Archive for September 30th, 2015

JIvakusumavidu Misalu Ninage – ಜೀವಕುಸುಮವಿದು ಮೀಸಲು ನಿನಗೆ Lyrics

Contributed by Ms. Bhavana Damle. An amazing composition from Pujya Sree Swami Brahmananda Ji of Chinamaya Mission. Thanks, Bhavana for any amazing song and lyrics.

ರಚನೆ: ಪೂಜ್ಯ ಸ್ವಾಮಿ ಬ್ರಹ್ಮಾನಂದಜೀ, ಚಿನ್ಮಯ ಮಿಷನ್
ಗಾಯಕಿ : ಶ್ರೀಮತಿ ಶಾಂತಾ ಜಯತೀರ್ಥ

ಜೀವಕುಸುಮವಿದು ಮೀಸಲು ನಿನಗೆ
ಉದ್ಧರಿಸು ದೇವ ದೇವಾಧಿದೇವ |
ನೇಸರನ ಹೊಂಗಿರಣ ಸೋಂಕದ ಮುನ್ನ
ಸುಳಿಯುವ ತಂಗಾಳಿ ಸೋಂಕದ ಮುನ್ನ
ಉದ್ಧರಿಸು ದೇವ ದೇವಾಧಿದೇವ ||

ಪಾತಾಳದಿಂದಾಚೆ ನಿನ್ನಯ ಚರಣ
ಬ್ರಹ್ಮಾಂಡದಿಂದಾಚೆ ನಿನ್ನಯ ಮುಕುಟ
ಬೃಹತ್ತು ನೀನು ಅಲ್ಪತೆಯು ನಾನು
ಉದ್ಧರಿಸು ದೇವ ದೇವಾಧಿದೇವ ||

ಬೇಡನ ಕೊಂಡೊಯ್ದೆ ಕೈಲಾಸನಿಧಿಗೆ
ಕೂರಂಬು ಎಸೆದ ನರನಿಗೆ ಒಲಿದೆ
ಭಕ್ತಿಯ ಪ್ರಿಯ ನೀನು ಭಕ್ತರ ಪ್ರಿಯ ನೀನು
ಉದ್ಧರಿಸು ದೇವ ದೇವಾಧಿದೇವ ||

jIvakusumavidu mIsalu ninage
uddharisu dEva dEvAdhidEva |
nEsarana hoMgiraNa sOMkada munna
suLiyuva taMgALi sOMkada munna
uddharisu dEva dEvAdhidEva ||

pAtALadiMdAce ninnaya caraNa
brahmAMDadiMdAce ninnaya mukuTa
bRuhattu nInu alpateyu nAnu
uddharisu dEva dEvAdhidEva ||

bEDana koMDoyde kailAsanidhige
kUraMbu eseda naranige olide
Baktiya priya nInu Baktara priya nInu
uddharisu dEva dEvAdhidEva ||

Yakshagana in SBAT, Maryland – October 10th

The temple I often write about here in Maryland, USA is hosting artists from Karnataka, who are going to perform Yakshagana. If you are free and near the area, please do visit. I will try visiting as well. I have seen Yakshagana once and just love the art.

Details attached below.