Srimad Ramayana Mangalam

Composer : Haridaisini Yadugiriyamma
Ankita : venkatakrishna

Book Ref : Samagra Dasa Sahitya Samputa Volume 18 Part 4 on Tirumalambha and Other women Haridasini’s. This book has almost 900 pages, and this is the 52nd song.

Most resources online have just 52 paragraphs, the book has 55 and I have posted the entire complete lyrics below. This has the entire Ramayana in the composition.

This is a big composition, so I just picked a few stanzas and recorded just for the tune.

ಶ್ರೀಮದ್ರಾಮಾಯಣ ಮಂಗಳಂ

ಮಂಗಳಂ ಮಹಾನುಭಾವಗೆ ಮಂಗಳಂ ಲೋಕಮಾತೆ ಸೀತೆಗೆ
ಮಂಗಳಂ ಶತ್ರುಘ್ನ ಭರತಗೆ ಮಂಗಳಂ ಸೌಮಿತ್ರಿರಾಮಗೆ || PA ||

ಸುರರು ಅಸುರರ ಬಾಧೆಗೋಸ್ಕರ ಶರಧಿಶಯನನ ಸ್ತುತಿಯಮಾಡಲು
ದಶರಥನ ಉದರದಲಿ ಜನಿಸುವೆನೆಂದು ವರವನಿತ್ತ ರಾಮಚಂದ್ರಗೆ || 1 ||

ಪುತ್ರಕಾಮೇಷ್ಟಿಯನು ಮಾಡಲು ಶತ್ರುಘ್ನ ಸೌಮಿತ್ರಿ ಪತ್ನಿಯರು ಗರ್ಭವನು ಧರಿಸಲು
ಭರತಸಹವಾಗಿ ಜನಿಸಿದ ರಾಮಚಂದ್ರಗೆ || 2 ||

ಜಾತಕರ್ಮವು ನಾಮಕರಣವು ಚೌಲ ಉಪನಯನಗಳ ಮಾಡಿ ವಿಶ್ವಾ-
ಮಿತ್ರರೊಡನೆ ಸಕಲ ವಿದ್ಯವ ಕಲಿಯೆ ಪೊರಟ ರಾಮಗೆ || 3 ||

ಬಲ ಅತಿಬಲವೆಂಬ ವಿದ್ಯವ ವಿಶ್ವಾಮಿತ್ರರೊಡನೆ
ಕಲಿತು ಅಶ್ವಿನಿದೇವತೆಗಳಂದದಿ ಬಂದ ಸೌಮಿತ್ರಿರಾಮ್ರಗೆ || 4 ||

ಭರದಲಿ ಅನಂಗನಾಶ್ರಮವನು ಪೊಕ್ಕು ಸರಯು ನದಿಯನು ದಾಟಿ
ಬರದೂಷಣಜಾ ದೇಶದೊಳಗುಳ್ಳ ತಾಟಕಾಂತಕ ರಾಮಚಂದ್ರಗೆ || 5 ||

ಅಸ್ತ್ರವನ್ನು ಗ್ರಹಿಸಿ ಬೇಗನೆ ಸಿದ್ಧಾಶ್ರಮಕ್ಕೆ ನಡೆತಂದು ಸುಭಾಹುವ-
ನು ಸಂಹರಿಸಿ ಭರದಿ ಮಾರೀಚನ ಹಾರಿಸಿದ ರಾಮಗೆ || 6 ||

ವಿಶ್ವಾಮಿತ್ರರ ಯಜ್ಞ ಪಾಲಿಸಿ ಕುಶನ ವಂಶವಿಸ್ತಾರವ ಕೇಳಿ
ಆಸರ [ಯು]ನದಿಯ ದಾಟಿ ಭರದದಿತಿಯಾಶ್ರಮಕೆ ಬಂದ ರಾಮಗೆ || 7 ||

ಮರುತ್ತ ಜನ್ಮವ ಕೇಳಿ ಅಹಲ್ಯೆಯನ್ನು ಪಾವನ ಮಾಡಿ
[ವರ] ಸುಮತಿಯೊಡನೆ ಮಾತನಾಡಿ ಜನಕನ ಯಜ್ಞಕೆ ಬಂದ ರಾಮಗೆ ||8 ||

ಜನಕ ವಂದಿಸಿ ಧನ್ಯನೆನ್ನಲು ವಿಶ್ವಾಮಿತ್ರರು ವೃತ್ತಾಂತ ಹೇಳಿ
ಧನುವ ತರಿಸಲು ನೋಡಿ ಕ್ಷಣದಿಮುರಿದಾ ರಾಮಚಂದ್ರಗೆ || 9 ||

ಸುರರು ಜಯಜಯವೆಂದು ಸ್ತುತಿಸಲು ಧರಣಿಸುತೆಯ ಕರವ ಪಿಡಿದು
ಶ್ರುತಕೀರ್ತಿ ಮಾಂಡವಿ ಊರ್ಮಿಳೆ ಅನುಜರೊಡನೆ ಪೊರಟ ರಾಮಗೆ || 10 ||

ಮಾರ್ಗದಲಿ ಭಾರ್ಗವನ ಬಲವನು ಕಳದು ಅಯೋದ್ಯೆಗೆ ಬಂದು
[ಬೇಗ]ಮಾತಾಪಿತರ ಮಾತನಡೆಸಿ ಪ್ರೀತಿತೋರಿದ ಸೀತಾರಾಮಗೆ || 11 ||

