೋಗವೆಂಬೋದಿಲ್ಲ |
ನೀಗುವಂತ ಭವ ಭಯವ ಭಕುತಿ ವೈರಾಗ್ಯವೆಂಬೋದಿಲ್ಲ
ಯೋಗಿವಂದ್ಯ ಗೋಪಾಲವಿಟ್ಠಲ ತಲೆ ಭಾಗಿ ನಿನ್ನನೇ ಬೇಡಿಕೊಂಬೆ || 5 ||

Hyaange maadalayya Krishna
Hogutide aayushya ||pa||

Mangalaanga bhava bhanga bidisi
Ninna digarigana maado ananga janaka||a.pa||

Yesu janumada sukrutada phalavo taanu janisalaagi
Boosura dehada janumavu enage
Sambhavisideyaagi
Moda theertha matha chinhitanaagade
Doshake olagaagi
Lesha saadhanava kaanade dussahavaasadinadale
Dina dina kalede ||1||

Shashimukha kanakada aasege beretu
Vasupati ninadiya
Hasanaagi ninna neneyade krupeya
Galisade keetenayya
Nishi hagalu stiravendu tanuvanu
Poshisalaashisi jeeya
Usuride nelavo sarvakaala
Ninnodetanavembuva bagyanu ariyade ||2||

Nere nambida paavatigalu ella
Saridu hodavalla
Marali ee pari janumavu baruva
Bharavaseyantu illa
Pari pari vishayada aaseyu yanage
Piridu aayitalla
Hariye jagadi neenobba nallade
Porevarinnaaru illavalla ||3||

Avaniyolage punya kshetra charisuva
Havanike yanagilla
Pavanaatmaka guru madhwa shaastrada
Pravachana kelalilla
Tavakadinda guru hiraya sevisi avara olisalilla
Ravinandana kelidaruttara kode
Vivara sarku ondaadarilla ||4||

Bhaagavata rodagoodi upvaasa jaagara
Ondina maadalilla
Raagadi shuka muni pelda harikathe
Samyogavembodilla
Neegu vantha hava bhayava bhakuti
Vairagya vembodilla
Yogi vanda Gopaala vittala
Talebaagi ninnane bedi kombe ||5||

Hyaange maadalayya Krishna hogutide aayushya ||pa||