Ramana Nodirai Raghukula Somana Padirai | Sri Prasanna Venkata Dasaru

Composer : Sri Prasanna Venkata Dasaru
Ankita : Prasannavenkata
Book Ref : Sri Prasannavenkatadasara samagra keertane
Singer : Ms. Vinaya

ರಾಮನ ನೋಡಿರೈ ರಘುಕುಲ
ಸೋಮನ ಪಾಡಿರೈ || PA ||

ಜೀಮೂತ ಶ್ಯಾಮಲಕಾಯ ಜನಕ
ಜಾಮಾತ ಸೀತಾಕಾಂತ || A PA ||

ಕೋಟಿದಿವಾಕರನಿಭ ಮಕುಟದ ಮಸ್ತಕದ ಮುದ್ದಿನ ಮುಖದ |
ನೀಟಹ ಫಣೆಯಲಿ ಮೃಗಮದ ಪುಂಡ್ರ ತಿಲಕದ ನೀಲಾಳಕದ ||
ಮಾಟಕ ಮದನನ ಬಿಲ್ಲ ಹಳಿವ ಹುಬ್ಬುಗಳ ಇತ್ತಂಡಗಳ|
ನೋಟದಿ ದಯಾರಸ ಸೂಸುವ ಕಮಲದಳಗಳ ಸಮನಯನಗಳ || 1 ||

ಎಸೆವ ಸುನಾಸಿಕ ಜ್ವಲಿತ ಕುಂಡಲ ಸ್ಮಿತವದನ ಶಶಿಸಮರದನ |
ಹೊಸ ತುಲಸಿಯ ಮಂಜರಿ ವನಮಾಲಾಧರನ ಸತ್ಕಂಧರನ ||
ಮಿಸುನಿಯ ವೈಜಯಂತಿ ತ್ರಿಸರವು ದಿವ್ಯಪದಕಗಳ ಝಳ ಝಳಪುಗಳ |
ಲಸತ್ ಶ್ರೀವತ್ಸ ವಕ್ಷದಿ ಕುಂಕುಮ ಚಂದನದ ಗುಣಗಣಘನದ || 2 ||

ಮರಕತಸ್ತಂಭಗಳಿಗೆ ಪೋಲ್ವೆಡೆಬಾಹುಗಳ ಅಂಗದಯುಗಳ |
ಕರವಲಯಾಂಗುಲಿಮುದ್ರಿಕೆ ಧೃತಕೋದಂಡ ದಂಡಕದಂಡ ||
ಸಿರಿಜಠರ ತ್ರಿವಳಿ ಗಂಭೀರನಾಭ ನಿರ್ಜರನಾಭ |
ವರಪಿಂಗಳ ಕೌಶೇಯಾಂಬರ ಕಟಿಸೂತ್ರ ಶ್ರೀ ಬ್ರಹ್ಮಸೂತ್ರ || 3 ||

ಬಟ್ಟದೊಡೆ ಜಾನು ಘಟ್ಟಿದಂತೋಪಮ ಜಂಘ ಸಂವೃತ ಜಂಘಾ |
ಕುಟಿಲ ನೀ ರಾಕ್ಷಸದಲ್ಲಣ ಪೆಂಡೆಯದ ಚೆಲುವಾ ಜನಜನಿ ಗೊಲಿವ ||
ಕಠಿಣತರ ಪದತಳದೆಡೆ ಧ್ವಜಾಂಕುಶಾಂಬುಜ ಹೃತ್ಕಲುಷಾ |
ನಿಟಿಲನಯನ ವಿಧಿಸುರ ಋಷಿವಂದಿತ ಚರಣ ನೂಪುರಾಭರಣ || 4 ||

ಸುಖಮುನಿ ಮುಖ್ಯಮುನಿ ಪೂಜಿತ ವಿಗ್ರಹ ವಾರಾ ಪಾರ ವಿಹಾರ |
ನಿಖಿಲ ಗುಣಾರ್ಣವ ನಿತ್ಯದಯಾರ್ಣವ ರಾಜ ರಾಜಾಧಿರಾಜ ||
ಸಕಲ ಸಂಯಮಿಕುಲಮೌಳಿರತುನ ಸತ್ಯಪೂರ್ಣ ಮನೋರಥಪೂರ್ಣ |
ಪ್ರಸನ್ವೆಂಕಟಪತಿ ಶ್ರೀ ಭೂಲೋಲ ಭುವನಕೆ ಮೂಲ || 5 ||

ramana nodirai
raghukula somana padirai || PA ||

jimuta syamalakaya janaka
jamata sitakanta || A PA ||

kotidivakaranibha makutada mastakada muddina mukhada |
nitaha phaneyali mrgamada pundra tilakada nilalakada ||
mataka madanana billa haliva hubbugala ittandagala|
notadi dayarasa susuva kamaladalagala samanayanagala || 1 ||

eseva sunasika jvalita kundala smitavadana sasisamaradana |
hosa tulasiya manjari vanamaladharana satkandharana ||
misuniya vaijayanti trisaravu divyapadakagala jhala jhalapugala |
lasat srivatsa vaksadi kunkuma candanada gunaganaghanada || 2 ||

marakatastambhagalige polvedebahugala angadayugala |
karavalayangulimudrike dhrtakodanda dandakadanda ||
sirijathara trivali gambhiranabha nirjaranabha |
varapingala kauseyambara katisutra sri brahmasutra || 3 ||

battadode janu ghattidantopama jangha sanvrta jangha |
kutila ni raksasadallana pendeyada celuva janajani goliva ||
kathinatara padataladede dhvajankusambuja hrtkalusa |
nitilanayana vidhisura rsivandita carana nupurabharana || 4 ||

sukhamuni mukhyamuni pujita vigraha vara para vihara |
nikhila gunarnava nityadayarnava raja rajadhiraja ||
sakala sanyamikulamauliratuna satyapurna manorathapurna |
prasanvenkatapati sri bhulola bhuvanake mula || 5 ||

2 responses to this post.

  1. Posted by shanthisethuraman on April 16, 2024 at 6:30 am

    Very nice to hear the song on Rama by Ms.Vinaya- Ramana Nodirai Raghukula Somana Padirai,

    amana nodirai raghukula somana padirai || PA ||

    jimuta syamalakaya janaka jamata sitakanta || A PA ||

    Reply

Leave a comment