ಕಂಡವರ ಮನದಲ್ಲಿ ರಮಿಸುವ ಪುಂಡರೀಕಾಕ್ಷನಿಗೆ ರಾಜ್ಯವ
ಕೊಡುವೆನೆ[ನುತ] ದಶರಥ ವ್ರತವನಾಚರಿಸಿದ ರಾಮಚಂದ್ರಗೆ || 12 ||

ಕೈಕೆ ಪೂರ್ವದ ವರವ ಸ್ಮರಿಸಿ ಭರತನಿಗೆ ರಾಜ್ಯವನು ಬೇಡಿ ರಾಮನರ
ಣ್ಯಕ್ಕೆ ಪೋಗೆನೆ ಬೇಗ ಪೊರಟ ಶ್ರೀರಾಮಚಂದ್ರಗೆ |\ 13 ||

ಮಾತೆಯನು ಬಹುವಿಧದಿ ಮನ್ನಿಸಿ ಪಿತನ ಪ್ರತಿಜ್ಞೆಯನು ಪಾಲಿಸಿ
ಸೀತೆಲಕ್ಷ್ಮಣರೊಡನೆ ವನವಾಸಕ್ಕೆ ಪೊರಟ ರಾಮಚಂದ್ರಗೆ || 14 ||

ಪುರದ ಜನರನು ಸಂತವಿಟ್ಟು ಗುಹನ ಸಖ್ಯದಿ ನದಿಯ ದಾಟಿ
ಭರದಿ ಭಾರದ್ವಾಜರ ಕಂಡು ಚಿತ್ರಕೂಟಕ್ಕೆ ಬಂದ ರಾಮಗೆ || 15 ||

ಅರಸು ಸ್ವರ್ಗವನೈದೆ ಭರತನಕರಸಿ ಕರ್ಮವನೆಲ್ಲ ಕಳೆದು
[ವರ] ಮಾತೆಗೆ ಭಾಷೆ ಕೊಟ್ಟು ತಮ್ಮನಾಲಿಂಗಿಸಿದ ರಾಮಗೆ || 16 ||

ಭರತನಂಕದೊಳಿಟ್ಟು ಪ್ರೇಮದಿ ಮನ್ನಸಿ ಮೃದುವಾಕ್ಯದಿಂದ
ಗುರುಗಳನುಮತದಿಂದ ಪಾದುಕೆಯಿತ್ತು ಕಳುಹಿದ ರಾಮಚಂದ್ರಗೆ || 17 ||

ಬೇಗನೆ ಚಿತ್ರಕೂಟವ ಬಿಟ್ಟು ಅತ್ರಿ ಯಾಶ್ರಮಕೆ ಬಂದು
ಅಂಗರಾಗಾರ್ಪಣವನೆಲ್ಲ ಅಂಗೀಕರಿಸಿದ ರಾಮಚಂದ್ರಗೆ || 18 ||

ದಂಡಕಾರಣ್ಯವನ್ನು ಪೊಕ್ಕು ಉದ್ದಂಡವಿರಾಧನ್ನ ಕೊಂದು
ಕಂಡು ಇಂದ್ರನ ಶರಭಂಗರಿಗೆ ಮುಕ್ತಿಯನಿತ್ತ ಶ್ರೀರಾಮಚಂದ್ರಗೆ || 19 ||

ಋಷಿಗಳಿಗೆ ಅಭಯವನು ಇತ್ತು ಲೋಕಮಾತೆಯ ನುಡಿಯ ಕೇಳಿ
ಋಷಿಮಂಡಲವನು ಪೊಕ್ಕು ಬಂದು ಸುತೀಕ್ಷ್ಣರ ಕಂಡ ರಾಮಗೆ || 20 ||

ಸುತೀಕ್ಷ್ಣರ ವಾಕ್ಯವ ಕೇಳಿ ಅಗಸ್ತ್ಯರಾಶ್ರಮಕೆ ಬಂದು
ಅಸ್ತ್ರವನು ಕೊಡಲು ಗ್ರಹಿಸಿ ಪಂಚವಟಿಗೆ ಬಂದ ರಾಮಗೆ || 21 ||

ಶೂರ್ಪನಖಿ ರಘುಪತಿಯ ಮೋಹಿಸೆ ಕರ್ಣನಾಸಿಕವನ್ನು ಛೇದಿಸಿ
ದುರುಳ ಖರದೂಷಣರ ಕೊಂದು ಸತಿಯನಾಲಿಂಗಿಸಿದ ರಾಮಗೆ |\ 22 ||

ದುರುಳ ಖಳನು ಜಾನಕಿಯ ಕದ್ದೊಯ್ಯೆ ಮಾರಿಚನ್ನ ಕೊಂದು
ಬರುತ ಮಾರ್ಗದಿ ಗೃಧ್ರರಾಜಗೆ ಮುಕ್ತಿಯಿತ್ತ ಶ್ರೀರಾಮಚಂದ್ರಗೆ || 23 ||

ಕಬಂಧನಾ ವಾಕ್ಯವನು ಕೇಳಿ ಮಾರ್ಗದಲಿ ಅಯಮುಖಿಯ ಭಂಗಿಸಿ
ಶಬರಿ ಭಕ್ತಿಯೊಳಿತ್ತ ಫಲವನು ಸವಿದು ಮುಕ್ತಿಯನಿತ್ತ ರಾಮಗೆ || 24 ||

