Maruti Nammaguru Muruti | Sri Jagannatha Dasaru

Composer : Sri Jagannatha Dasaru
Ankita : Jagannatha Vittala
Book Ref : Samagra Dasa Sahitya on Sri Jagannatha Dasaru. This is the 74th composition in this book.

ಮಾರುತೀ ನಮ್ಮಗುರು ಮೂರುತೀ || PA ||

ಮಾರುತಿ ಕರುಣಿಸು ಜ್ಞಾನಾ ಎನ್ನ
ಸೇರಿದ ಸತತ ಅಜ್ಞಾನಾ ಆಹ
ದೂರ ಓಡಿಸಿ ಹರಿ ಆರಾಧನೆ ಇತ್ತು
ಪಥ ಸರ್ವಾಧಾರ ಉದಾರನೆ || A PA ||

ದ್ವಿತೀಯ ಯುಗದಲ್ಲವತರಿಸಿ ಸೀತಾ
ಪತಿಯ ಪಾದಕೆ ನಮಸ್ಕರಿಸಿ ಅಬ್ದಿ
ಅತಿ ವೇಗದಿಂದ ಉತ್ತರಿಸಿ ರವಿ
ಸುತಗೊಲಿದವನುದ್ಧರಿಸಿ ಆಹಾ
ಕ್ಷಿತಿಜದೇವಿಯಳನು ಸ್ತುತಿಸಿ ಮುದ್ರಿಕೆಯಿತ್ತು
ದಿವಿಜರ ಸದೆದ ಭಾರತಿಯ ರಮಣನೆ || 1 ||

ಕುರುಕುಲದಲ್ಲಿ ಉದ್ಭವಿಸಿ ಬಲು
ಗರಳ ಪದಾರ್ಥವ ಸಲಿಸಿ ಚೆಲ್ವ
ತರಣಿ ರೂಪವನೆ ಸಿಂಗರಿಸಿ ನೀಚ
ತರ ಕೀಚಕನ ಸಂಹರಿಸಿ ಆಹ
ಜರೆಯ ಸುತನ ಸೀಳಿ ಧರಣಿಪಾಲಕರನ್ನು
ಸೆರೆಯ ಬಿಡಿಸಿ ಕಾಯ್ದ ಪರಮ ಸಮರ್ಥನೆ || 2 ||

ಭೂತಳದೊಳಗೆ ಯತಿಯ ರೂಪ
ನೀ ತಾಳಿದೆಯೋ ಶುಭಕಾಯ ಮಾಯಿ
ವ್ರಾತ ಗೆಲಿದೆ ಮಧ್ವರಾಯಾ ಕಾಯ
ಜಾತ ಜನಕಗತಿ ಪ್ರೀಯಾ ಆಹಾ
ಭೂತನಾಥನೆ ಪರಮಾತುಮನೆಂಬ
ಪಾತಕರರಿ ಜಗನ್ನಾಥವಿಠಲನ ದೂತ || 3 ||

Maruti nam’maguru muruti || PA ||

maruti karunisu jnana enna
serida satata ajnana aha
dura odisi hari aradhane ittu
patha sarvadhara udarane || a.Pa. ||

Dvitiya yugadallavatarisi sita
patiya padake namaskarisi abdi
ati vegadinda uttarisi ravi
sutagolidavanud’dharisi aha
ksitijadeviyalanu stutisi mudrikeyittu
divijara sadeda bharatiya ramanane || 1 ||

kurukuladalli udbhavisi balu
garala padarthava salisi celva
tarani rupavane singarisi nica
tara kicakana sanharisi aha
jareya sutana sili dharanipalakarannu
sereya bidisi kayda parama samarthane || 2 ||

bhutaladolage yatiya rupa
ni talideyo subhakaya mayi
vrata gelide madhvaraya kaya
jata janakagati priya aha
bhutanathane paramatumanemba
patakarari jagannathavithalana duta || 3 ||

2 responses to this post.

  1. Posted by shanthisethuraman on April 19, 2024 at 6:18 am

    Excellent song by Maruthi, you sang well, the lyrics are so inspiring.

    Maruti nam’maguru muruti || PA ||

    maruti karunisu jnana enna serida satata ajnana aha dura odisi hari aradhane ittu patha sarvadhara udarane || a.Pa.

    Reply

Leave a comment