Sri Ramana Maruti Nodida | Sri Hanumadvilasa

Composer : Kavishekara Tippannarya
Book Reference : Sri Hanumadvilasa

ಶ್ರೀ ರಾಮನ ಮಾರುತಿ ನೋಡಿದ
ಶ್ರೀ ರಾಮನೇ ಲಕ್ಷ್ಮೀನಾರಾಯಣನೆಂದು
ದೂರದಿಂದಲಿ ವಂದನೆ ಮಾಡಿದ || PA ||

ಜಲದಾಭಗಾತ್ರನ ಜಲಜಾತನೇತ್ರನ
ವಿಲಸಿತ ಸಂಪೂರ್ಣ ವಿಧುವಕ್ತ್ರನ
ಬಹು ಸುಪವಿತ್ರನ ಬಲು ಸುಚರಿತ್ರನ
ಒಲಿದು ಸುತ್ತಿದ ನಿಲುವು ಕೆಂಜಡೆ
ಲಘು ರತ್ನ ಕಿರೀಟದಂದದಿ
ಚೆಲುವ ಶಿರದಲಿ ಪೊಳೆವ ವನ ಮಂಜುಳ ಸುಕುಂತಳನಾ || 1 ||

ಮೃಗಮದಫಾಲನ ಮುಕುರ ಕಪೋಲನ
ಬಿಗಿದುಟ್ಟ ಚೀರ ವಲ್ಕಲ ಚೇಲನ
ಸುಗುಣ ವಿಶಾಲನ ಶುಭಕರ ಶೀಲನಾ
ಸೊಗಸು ನಗೆಮಿಗೆ ನಗೆಮೊಗದಿ ಭ್ರೂ
ಯುಗದ ಕುಡಿ ಮೀಸೆಗಳ ಕುಂದದ
ಮುಗುಳು ಪಲ್ಗಳ ಚಿಗುರುದುಟಿ ಸಂಪಿಗೆಯ ನಾಸಿಕನಾ || 2 ||

ಕರುಣಾಕಟಾಕ್ಷನ ವರ ಪೀನವಕ್ಷನ
ದರಕಂಧರನ ಸುರಚಿರ ಕಕ್ಷನ
ಸುರಗಣ ಪಕ್ಷನ ಸಾಧುಜನ ರಕ್ಷನ
ನಿರುಪಮಾಭಯ ಕರಸರೋಜನ
ಕರಿಕರದವೋಲ್ ಮೆರೆವ ಬಹು ಸುಂ-
ದರದಿ ತೋರ್ಪಾಜಾನುಬಾಹು ಸ್ಪುರಿತ ವಿಗ್ರಹನ || 3 ||

ಕಲಕೀರಭಾಷನ ಕಮನೀಯ ವೇಷನ
ಎಳೆತುಳಸಿ ಸರಗಳ ಭೂಷನ
ಖಳಜನ ಶೋಷನ ಕವಿಗನ ಪೋಷನ
ಸುಳಿಯ ನಾಭಿ ತ್ರಿವಳಿಯುತ ನಿ-
ರ್ಮಲ ತಾಳೋದರ ಸೆಳೆನಡುವ ಪ್ರ-
ಜ್ವಲಿವ ತೊಡೆಗಳ ಜಾನು ಜಂಘೋ ಜ್ವಲಪಾದಾಂಬುಜನ || 4 ||

ಮುನಿಜನ ಪ್ರೇಮನ ಘನಪುಣ್ಯನಾಮನ
ಚಿನುಮಯ ಶ್ರೀ ಖಾದ್ರಿ ಪುರಿ ಧಾಮನ
ವಿನಮಿತಸೋಮನ ದನುಜವಿರಾಮನ
ಅನುಜನಾನುಪಮ ತೊಡೆಯ ತಲೆದಿಂ-
ಬಿನಲಿ ಶಯನಿಸಿ ಮುದದಿ ತಾ ಬಹು-
ದನುದಯಾಪಾಂಗದಿ ನಿರೀಕ್ಷಿಸುವನ ಜಗನ್ಮಯನ || 5 ||

sri ramana maruti nodida
sri ramane laksminarayananendu
duradindali vandane madida || PA ||

jaladabhagatrana jalajatanetrana
vilasita sampurna vidhuvaktrana
bahu supavitrana balu sucaritrana
olidu suttida niluvu kenjade
laghu ratna kiritadandadi
celuva siradali poleva vana manjula sukuntalana || 1 ||

mrgamadaphalana mukura kapolana
bigidutta cira valkala celana
suguna visalana subhakara silana
sogasu nagemige nagemogadi bhru
yugada kudi misegala kundada
mugulu palgala ciguruduti sampigeya nasikana || 2 ||

karunakataksana vara pinavaksana
darakandharana suracira kaksana
suragana paksana sadhujana raksana
nirupamabhaya karasarojana
karikaradavol mereva bahu sum-
daradi torpajanubahu spurita vigrahana || 3 ||

kalakirabhasana kamaniya vesana
eletulasi saragala bhusana
khalajana sosana kavigana posana
suliya nabhi trivaliyuta ni-
rmala talodara selenaduva pra-
jvaliva todegala janu jangho jvalapadambujana || 4 ||

munijana premana ghanapunyanamana
cinumaya sri khadri puri dhamana
vinamitasomana danujaviramana
anujananupama todeya taledim-
binali sayanisi mudadi ta bahu-
danudayapangadi niriksisuvana jaganmayana || 5 ||

Leave a comment