ಸೀತೆಯರಸುತ ಮಾರ್ಗದಲಿ ಋಷ್ಯಮೂಕಪರ್ವತವ ಸೇರಿ ಪಂ-
ಪಾತೀರದಿ ತಮ್ಮನೊ[ಂದಿ]ಗೆ ನಿಂತ ಶ್ರೀರಘುರಾಮಚಂದ್ರಗೆ || 25 ||

ಪಂಪಾಪುಳಿನದ ವನವಕಂಡು ಪಂಕಜಾಕ್ಷಿಯ ನೆನೆದು ವಿರಹ
[ತಾಪದರೆ] ಬಂದ ಆಂಜನೇಯಗೆ ಸಖ್ಯ ನೀಡಿದ ರಾಮಚಂದ್ರಗೆ || 26 ||

ಅಭಯವನು ಇತ್ತು ರವಿಜಗೆ ಏಳು ತಾಳೇಮರವ ಛೇದಿಸಿ ದುಂ-
ದುಭಿಯ ಕಾಯವನು ಒಗೆದ ಇಂದಿರಾಪತಿ ರಾಮಚಂದ್ರಗೆ || 27 ||

ಇಂದ್ರಸುತನು ರವಿಜನೊಡನೆ ದ್ವಂದ್ವಯುದ್ಧವ ಮಾಡುತಿರಲು
ಒಂದುಬಾಣದಿಂದ ವಾಲಿಯ ಕೊಂದು ಕೆಡಹಿದ ರಾಮಚಂದ್ರಗೆ || 28 ||

ಸುಗ್ರೀವಗೆ ಪಟ್ಟವಕಟ್ಟಿ ಅಷ್ಟದಿಕ್ಕಿಗೆ ಕಳುಹಿಕಪಿಗಳ ಹನುಮಗೆ
ಮುದ್ರೆಯುಂಗುರವಿತ್ತು [ಅ]ಸಾಧ್ಯ ಇವನೆಂತೆಂದ ರಾಮಗೆ || 29 ||

ಮಾರ್ಗದಲಿ ಸ್ವಯಂಪ್ರಭೆಯ ಕಂಡು ಪ್ರಾಯೋಪವೇಶವ ಮಾಡಿ
ಹರುಷದಿ ಅಂಗದ ಸಂಪಾತಿ ವಾಕ್ಯವಕೇಳಿ ಸಮುದ್ರತೀರದಿ ಬೆಳೆದ ಹನುಮಗೆ || 30 ||

ಶತ್ರುಪಟ್ಟಣವ ಕಂಡು ಛಾಯೆಯ ಕುಟ್ಟಿ ಸುರಚಿಯುಪಾಯದಿಮನ್ನಿ
ಸುತ್ತ ಮೈನಕನ ಭರದಲಿ ಲಂಕಿಣಿಯನಡಗಿಸಿದ ಹನುಮಗೆ || 31 ||

ಲೋಕಪಾಲಕರನ್ನು ವಂದಿಸಿ ಅರಸಿ ಜಾನಕಿಯನ್ನು [ಸಂಧಿಸಿ]
ಅಶೋಕವನದಲಿ ಲೋಕಮಾತೆಗೆ ಮುದ್ರೆಯುಂಗುರವಿತ್ತ [ವೀರ] ಹನುಮಗೆ || 32 ||

ಮಣಿಯಗ್ರಹಿಸಿ ವನವಭಂಗಿಸಿ ಕೊಂದುಅಕ್ಷನ ಸಿಕ್ಕಿಅಸ್ತ್ರದಿ ದುರುಳ ರಾ
ವಣನ ನಿಂದಿಸಿ ಪುರವಸುಟ್ಟಾ ವೀರಹನುಮಗೆ || 33 ||

ಸೀತೆಯೊಡನೆ ಗುರುತಕೇಳಿ ಸಮುದ್ರತೀರಕೆ ಬಂದು ಬೇಗನೆ ಜಾಂಬ
ವಂತ ಅಂಗದರ ಕೂಡಿ ಮಧುವನವ ಭಂಗಿಸಿದ ಹನುಮಗೆ || 34 ||

ಕಂಡೆ ಲೋಕಮಾತೆಯನನ್ನೆನ್ನುತ ಬಂದು ಮುದದಿ ವಂದಿಸಿ ಇತ್ತ
ಚೂಡಾಮಣಿಯಲ್ಲಿ ಸೀತೆನ ನೆನದು ತಾಪದಿ ಹನುಮನನಾಲಿಂಗಿಸಿದವಗೆ |\ 35 ||

[ಯೋಜಿಸಿ] ಶುಭಲಗ್ನ ಶುಭವಾರ[ಲಂಕೆಗೆ] ರವಿಜ ಕಪಿಗಳ ಸಹಿತ
ಪೊರಟು ಆಂಜನೇಯನನೇರಿ ಹರುಷದಿ ಸಮುದ್ರತೀರಕೆ ಬಂದ ರಾಮಗೆ || 36 ||

