Composer : Sri Vyasa Rajaru
Ankita : sri krishna
Book Ref : Samagra Dasa Sahitya on Sri Sreepada Rajaru and Sri Vyasa Rajaru. 159th song in this book.
ಜಯ ವಾಯು ಹನುಮಂತ ಜಯ ಭೀಮ ಬಲವಂತ || PA ||
ಜಯಪೂರ್ಣ ಮತಿವಂತ ಜಯ ಸಲಹೋ ಸಂತ || A PA ||
ಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆ
ನಂದದಿಂದಲಿ ಮಾಡಿ ಕಪಿ ಬಲವ ಕೂಡಿ
ಸಿಂಧು ಲಂಘಿಸಿ ಖಳರ ವನ ಭಂಗಿಸಿ ಸೀತೆ-
ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ || 1 ||
ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಅರಿಬಲವ ಕುಟ್ಟಿ
ಉರಗ ಬಂಧನದಿಂದ ಕಪಿವರರು ಮೈಮರಿಯೆ
ಗಿರಿಯ ಸಂಜೀವನವ ತಂದು ಬದುಕಿಸಿದೆ || 2 ||
ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿ
ಶ್ರೀ ಪಾರ್ಥಸಾರಥಿಯ ಭಜಕ ನೀನಾದೆ
ಪಾಪಿ ಮಾಗಧ ಬಕರ ಕೀಚಕ ಹಿಡಿಂಬಕರ
ಕೋಪದಿಂದಲಿ ತರಿದೆ ಮೂರ್ಜಗದಿ ಮೆರೆದೆ || 3 ||
ಧುರದಲಿ ದುರ್ಯೋಧನನ ಬಲವನು ತರಿದೆ
ಅರಿತು ದುಶ್ಯಾಸನನ ಒಡಲನ್ನು ಬಗಿದೆ
ಉರವ ತಪ್ಪಿಸಿ ಕೌರವನ್ನ ತೊಡೆಗಳ ಮುರಿದೆ
ಹರಿಯ ಕಿಂಕರ ದುರಂಧರಗಾರು ಸರಿಯೆ || 4 ||
ಕಲಿಯುಗದಲಿ ಕಳ್ಳರುದಿಸಿ ದುರ್ಮತಗಳನು
ಬಲಿಸಿ ಶ್ರೀಹರಿಯ ಗುಣಗಳನು ಮರೆಸಿ
ಕಲಿಯನನುಸರಿಸಲು ಗುರುವಾಗಿ ಅವತರಿಸಿ
ಖಳರ ದುರ್ಮತ ಮುರಿದೆ ಶ್ರೀಕೃಷ್ಣಪರನೆಂದೆ || 5 ||
Jaya vayu hanumanta jaya bhima balavanta || PA ||
jayapurna mativanta jaya salaho santa || A PA ||
anjaneyali hutti andu ramana seve
nandadindali madi kapi balava kudi
sindhu langhisi khalara vana bhangisi site-
gungurava kotte lankapurava sutte || 1 ||
harige cudamaniyanittu harigala kudi
saradhiyanu katti aribalava kutti
uraga bandhanadinda kapivararu maimariye
giriya sanjivanava tandu badukiside || 2 ||
dvaparantyadi pandu bhupanatmajanenisi
sri parthasarathiya bhajaka ninade
papi magadha bakara kicaka hidimbakara
kopadindali taride murjagadi merede || 3 ||
dhuradali duryodhanana balavanu taride
aritu dusyasanana odalannu bagide
urava tappisi kauravanna todegala muride
hariya kinkara durandharagaru sariye || 4 ||
kaliyugadali kallarudisi durmatagalanu
balisi srihariya gunagalanu maresi
kaliyananusarisalu guruvagi avatarisi
khalara durmata muride srikrsnaparanende || 5 ||
Posted by shanthisethuraman on April 22, 2024 at 5:12 am
Excellent song by Jaya Vayu Hanuman, you sang very well. The lyrics are inspiring,
Jaya vayu hanumanta jaya bhima balavanta || PA ||
jayapurna mativanta jaya salaho santa || A PA ||
anjaneyali hutti andu ramana seve nandadindali madi kapi balava kudi