Karunisu Kamalesa Sarvesa | Haridasini Saraswati Bai

Composer : Haridasini Saraswati Bai
Anikita : SriSrinivasa
Book ref : Samagra Dasa Sahitya Tirumalambha and Other women – Saraswatibai’s Composition – ಸರಸ್ವತಿಬಾಯಿಯವರ ಕೀರ್ತನೆಗಳು

ಕರುಣಿಸು ಕಮಲೇಶ ಸರ್ವೇಶ
ಕರುಣಿಸು ಕಮಲೇಶ || PA ||

ಶರಣಾಗತ ರಕ್ಷಕ ವೆಂಕಟೇಶ
ನಿರುತದಿ ಪ್ರಾರ್ಥಿಪೆ ಲಕ್ಷ್ಮೀಶ || a PA ||

ವೇದ ಶಾಸ್ತ್ರ ಪುರಾಣವನರಿಯೆ
ಆದಿ ಮೂರುತಿ ಪ್ರಹ್ಲಾದವರದನೆ
ಆದರದಲಿ ನಿನ್ನ ಸ್ತುತಿಸುವೆ ದೇವ
ಮೋದದಿಂದಲಿ ಕಾಯೋ ಪಾದಸೇವಕರಾ || 1 ||

ಜಪವ ನಾನರಿಯೆ ತಪವ ನಾನರಿಯೆ
ಉಪವಾಸ ವ್ರತಮೊದಲರಿಯೆ ದೇವಾ
ಅಪರಿಮಿತ ಪಾಪ ಗಳಿಶಿಹೆನೋ
ಸುಪವಿತ್ರನನು ಮಾಡೊ ಅಪಾರ ಮಹಿಮಾ || 2 ||

ನಿನ್ನ ನಂಬಿಹೆನೊ ಅನ್ಯರನರಿಯೆನೊ
ಎನ್ನಪರಾಧವ ಮನ್ನಿಸೊ ದೊರೆಯೆ
ಚೆನ್ನಿಗ ಶ್ರೀ ಶ್ರೀನಿವಾಸನ ಸ್ತುತಿಪೆನೊ
ಇನ್ನು ಸಂಶಯವ್ಯಾಕೊ ಪನ್ನಗಾದ್ರಿವಾಸ || 3 ||

karunisu kamalesa sarvesa
karunisu kamalesa || PA ||

saranagata raksaka venkatesa
nirutadi prarthipe laksmisa || a PA ||

veda sastra puranavanariye
adi muruti prahladavaradane
adaradali ninna stutisuve deva
modadindali kayo padasevakara || 1 ||

japava nanariye tapava nanariye
upavasa vratamodalariye deva
aparimita papa galisiheno
supavitrananu mado apara mahima || 2 ||

ninna nambiheno an’yaranariyeno
ennaparadhava manniso doreye
cenniga sri srinivasana stutipeno
innu sansayavyako pannagadrivasa || 3 ||

Leave a comment