[ಭಕ್ತ] ವಿಭೀಷಣಗೆ ಅಭಯವನಿತ್ತು ಶರಧಿಗೆ ಸೇತುವೆಯನ್ನು ಬಂಧಿಸಿ
ಮುತ್ತಿ ಲಂಕಾಪುರವ ಸಂಧಿಗೆ ಅಂಗದನ ಕಳುಹಿಸಿದ ರಾಮಗೆ || 37 ||

ಇಂದ್ರ[ಜಿತ್ತು]ವೊಡನೆ ಕಾದಿ ಸರ್ಪಾಸ್ತ್ರದಿಂದ ಬಿಡಿಸಿಕೊಂಡು
[ಆ]ದುರುಳ ರಾವಣನ ನಡುಗಿಸಿ ಕಿರೀಟವನು ಭಂಗಿಸಿದ ರಾಮಗೆ || 38 ||

ಕುಂಭಕರ್ಣನೊಡನೆ ಕಾದಿ ರವಿಜ ಕಿವಿಮೂಗನ್ನು ಕಡಿಯಲಾ
ಕುಂಭಕರ್ಣನ ತುಂಡುತುಂಡಾಗಿ ಕೊಂದುಕೆಡಹಿದ ರಾಮಚಂದ್ರಗೆ || 39 ||

ಕೊಂದು ವಜ್ರದಂಷ್ಟ್ರ ಆಕಂಪ ದೇವಾಂತಕ ನರಾಂತಕರನ್ನು ಮ
ಹೋದರ ಮಹಾಪಾಶ್ರ್ವ ಅತಿಕಾಯ ತ್ರಿಶಿರಸ್ಸನ್ನು ಕೊಂದ ರಾಮಗೆ || 40 ||

ಮಾಯೆಯುದ್ಧದಿ ಮೇಘನಾಥನು [ಅನುಜನ] ಬ್ರಹ್ಮಾಸ್ತ್ರದಲಿ ಕಟ್ಟಲು
ವಾಯುನಂದನನಿಂದ ಸಂಜೀವನವ ತರಿಸಿದ ರಾಮಚಂದ್ರಗೆ || 41 ||

ಮಾಯಾಸೀತೆಯ ಶಿರವನರಿಯಲು ವಿಭೀಷಣನ ಉ
ಪಾಯದಿಂದ ಇಂದ್ರಜಿತ್ತು ಶಿರವಕಡಿದ ತಮ್ಮನಾಲಂಗಿಸಿದ ರಾಮಗೆ |\ 42 ||

ಮೂಲಬಲವನು ಕಡಿದು ರಾವಣನೊಡನೆ ಯುದ್ಧವ ಯೋಚಿಸೆ
ಕೇಳಿ ಮಾತಲಿಯ ವಾಕ್ಯವನು ಬ್ರಹ್ಮಾಸ್ತ್ರದಿಂ [0ದವನತಲೆ] ಕಡಿದ ರಾಮಗೆ || 43 ||

ರಾವಣಾನೆಂಬ ಗಂಧಹಸ್ತಿಯ ರಾಮಕೇಸರಿ ಬಂದು ಮುರಿಯಲು
ಪೂ[ವ] ಮಳೆಯನು ಸುರರು ಕರೆಯಲು ಶಿರದಿ ಧರಿಸಿದ ರಾಮಚಂದ್ರಗೆ |\ 44 ||

ವಿಭೀಷಣಗೆ ಪಟ್ಟವನು ಕಟ್ಟಿ ಸೀತೆಯೊಡನೆ ಪ್ರತಿಜ್ಞೆ ಮಾಡಿ
ರೆ ಬ್ರಹ್ಮರುದ್ರಾದಿಗಳು ಸ್ತುತಿಸಲು ತಂದೆಗೆರಗಿದ ರಾಮಚಂದ್ರಗೆ || 45||

ಸೀತೆಯಂಕದೊಳಿಟ್ಟು ಕಪಿಗಳಸಹಿತ ಪುಷ್ಪಕವೇರಿ ಭರದಿ
[ಬರುತ್ತ] ಭಾರದ್ವಾಜರಿಗೆರಗಿ ಭರತನ ಮನ್ನಿಸಿದ ರಾಮಗೆ || 46 ||

ಕೈಕೆಸುತ ಕೈಮುಗಿದು ಕಿಶೋರ ಭಾರವ ತಾಳಲಾಗದೆಂದಾ ಳುತ
[ಲಾ]ಯಿತ್ತ ರಾಜ್ಯವನ್ನು ಕೊಡಲು ಗ್ರಹಿಸಿದ ರಾಮಚಂದ್ರಗೆ || 47 ||

ಉಟ್ಟ ಮಡಿಯ ಜಟೆಯನುತಾ ಶೋಧಿಸೆ ಸೀತೆ ಸಕಲಾಭರಣ
ತೊಟ್ಟು ಸುಗ್ರೀವ ಸಕಲರೊಡನೆ ರಥವನೇರಿದ ರಾಮಚಂದ್ರಗೆ || 48 ||

ಸರಮೆಪತಿ ಸೌಮಿತ್ರಿ ಚಾಮರ ಪಿಡಿಯೆ ಶತ್ರುಘ್ನ ಛತ್ರಿಯನು
ಭರತ ಸಾರಥ್ಯವನು ಮಾಡಲು ಪುರಕೆತೆರಳಿದ ರಾಮಚಂದ್ರಗೆ |\ 49 ||

ರಾಜಗೃಹವನು ತೋರಿ ರವಿಜಗೆ ಶರಧಿಯುದಕಗಳೆಲ್ಲ ತರಿಸಿ
[ವಿರಾಜಿಸಿ] ಪೀಠದಿ ಸೀತೆಯೊಡನೆ ವೊಪ್ಪಿದಾ ರಘುರಾಮಚಂದ್ರಗೆ |\ 50 ||

ವಸಿಷ್ಠ ಮೊದಲಾದ ಸಪ್ತ ಋಷಿಗಳು ಲಕ್ಷ್ಮೀಪತಿಗಭಿಷೇಕ ಮಾಡಲು
[ವಿಶಿಷ್ಟ] ಕಿರೀಟವನು ಧರಿಸಿದ ಪಟ್ಟಾಭಿಮೂರುತಿ ರಾಮಚಂದ್ರಗೆ || 51 ||

ವಾಮಭಾಗದಿ ಸೀತೆ ಭರತ ಶತ್ರುಘ್ನ ದಕ್ಷಿಣದಲ್ಲಿ ಲಕ್ಷ್ಮಣ ವಾಯುನಂದನ
[ಕೈ ಮುಗಿದು] ಹರುಷದಿಂದಲೆ ಪಾದ ಪಿಡಿದಿಹ ರಾಮಚಂದ್ರಗೆ || 52 ||

ಸುಗ್ರೀವ ಅಂಗದ ಜಾಂಬವಾದಿಗಳು ವಿಭೀಷಣನು ನಳ ನೀಲ ಮುಖ್ಯರು

[ಹಿಗ್ಗುತ] ಸುರರು ಭೂಸುರರೆಲ್ಲ ಲಾಜಾಕ್ಷತೆಯ ತಳಿದರು ರಾಮಚಂದ್ರಗೆ || 53 ||

ರವಿಜಗೆ ಹಾರ ಅಂಗದಗೆ ಬಾಪುರಿ ದೇವಮಾಲಿಕೆಯಿತ್ತು ಹನುಮಗೆ
[ಸುವಿಭೀಷಣಗೆ] ರಂಗನಾಥನ ಇತ್ತು ಕಳುಹಿದ ರಾಮಚಂದ್ರಗೆ || 54 ||

ಧರೆಯ ಧರ್ಮದಿ ಪೊರೆದು ಪ್ರಜೆಗಳ ಪುತ್ರರಂದದಿ ಪಾಲಿಸುತ
[ವರ] ಅಶ್ವಮೇಧವ ರಚಿಸಿ ಶೇಷಾದ್ರಿಯಲಿ ನೆಲಸಿದ ರಾಮಚಂದ್ರಗೆ || 55 ||

Maṅgaḷaṁ mahānubhāvage maṅgaḷaṁ lōkamāte sītege maṅgaḷaṁ śatrughna bharatage maṅgaḷaṁ saumitrirāmage || PA ||

suraru asurara bādhegōskara śaradhiśayanana stutiyamāḍalu daśarathana udaradali janisuvenendu varavanitta rāmacandrage |\ 1 ||

putrakāmēṣṭiyanu māḍalu śatrughna saumitri patniyaru garbhavanu dharisalu bharatasahavāgi janisida rāmacandrage || 2 ||

jātakarmavu nāmakaraṇavu caula upanayanagaḷa māḍi viśvā- mitraroḍane sakala vidyava kaliye poraṭa rāmage || 3 ||

bala atibalavemba vidyava viśvāmitraroḍane kalitu aśvinidēvategaḷandadi banda saumitrirāmrage || 4 ||

bharadali anaṅganāśramavanu pokku sarayu nadiyanu dāṭi baradūṣaṇajā dēśadoḷaguḷḷa tāṭakāntaka rāmacandrage || 5 ||

astravannu grahisi bēgane sid’dhāśramakke naḍetandu subhāhuva- nu sanharisi bharadi mārīcana hārisida rāmage || 6 ||

viśvāmitrara yajña pālisi kuśana vanśavistārava kēḷi āsara [yu]nadiya dāṭi bharadaditiyāśramake banda rāmage || 7 ||

marutta janmava kēḷi ahalyeyannu pāvana māḍi [vara] sumatiyoḍane mātanāḍi janakana yajñake banda rāmage ||8 ||

janaka vandisi dhan’yanennalu viśvāmitraru vr̥ttānta hēḷi dhanuva tarisalu nōḍi kṣaṇadimuridā rāmacandrage || 9 ||

suraru jayajayavendu stutisalu dharaṇisuteya karava piḍidu śrutakīrti māṇḍavi ūrmiḷe anujaroḍane poraṭa rāmage || 10 ||

mārgadali bhārgavana balavanu kaḷadu ayōdyege bandu [bēga]mātāpitara mātanaḍesi prītitōrida sītārāmage || 11 ||

kaṇḍavara manadalli ramisuva puṇḍarīkākṣanige rājyava koḍuvene[nuta] daśaratha vratavanācarisida rāmacandrage || 12 ||

kaike pūrvada varava smarisi bharatanige rājyavanu bēḍi rāmanara ṇyakke pōgene bēga poraṭa śrīrāmacandrage |\ 13 ||

māteyanu bahuvidhadi mannisi pitana pratijñeyanu pālisi sītelakṣmaṇaroḍane vanavāsakke poraṭa rāmacandrage || 14 ||

purada janaranu santaviṭṭu guhana sakhyadi nadiya dāṭi bharadi bhāradvājara kaṇḍu citrakūṭakke banda rāmage || 15 ||

arasu svargavanaide bharatanakarasi karmavanella kaḷedu [vara] mātege bhāṣe koṭṭu tam’manāliṅgisida rāmage || 16 ||

bharatanaṅkadoḷiṭṭu prēmadi mannasi mr̥duvākyadinda gurugaḷanumatadinda pādukeyittu kaḷuhida rāmacandrage || 17 ||

bēgane citrakūṭava biṭṭu atri yāśramake bandu aṅgarāgārpaṇavanella aṅgīkarisida rāmacandrage || 18 ||

daṇḍakāraṇyavannu pokku uddaṇḍavirādhanna kondu kaṇḍu indrana śarabhaṅgarige muktiyanitta śrīrāmacandrage || 19 ||

r̥ṣigaḷige abhayavanu ittu lōkamāteya nuḍiya kēḷi r̥ṣimaṇḍalavanu pokku bandu sutīkṣṇara kaṇḍa rāmage || 20 ||

sutīkṣṇara vākyava kēḷi agastyarāśramake bandu astravanu koḍalu grahisi pan̄cavaṭige banda rāmage || 21 ||

śūrpanakhi raghupatiya mōhise karṇanāsikavannu chēdisi duruḷa kharadūṣaṇara kondu satiyanāliṅgisida rāmage |\ 22 ||

duruḷa khaḷanu jānakiya kaddoyye māricanna kondu baruta mārgadi gr̥dhrarājage muktiyitta śrīrāmacandrage || 23 ||

kabandhanā vākyavanu kēḷi mārgadali ayamukhiya bhaṅgisi śabari bhaktiyoḷitta phalavanu savidu muktiyanitta rāmage || 24 ||

sīteyarasuta mārgadali r̥ṣyamūkaparvatava sēri paṁ- pātīradi tam’mano[ndi]ge ninta śrīraghurāmacandrage || 25 ||

pampāpuḷinada vanavakaṇḍu paṅkajākṣiya nenedu viraha [tāpadare] banda ān̄janēyage sakhya nīḍida rāmacandrage || 26 ||

abhayavanu ittu ravijage ēḷu tāḷēmarava chēdisi duṁ- dubhiya kāyavanu ogeda indirāpati rāmacandrage || 27 ||

indrasutanu ravijanoḍane dvandvayud’dhava māḍutiralu ondubāṇadinda vāliya kondu keḍahida rāmacandrage || 28 ||

sugrīvage paṭṭavakaṭṭi aṣṭadikkige kaḷuhikapigaḷa hanumage mudreyuṅguravittu [a]sādhya ivanentenda rāmage || 29 ||

mārgadali svayamprabheya kaṇḍu prāyōpavēśava māḍi haruṣadi aṅgada sampāti vākyavakēḷi samudratīradi beḷeda hanumage || 30 ||

śatrupaṭṭaṇava kaṇḍu chāyeya kuṭṭi suraciyupāyadimanni sutta mainakana bharadali laṅkiṇiyanaḍagisida hanumage || 31 ||

lōkapālakarannu vandisi arasi jānakiyannu [sandhisi] aśōkavanadali lōkamātege mudreyuṅguravitta [vīra] hanumage || 32 ||

maṇiyagrahisi vanavabhaṅgisi kondu’akṣana sikki’astradi duruḷa rā vaṇana nindisi puravasuṭṭā vīrahanumage || 33 ||

sīteyoḍane gurutakēḷi samudratīrake bandu bēgane jāmba vanta aṅgadara kūḍi madhuvanava bhaṅgisida hanumage || 34 ||

kaṇḍe lōkamāteyanannennuta bandu mudadi vandisi itta cūḍāmaṇiyalli sītena nenadu tāpadi hanumananāliṅgisidavage |\ 35 ||

[yōjisi] śubhalagna śubhavāra[laṅkege] ravija kapigaḷa sahita poraṭu ān̄janēyananēri haruṣadi samudratīrake banda rāmage || 36 ||

[bhakta] vibhīṣaṇage abhayavanittu śaradhige sētuveyannu bandhisi mutti laṅkāpurava sandhige aṅgadana kaḷuhisida rāmage || 37 ||

indra[jittu]voḍane kādi sarpāstradinda biḍisikoṇḍu [ā]duruḷa rāvaṇana naḍugisi kirīṭavanu bhaṅgisida rāmage || 38 ||

kumbhakarṇanoḍane kādi ravija kivimūgannu kaḍiyalā kumbhakarṇana tuṇḍutuṇḍāgi kondukeḍahida rāmacandrage || 39 ||

kondu vajradanṣṭra ākampa dēvāntaka narāntakarannu ma hōdara mahāpāśrva atikāya triśiras’sannu konda rāmage || 40 ||

Māyeyud’dhadi mēghanāthanu [anujana] brahmāstradali kaṭṭalu vāyunandananinda san̄jīvanava tarisida rāmacandrage || 41 ||

māyāsīteya śiravanariyalu vibhīṣaṇana u pāyadinda indrajittu śiravakaḍida tam’manālaṅgisida rāmage |\ 42 ||

mūlabalavanu kaḍidu rāvaṇanoḍane yud’dhava yōcise kēḷi mātaliya vākyavanu brahmāstradiṁ [0davanatale] kaḍida rāmage || 43 ||

rāvaṇānemba gandhahastiya rāmakēsari bandu muriyalu pū[va] maḷeyanu suraru kareyalu śiradi dharisida rāmacandrage |\ 44 ||

vibhīṣaṇage paṭṭavanu kaṭṭi sīteyoḍane pratijñe māḍi re brahmarudrādigaḷu stutisalu tandegeragida rāmacandrage || 45||

sīteyaṅkadoḷiṭṭu kapigaḷasahita puṣpakavēri bharadi [barutta] bhāradvājarigeragi bharatana mannisida rāmage || 46 ||

kaikesuta kaimugidu kiśōra bhārava tāḷalāgadendā ḷuta [lā]yitta rājyavannu koḍalu grahisida rāmacandrage || 47 ||

uṭṭa maḍiya jaṭeyanutā śōdhise sīte sakalābharaṇa toṭṭu sugrīva sakalaroḍane rathavanērida rāmacandrage || 48 ||

saramepati saumitri cāmara piḍiye śatrughna chatriyanu bharata sārathyavanu māḍalu puraketeraḷida rāmacandrage |\ 49 ||

rājagr̥havanu tōri ravijage śaradhiyudakagaḷella tarisi [virājisi] pīṭhadi sīteyoḍane voppidā raghurāmacandrage |\ 50 ||

vasiṣṭha modalāda sapta r̥ṣigaḷu lakṣmīpatigabhiṣēka māḍalu [viśiṣṭa] kirīṭavanu dharisida paṭṭābhimūruti rāmacandrage || 51 ||

vāmabhāgadi sīte bharata śatrughna dakṣiṇadalli lakṣmaṇa vāyunandana [kai mugidu] haruṣadindale pāda piḍidiha rāmacandrage || 52 ||

sugrīva aṅgada jāmbavādigaḷu vibhīṣaṇanu naḷa nīla mukhyaru [higguta] suraru bhūsurarella lājākṣateya taḷidaru rāmacandrage || 53 ||

ravijage hāra aṅgadage bāpuri dēvamālikeyittu hanumage [suvibhīṣaṇage] raṅganāthana ittu kaḷuhida rāmacandrage || 54 ||

dhareya dharmadi poredu prajegaḷa putrarandadi pālisuta [vara] aśvamēdhava racisi śēṣādriyali nelasida rāmacandrage || 55 ||

Plain English

Mangalam mahanubhavage mangalam lokamate sitege mangalam satrughna bharatage mangalam saumitriramage || PA ||

suraru asurara badhegoskara saradhisayanana stutiyamadalu dasarathana udaradali janisuvenendu varavanitta ramacandrage |\ 1 ||

putrakamestiyanu madalu satrughna saumitri patniyaru garbhavanu dharisalu bharatasahavagi janisida ramacandrage || 2 ||

jatakarmavu namakaranavu caula upanayanagala madi visva- mitrarodane sakala vidyava kaliye porata ramage || 3 ||

bala atibalavemba vidyava visvamitrarodane kalitu asvinidevategalandadi banda saumitriramrage || 4 ||

bharadali ananganasramavanu pokku sarayu nadiyanu dati baradusanaja desadolagulla tatakantaka ramacandrage || 5 ||

astravannu grahisi begane sid’dhasramakke nadetandu subhahuva- nu sanharisi bharadi maricana harisida ramage || 6 ||

visvamitrara yajna palisi kusana vansavistarava keli asara [yu]nadiya dati bharadaditiyasramake banda ramage || 7 ||

marutta janmava keli ahalyeyannu pavana madi [vara] sumatiyodane matanadi janakana yajnake banda ramage ||8 ||

janaka vandisi dhan’yanennalu visvamitraru vrttanta heli dhanuva tarisalu nodi ksanadimurida ramacandrage || 9 ||

suraru jayajayavendu stutisalu dharanisuteya karava pididu srutakirti mandavi urmile anujarodane porata ramage || 10 ||

margadali bhargavana balavanu kaladu ayodyege bandu [bega]matapitara matanadesi prititorida sitaramage || 11 ||

kandavara manadalli ramisuva pundarikaksanige rajyava koduvene[nuta] dasaratha vratavanacarisida ramacandrage || 12 ||

kaike purvada varava smarisi bharatanige rajyavanu bedi ramanara nyakke pogene bega porata sriramacandrage |\ 13 ||

mateyanu bahuvidhadi mannisi pitana pratijneyanu palisi sitelaksmanarodane vanavasakke porata ramacandrage || 14 ||

purada janaranu santavittu guhana sakhyadi nadiya dati bharadi bharadvajara kandu citrakutakke banda ramage || 15 ||

arasu svargavanaide bharatanakarasi karmavanella kaledu [vara] matege bhase kottu tam’manalingisida ramage || 16 ||

bharatanankadolittu premadi mannasi mrduvakyadinda gurugalanumatadinda padukeyittu kaluhida ramacandrage || 17 ||

begane citrakutava bittu atri yasramake bandu angaragarpanavanella angikarisida ramacandrage || 18 ||

dandakaranyavannu pokku uddandaviradhanna kondu kandu indrana sarabhangarige muktiyanitta sriramacandrage || 19 ||

rsigalige abhayavanu ittu lokamateya nudiya keli rsimandalavanu pokku bandu sutiksnara kanda ramage || 20 ||

sutiksnara vakyava keli agastyarasramake bandu astravanu kodalu grahisi pancavatige banda ramage || 21 ||

surpanakhi raghupatiya mohise karnanasikavannu chedisi durula kharadusanara kondu satiyanalingisida ramage |\ 22 ||

durula khalanu janakiya kaddoyye maricanna kondu baruta margadi grdhrarajage muktiyitta sriramacandrage || 23 ||

kabandhana vakyavanu keli margadali ayamukhiya bhangisi sabari bhaktiyolitta phalavanu savidu muktiyanitta ramage || 24 ||

siteyarasuta margadali rsyamukaparvatava seri pam- patiradi tam’mano[ndi]ge ninta sriraghuramacandrage || 25 ||

pampapulinada vanavakandu pankajaksiya nenedu viraha [tapadare] banda anjaneyage sakhya nidida ramacandrage || 26 ||

abhayavanu ittu ravijage elu talemarava chedisi dum- dubhiya kayavanu ogeda indirapati ramacandrage || 27 ||

indrasutanu ravijanodane dvandvayud’dhava madutiralu ondubanadinda valiya kondu kedahida ramacandrage || 28 ||

sugrivage pattavakatti astadikkige kaluhikapigala hanumage mudreyunguravittu [a]sadhya ivanentenda ramage || 29 ||

margadali svayamprabheya kandu prayopavesava madi harusadi angada sampati vakyavakeli samudratiradi beleda hanumage || 30 ||

satrupattanava kandu chayeya kutti suraciyupayadimanni sutta mainakana bharadali lankiniyanadagisida hanumage || 31 ||

lokapalakarannu vandisi arasi janakiyannu [sandhisi] asokavanadali lokamatege mudreyunguravitta [vira] hanumage || 32 ||

maniyagrahisi vanavabhangisi kondu’aksana sikki’astradi durula ra vanana nindisi puravasutta virahanumage || 33 ||

siteyodane gurutakeli samudratirake bandu begane jamba vanta angadara kudi madhuvanava bhangisida hanumage || 34 ||

kande lokamateyanannennuta bandu mudadi vandisi itta cudamaniyalli sitena nenadu tapadi hanumananalingisidavage |\ 35 ||

[yojisi] subhalagna subhavara[lankege] ravija kapigala sahita poratu anjaneyananeri harusadi samudratirake banda ramage || 36 ||

[bhakta] vibhisanage abhayavanittu saradhige setuveyannu bandhisi mutti lankapurava sandhige angadana kaluhisida ramage || 37 ||

indra[jittu]vodane kadi sarpastradinda bidisikondu [a]durula ravanana nadugisi kiritavanu bhangisida ramage || 38 ||

kumbhakarnanodane kadi ravija kivimugannu kadiyala kumbhakarnana tundutundagi kondukedahida ramacandrage || 39 ||

kondu vajradanstra akampa devantaka narantakarannu ma hodara mahapasrva atikaya trisiras’sannu konda ramage || 40 ||

Mayeyud’dhadi meghanathanu [anujana] brahmastradali kattalu vayunandananinda sanjivanava tarisida ramacandrage || 41 ||

mayasiteya siravanariyalu vibhisanana u payadinda indrajittu siravakadida tam’manalangisida ramage |\ 42 ||

mulabalavanu kadidu ravananodane yud’dhava yocise keli mataliya vakyavanu brahmastradim [0davanatale] kadida ramage || 43 ||

ravananemba gandhahastiya ramakesari bandu muriyalu pu[va] maleyanu suraru kareyalu siradi dharisida ramacandrage |\ 44 ||

vibhisanage pattavanu katti siteyodane pratijne madi re brahmarudradigalu stutisalu tandegeragida ramacandrage || 45||

siteyankadolittu kapigalasahita puspakaveri bharadi [barutta] bharadvajarigeragi bharatana mannisida ramage || 46 ||

kaikesuta kaimugidu kisora bharava talalagadenda luta [la]yitta rajyavannu kodalu grahisida ramacandrage || 47 ||

utta madiya jateyanuta sodhise site sakalabharana tottu sugriva sakalarodane rathavanerida ramacandrage || 48 ||

saramepati saumitri camara pidiye satrughna chatriyanu bharata sarathyavanu madalu puraketeralida ramacandrage |\ 49 ||

rajagrhavanu tori ravijage saradhiyudakagalella tarisi [virajisi] pithadi siteyodane voppida raghuramacandrage |\ 50 ||

vasistha modalada sapta rsigalu laksmipatigabhiseka madalu [visista] kiritavanu dharisida pattabhimuruti ramacandrage || 51 ||

vamabhagadi site bharata satrughna daksinadalli laksmana vayunandana [kai mugidu] harusadindale pada pididiha ramacandrage || 52 ||

sugriva angada jambavadigalu vibhisananu nala nila mukhyaru [higguta] suraru bhusurarella lajaksateya talidaru ramacandrage || 53 ||

ravijage hara angadage bapuri devamalikeyittu hanumage [suvibhisanage] ranganathana ittu kaluhida ramacandrage || 54 ||

dhareya dharmadi poredu prajegala putrarandadi palisuta [vara] asvamedhava racisi sesadriyali nelasida ramacandrage || 55 ||

Leave a comment